ಅಡುಗೆಗೆ ಸಿಹಿಯನ್ನು ನೀಡುವಂತ ಹೆಚ್ಚು ಬೆಲ್ಲ ಉಂಡೆ ಬೆಲ್ಲ ಇವುಗಳ ಬಗ್ಗೆ ಬಹಳಷ್ಟು ಜನ ಕೇಳಿರುತ್ತಾರೆ ಆದ್ರೆ ಅದೇ ತಾಳೆ ಬೆಲ್ಲದ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿರೋದಿಲ್ಲ, ಗ್ರಾಮೀಣ ಪ್ರದೇಶದ ಜನರಿಗೆ ತಾಳೆಬೆಲ್ಲಅಂದ್ರೆ ಏನು ಅನ್ನೋದು ತಿಳಿದಿರುತ್ತದೆ. ತಾಳೆ ಬೆಲ್ಲದಲ್ಲಿ ಹಲವು ಆರೋಗ್ಯಕಾರಿ ಗುಣಗಳನ್ನು ಕಾಣಬಹುದು. ಅಷ್ಟೇ ಅಲ್ದೆ ಇದರಲ್ಲಿ ಯಾವೆಲ್ಲ ವಿಶೇಷತೆ ಇದೆ ಅನ್ನೋದನ್ನ ನೋಡುವುದಾದರೆ ಇದರಲ್ಲಿ ವಿಟಮಿನ್ಸ್ ಹಾಗು ಮಿನರಲ್ಸ್ ಅಂಶಗಳು ಅಷ್ಟೇ ಅಲ್ದೆ ಸಂಯೋಜಿತ ಕಾರ್ಬೋಹೈಡ್ರೇಟ್ಸ್‌ಗಳು ಹೇರಳವಾಗಿದೆ.
ಪ್ರತಿದಿನ ಒಂದು ಚಿಕ್ಕ ತುಂಡು ತಾಳೆಬೆಲ್ಲ ಸೇವನೆ ಮಾಡುವುದರಿಂದ ಎಷ್ಟೊಂದು ಲಾಭವಿದೆ ಅನ್ನೋದನ್ನ ಹೇಳುವುದಾರೆ ದೇಹಕ್ಕೆ ಎನರ್ಜಿಯನ್ನು ನೀಡುತ್ತದೆ ಹಾಗೂ ದೇಹದ ಶಕ್ತಿ ಕಾಯ್ದುಕೊಳ್ಳುತ್ತದೆ, ದೇಹವನ್ನು ತಾಜಾವಾಗಿ ಇಡುವುದು ಅಷ್ಟೇ ಅಲ್ದೆ ದೇಹಕ್ಕೆ ಸಮಸ್ಯೆಯಾಗಿ ಕಾಡುವಂತ ಮಲಬದ್ಧತೆ ಅಜೀರ್ಣತೆ ಇಂತಹ ಸಮಸ್ಯೆಗಳಿಗೆ ಔಷಧಿಯಾಗಿ ಕೂಡ ಈ ತಾಳೆ ಬೆಲ್ಲ ಕೆಲಸ ಮಾಡುತ್ತದೆ.
ಇನ್ನು ಮನುಷ್ಯನಿಗೆ ಒಂದಲ್ಲ ಒಂದು ಸಮಸ್ಯೆ ಕಾಡುತ್ತಲೇ ಇರುತ್ತದೆ ಅಂತಹ ಸಮಸ್ಯೆಗಳಲ್ಲಿ ಒಂದಾಗಿರುವಂತ ಒಣ ಕೆಮ್ಮು ಶೀತ ಅಸ್ತಮಾ ಉಸಿರಾಟದ ತೊಂದರೆ ಇವುಗಳಿಂದ ಮುಕ್ತಿ ದೊರೆಸಲು ಈ ತಾಳೆಬೆಲ್ಲ ಹೆಚ್ಚು ಉಪಯೋಗಕಾರಿ, ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುವುದರಿಂದ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಅಷ್ಟೇ ಅಲ್ದೆ ರಕ್ತಹೀನತೆ ಸಮಸ್ಯೆಗೆ ಕಾರಣವಾಗುವ ಅನೀಮಿಯಾ ಸಮಸ್ಯೆಯನ್ನು ನಿವಾರಿಸುತ್ತದೆ ಜೊತೆಗೆ ದೇಹಕ್ಕೆ ಹಿಮೋಗ್ಲೋಬಿನ್ ಅಂಶವನ್ನು ವೃದ್ಧಿಸುತ್ತದೆ.
ದೇಹದ ನರಗಳಿಗೆ ಹಾಗೂ ಸ್ನಾಯುಗಳಿಗೆ ಇದರ ಅಂಶಗಳು ಹೆಚ್ಚು ಉಪಯೋಗಕಾರಿಯಾಗಿದೆ ಜೊತೆಗೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಗುಣಗಳನ್ನು ಹೊಂದಿದೆ. ವೃದ್ಯಾಪ್ಯದಲ್ಲಿ ಕಾಡುವಂತ ಜಾಯಿಂಟ್ ಪೈನ್ ಸಮಸ್ಯೆಗಳಿಗೆ ಪರಿಹಾರ ನೀಡುವ ಗುಣ ಇದರಲ್ಲಿದೆ ಹೀಗೆ ಹತ್ತಾರು ಆರೋಗ್ಯಕಾರಿ ಉಪಯೋಗಗಳನ್ನು ಹೊಂದಿರುವಂತ ಈ ತಾಳೆಬೆಲ್ಲ ಆಯುರ್ವೇದಿಕ್ ಗುಣಗಳನ್ನು ಹೊಂದಿದೆ. ನಾನಾ ಸಮಸ್ಯೆಗಳಿಗೆ ದೂರ ಮಾಡುವ ಶಕ್ತಿ ಈ ತಾಳೆ ಬೆಲ್ಲ ಹೊಂದಿದೆ.