ಸಸ್ಯಾಹಾರ ಹಾಗೂ ಮಾಂಸಾಹಾರ ಎರಡನ್ನು ಕೂಡ ಸೇವನೆ ಮಾಡುವವರು ಬಹುತೇಕ ಜನ, ಆದ್ರೆ ಮಾಂಸಾಹಾರಿಗಳಿಗೆ ಇದು ಉಪಯೋಗಕಾರಿ ಹೇಗೆ ಅನ್ನೋದನ್ನ ಹೇಳುವುದಾದರೆ ಮನೆಯಲ್ಲೆಯೇ ಚಿಕನ್ ಅಥವಾ ಮಟನ್ ಮಾಂಸವನ್ನು ತಂದು ವಿವಿಧ ರೀತಿಯ ಬಗೆ ಬಗೆಯ ಆಹಾರಗಳನ್ನು ಸೇವಿಸುವಂತವರಿಗೆ ಇದು ಸಹಕಾರಿಯಾಗಿದೆ. ಹೌದು ಮನೆಯಲ್ಲಿಯೇ ಮಾಂಸಹಾರವನ್ನು ಸೇವನೆ ಮಾಡಲು ಅಡುಗೆ ಮಾಡುವಂತವರಿಗೆ ಒಂದೊಳ್ಳೆ ಟಿಪ್ಸ್.
ಕೆಲವೊಮ್ಮೆ ಮನೆಯಲ್ಲಿ ಕೋಳಿ ಅಥವಾ ಕುರಿಯ ಮಾಂಸವನ್ನು ತಂದು ಬೇಯಿಸುವಾಗ ಅದು ಬೇಗನೆ ಬೇಯುವುದಿಲ್ಲ ಅಷ್ಟೇ ಅಲ್ದೆ ಮಾಂಸ ಸರಿಯಾಗಿ ಬೇಯದೆ ಇದ್ರೆ ರುಚಿ ಅನಿಸೋದಿಲ್ಲ ಹಾಗಾಗಿ ಅಡುಗೆಗೆ ಬಳಸುವಂತ ಮಾಂಸ ಬಹುಬೇಗನೆ ಬೇಯಲು ಈ ರೀತಿಯಾಗಿ ಮಾಡಬೇಕಾಗುತ್ತದೆ, ಮಾಂಸ ಬೇಯಿಸುವಾಗ ಅದಕ್ಕೆ ಸ್ವಲ್ಪ ನಿಂಬೆಹಣ್ಣಿನ ರಸವನ್ನು ಹಾಕಿ ಬೇಯಿಸಿ, ಮಾಂಸವು ಸ್ಪಂಜಿನಂತೆ ಮೆದುವಾಗುವುದಲ್ಲದೆ ಬೇಗನೆ ಬೇಯುತ್ತದೆ.
ಕೆಲವರು ಮಾಂಸಹಾರ ಅಡುಗೆ ಮಾಡಿದಾಗ ಅಡುಗೆಯಲ್ಲಿ ಮಾಂಸ ಬೇಗನೆ ಬೇಯುವುದಿಲ್ಲ ಇದರಿಂದ ಗಂಟೆ ಗಟ್ಟಲೆ ಒಲೆಯ ಮೇಲೆ ಕುದಿಯಲು ಇಡಬೇಕಾಗುತ್ತದೆ, ಆದ್ದರಿಂದ ಅಡುಗೆಗೆ ಮಾಂಸ ಬಳಸುವಾಗ ನೀವು ನೆನಪು ಮಾಡಿಕೊಂಡು ಈ ವಿಧಾನವನ್ನು ಅನುಸರಿಸಿದರೆ ಅಡುಗೆ ಉತ್ತಮ ರೀತಿಯಲ್ಲಿ ಟೇಸ್ಟಿಯಾಗಿ ಸವಿಯ ಬಹುದಾಗಿದೆ, ನಿಮ್ಮ ಆತ್ಮೀಯರು ಅಥವಾ ಅಡುಗೆ ಮಾಡುವಂತವರಿಗೆ ಈ ವಿಚಾರವನ್ನು ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.