ಚಿನ್ನ ಎಂದರೆ ಮಹಿಳೆಯರಿಗೆ ಎಲ್ಲಿಲ್ಲದ ಪ್ರೀತಿ, ಚಿನ್ನ ಮಾಡಿಸುವುದೆಂದರೆ ಸಾಮಾನ್ಯ ವರ್ಗದವರಿಗೆ ಬಹಳ ಕಷ್ಟ. ಕೊರೋನ ಕಾರಣದಿಂದ ಚಿನ್ನದ ಬೆಲೆ ಗಗನಕ್ಕೇರಿತ್ತು ಆದರೆ 2021 ರಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬರಲಿದೆ ಎಂದು ಹೇಳಿದ ಬಾಲಕನ ಭವಿಷ್ಯದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಪ್ರಪಂಚದಾದ್ಯಂತ ಮಹಾಮಾರಿ ಕೊರೋನಾ ಸೋಂಕಿನ ಆರ್ಭಟ ಹೆಚ್ಚಾಗಿದ್ದ ಕಾರಣ ಯಾರೂ ಊಹಿಸಲಾರದಷ್ಟು ಮಟ್ಟದಲ್ಲಿ ಚಿನ್ನದ ಬೆಲೆ ಗನಗನಕ್ಕೇರಿತ್ತು. ಚಿನ್ನ ಮಾಡಿಸಬೇಕು ಎಂದು ಅಂದುಕೊಂಡವರೆಲ್ಲ ಸುಮ್ಮನಾಗುವ ಪರಿಸ್ಥಿತಿ ಎದುರಾಯಿತು ಆದರೆ ಇದಕ್ಕಿದ್ದಂತೆ ಚಿನ್ನದ ಬೆಲೆ ಕುಸಿದಿದ್ದು ಪ್ರತಿಯೊಬ್ಬರು ಬೆರಗಾಗುವಂತೆ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಚಿನ್ನದ ಬೆಲೆ 2-3,000 ರೂಪಾಯಿ ಇತ್ತು. ಆದರೆ ಮಹಾಮಾರಿಯ ಆರ್ಭಟ ದೇಶದಲ್ಲಿ ಹೆಚ್ಚಾಗಿದ್ದ ಕಾರಣ ದೇಶವನ್ನೇ ಲಾಕ್ ಡೌನ್ ಮಾಡಬೇಕಾಯಿತು. ಇದರೊಂದಿಗೆ ಚಿನ್ನದ ಬೆಲೆ ಒಂದು ಗ್ರಾಂಗೆ ಬರೋಬ್ಬರಿ 5,500 ರೂ ದಾಟಿ ಬಿಟ್ಟಿತ್ತು. ಕೆಲವರು ಇದೇ ರೀತಿ ಮುಂದುವರೆದರೆ ನವೆಂಬರ್ ಹೊತ್ತಿಗೆ ಚಿನ್ನದ ಬೆಲೆ 10 ಗ್ರಾಂ ಗೆ ಸುಮಾರು 70,000ರೂಪಾಯಿ ಆಗಬಹುದು ಎಂದು ಲೆಕ್ಕಾಚಾರ ಹಾಕಿದ್ದರು. ಇದರಿಂದಾಗಿ ಶ್ರೀಮಂತರು ಸೇರಿ ಮಧ್ಯಮ ವರ್ಗದವರೆಲ್ಲಾ ಚಿನ್ನದ ಮೇಲೆ ಬಂಡವಾಳ ಹಾಕುತ್ತಿದ್ದರು. ಆದರೆ ಈಗ 22 ಕ್ಯಾರೆಟ್ ನ 10 ಗ್ರಾಂ ಚಿನ್ನ ಕೇವಲ ನಾಲ್ಕು ದಿನದಲ್ಲಿ 2,500 ರೂಪಾಯಿಗೆ ಕುಸಿದಿದೆ.
ಇವತ್ತಿನ ಮಾರುಕಟ್ಟೆಯ 10 ಗ್ರಾಂ ಚಿನ್ನದ ಬೆಲೆ 46,200 ರೂ ಆಗಿದ್ದು, 1 ಗ್ರಾಂ ಗೆ 4,620 ರೂ ಆಗಿಬಿಟ್ಟಿದೆ. ಮುಂದಿನ ವರುಷ 2021ರ ಹೊತ್ತಿಗೆ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿಯಬಹುದು ಎಂದು ಹೇಳಲಾಗುತ್ತಿದೆ. ಆದರೆ ವಿಶೇಷವೆಂದರೆ ಈ ಭವಿಷ್ಯವನ್ನು ಅಭಿಗ್ಯ ಆನಂದ್ ಹೇಳಿದ್ದನು ಆತ ಈ ಹಿಂದೆ ನುಡಿದ ಹಲವು ಭವಿಷ್ಯಗಳು ನಿಜವಾಗಿದೆ. ಅದೇ ರೀತಿಯಲ್ಲಿ ಈ ಭವಿಷ್ಯ ಕೂಡ ನಿಜವಾಗುತ್ತದೆಯೇ ಕಾದು ನೋಡಬೇಕಾಗಿದೆ. ಇಲ್ಲಿಯವರೆಗೆ ಬಾಲಕನು ಹೇಳಿರುವ ಭವಿಷ್ಯ ನಿಜವಾಗಿರುವುದರಿಂದ ಇದು ಕೂಡ ನಿಜವಾಗುವ ಸಾಧ್ಯತೆ ಇದೆ.