ಸಾಮಾನ್ಯವಾಗಿ ಹೋಟೆಲ್ ಗಳಿಗೆ ಹೋಗಬೇಕಾದರೆ ಸಾಕಷ್ಟು ಹಣ ಇಟ್ಟುಕೊಂಡು ಹೋಗಬೇಕಾಗುತ್ತದೆ. ಆದರೆ ಇಲ್ಲೊಂದು ಹೋಟೆಲ್ ನಲ್ಲಿ ಕೇವಲ 1 ರೂಪಾಯಿಗೆ ಊಟ ಕೊಡುತ್ತಾರೆ. ಅದು ಎಲ್ಲಿದೆ ಹಾಗೂ ಅದರ ಮಾಲೀಕ ಯಾರು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಭೂತೋವಾಲಿ ಗಲಿಯಲ್ಲಿರೋ ನಂಗ್ಲೋಯ್‌ನ ಶ್ಯಾಮ್‌ ರಸೋಯ್‌ ಹೋಟೆಲ್ ಮುಂದೆ ಬೆಳಗ್ಗೆ 11ರಿಂದ 1 ಗಂಟೆಯ ಮಧ್ಯೆ ಬಹಳಷ್ಟು ಜನರು ಬರುತ್ತಾರೆ ಏಕೆಂದರೆ ಇಲ್ಲಿ 1 ರೂಪಾಯಿಗೆ ಅನ್ನ, ಸಾರು, ಪಲ್ಯ ಹೀಗೆ ಕಂಪ್ಲೀಟ್ ಊಟ ಕೊಡಲಾಗುತ್ತದೆ. ಪ್ರವೀಣ್ ಕುಮಾರ್ ಗೋಯಲ್ ಎನ್ನುವವರು ಎರಡು ವರ್ಷದಿಂದ ಶ್ಯಾಮ್ ರಸೋಯ್ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ಪ್ರತಿದಿನ 1,100 ಜನರಿಗೆ ಆಹಾರ ಒದಗಿಸುತ್ತಾರೆ. ಹತ್ತಿರದ ಪ್ರದೇಶದ ಜನರಿಗೆ ಪಾರ್ಸೆಲ್ ಕಳುಹಿಸುತ್ತಾರೆ. ಇಂದ್ರಲೋಕ, ಸಾಯಿ ಮಂದಿರ್ ಪ್ರದೇಶಗಳಿಗೆ ಆಟೋ ರಿಕ್ಷಾ ಮೂಲಕ ಆಹಾರ ಒದಗಿಸುತ್ತಾರೆ. ಒಟ್ಟು ಈ ಹೋಟೆಲ್ ನಿಂದ 2,000 ಜನರಿಗೆ ಊಟ ಒದಗಿಸಲಾಗುತ್ತದೆ. ಡಿಜಿಟಲ್ ಪೇಮೆಂಟ್ ಮೂಲಕ ಜನರು ಹಣ ಪಾವತಿಸುತ್ತಾರೆ.

ಪ್ರವೀಣ್ ಅವರಿಗೆ 6 ಜನ ಸಹಾಯಕರಿದ್ದಾರೆ ಇವರಿಗೆ 300-400 ರೂಪಾಯಿಗಳನ್ನು ನೀಡಲಾಗುತ್ತದೆ. ಕಾಲೇಜ್ ಹುಡುಗರು ಸಹ ಇವರಿಗೆ ಸಹಾಯ ಮಾಡುತ್ತಾರೆ. ಮೊದಲು ಥಾಲಿಗೆ 10 ರೂಪಾಯಿ ಇತ್ತು ನಂತರ ಜನರನ್ನು ಆಕರ್ಷಿಸಲು 1 ರೂಪಾಯಿ ಮಾಡಲಾಯಿತು ಎಂದು ಮಾಲಿಕ ಪ್ರವೀಣ್ ಹೇಳುತ್ತಾರೆ. ಜನರೇ ಸಾಮಾಗ್ರಿಗಳನ್ನು, ಅಕ್ಕಿ, ಗೋಧಿ ಇತ್ಯಾದಿಗಳನ್ನು ಒದಗಿಸುತ್ತಾರೆ. ಉದ್ಯಮಿ ರಂಜಿತ್ ಎನ್ನುವವರು ಪ್ರವೀಣ್ ಅವರಿಗೆ ಹೋಟೆಲ್ ನಡೆಸಲು ಸ್ಥಳ ನೀಡಿದ್ದಾರೆ. ಒಟ್ಟಿನಲ್ಲಿ ಪ್ರವೀಣ ಅವರ ಈ ಕೆಲಸ ಜನರಿಗೆ ಸಹಾಯಕವಾಗಿದೆ. ಇಲ್ಲಿ ಬಡವರು, ಶ್ರೀಮಂತರು, ಮಧ್ಯಮ ವರ್ಗದವರು ಹೀಗೆ ಎಲ್ಲರೂ ಬರುತ್ತಾರೆ. ಬಡವರಿಗೆ ಹೀಗೆ ಊಟ ಕೊಡುವುದು ಬಹಳ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *