ಕೊರೋನಾ ಆತಂಕದ ಮಧ್ಯೆಯೇ ಡಿಸೆಂಬರ್ 2ನೇ ವಾರದಿಂದ ಹಂತ ಹಂತವಾಗಿ ಶಾಲೆ, ಕಾಲೇಜು ತೆರೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಸರಣಿ ಸಭೆಗಳನ್ನು ನಡೆಸುತ್ತಿದೆ. ಈ ಮೂಲಕ ಕರ್ನಾಟಕದಲ್ಲಿ ಮತ್ತೆ ಶಾಲೆ ಪ್ರಾರಂಭದ ಸುದ್ದಿ ಹರಿದಾಡುತ್ತಿದ್ದು ವಿದ್ಯಾರ್ಥಿಗಳು ಯಾವಾಗಿನಿಂದ ಶಾಲಾ ಕಾಲೇಜುಗಳಿಗೆ ಹೊರಡಬೇಕು ಎನ್ನುವುದನ್ನು ತಿಳಿಯೋಣ.
ಅದರಲ್ಲೂ ಕರ್ನಾಟಕದಲ್ಲಿ ಮತ್ತೆ ಶಾಲೆ ಪ್ರಾರಂಭದ ಮಾಡುವ ಬಗ್ಗೆ ಸುದ್ದಿ ಬಂದಿದೆ. ಹಾಗಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳಬೇಕಿದೆ. ಹಾಗಾದ್ರೆ, ಶಾಲೆ ಪ್ರಾರಂಭ ಯಾವಾಗ? ಎಂಬ ಚಿಂತನೆ ಕೂಡಾ ಆರಂಭವಾಗಿದೆ. ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳು ಕಾಲ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದೀಗ ಕೊರೋನಾ ಕೊಂಚ ತಗ್ಗುತ್ತಿದ್ದಂತೆಯೇ ಶೈಕ್ಷಣಿಕ ಚಟುವಟಿಕೆಗಳು ಹಂತ-ಹಂತವಾಗಿ ಪ್ರಾರಂಭವಾಗಿವೆ. ಕಳೆದ ಎರಡು ದಿನಗಳಿಂದ ರಾಜ್ಯದ ಎಲ್ಲಾ ಬಿಇಓಗಳಿಂದ ಗ್ರೌಂಡ್ ರಿಪೋರ್ಟ್ ಸಂಗ್ರಹಿಸುತ್ತಿರುವ ಶಿಕ್ಷಣ ಇಲಾಖೆ ಇಂದು ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸಭೆ ನಡೆಸಿತು.
ಕ್ಯಾಮ್ಸ್, ಕುಸ್ಮಾ, ಸಿಬಿಎಸ್ಇ, ಐಸಿಎಸ್ಇ ಬೋರ್ಡ್ ಅಧಿಕಾರಿಗಳಿಂದ ಶಾಲೆ ಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಅಭಿಪ್ರಾಯ ಸಂಗ್ರಹಿಸಿದರು. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಶಾಲೆ ಶುರುವಾದ ಮೇಲೆ ಸೋಂಕು ಸ್ಫೋಟಗೊಂಡಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಶಿಕ್ಷಣ ಇಲಾಖೆ ನೀಡಿದೆ. ಇದೇ ವೇಳೆ ಖಾಸಗಿ ಶಾಲೆಗಳ ಒಕ್ಕೂಟ ಸರ್ಕಾರಕ್ಕೆ ಒಂದಿಷ್ಟು ಸಲಹೆಗಳನ್ನು ನೀಡಿದೆ .
ಈ ಮಧ್ಯೆ, ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡುವ ಮೂಲಕ ಶಾಲಾ-ಕಾಲೇಜು ಪ್ರಾರಂಭ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ. ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಖಾಸಗಿ ಶಾಲೆಗಳ ಒಕ್ಕೂಟದ ಸಲಹೆಯನ್ನೂ ಸಹ ಕೇಳಿದ್ದು ಖಾಸಗಿ ಶಾಲೆಗಳ ಒಕ್ಕೂಟವು ಈ ಕೆಲವು ಸಲಹೆಗಳನ್ನು ನೀಡಿದೆ. ಎ ಬಿ ಸಿ ಹೀಗೆ ಮೂರು ಹಂತಗಳಲ್ಲಿ ಶಾಲೆ ಆರಂಭಿಸಿ, ಮೊದಲ ಹಂತದಲ್ಲಿ 9ರಿಂದ ಪಿಯುಸಿವರೆಗೆ ಕ್ಲಾಸ್ ನಡೆಸಬೇಕು.
ಸಾಧಕ-ಬಾಧಕಗಳನ್ನು ಪರಿಶೀಲಿಸಿ ಪ್ರೈಮರಿ, ಮಿಡ್ಲ್ ಸ್ಕೂಲ್ ತೆರೆಯುವುದು. ಶೈಕ್ಷಣಿಕ ವರ್ಷದ ಅವಧಿಯನ್ನು ಬದಲಾಯಿಸುವುದು. ಡಿಸೆಂಬರ್ನಿಂದ ನವೆಂಬರ್ ವರೆಗೂ ಶೈಕ್ಷಣಿಕ ವರ್ಷ ಇರಲಿ ಎಂದು ತಿಳಿಸಿದೆ. ಆನ್ಲೈನ್ ಕ್ಲಾಸ್ ಜೊತೆಗೆ ಆಫ್ಲೈನ್ ತರಗತಿ ಮಾಡಲು ಅವಕಾಶ ನೀಡುವುದು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಾಳಿ ವ್ಯವಸ್ಥೆ ಶಾಲೆ ನಡೆಸಲು ಕ್ರಮ ವಹಿಸಬೇಕು ಹಾಗೂ ಕರೋನ ವಾರಿಯರ್ಸ್ ಶಿಕ್ಷಕರಿಗೆ ವಿಮೆ ಮಾಡಿಸಬೇಕು. ಶಾಲೆ ಆರಂಭ ಆಗುವುದಕ್ಕೂ ಮುನ್ನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕರೊನಾ ಟೆಸ್ಟ್ ಮಾಡಿಸಬೇಕು. ಎರಡು ಮತ್ತು ಮೂರನೇ ಕಂತಿನ ಶುಲ್ಕ ಪಡೆಯಲು ಅವಕಾಶ ನೀಡಬೇಕು