ಭಾರತೀಯರು ಕ್ರಿಕೆಟ್ ಅಭಿಮಾನಿಗಳು. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವವರಿಗೆ ಹಣ ಬರುತ್ತದೆ. ರಾಷ್ಟ್ರೀಯ, ರಾಜ್ಯ ಮಟ್ಟದಲ್ಲಿ ಆಡುವವರಿಗೆ ಹಣ ಬರುವುದಿಲ್ಲ.ಐಪಿಎಲ್ ನಿಂದ ಡೊಮೆಸ್ಟಿಕ್ ಲೆವೆಲ್ ಆಟಗಾರರ ಭವಿಷ್ಯ ಬದಲಾಯಿತು. ಬಡತನದಿಂದ ಬಂದು ಐಪಿಎಲ್ ನಿಂದ ಜೀವನ ಬದಲಾದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಾರ್ದಿಕ್ ಪಾಂಡ್ಯ ಇವರು ಕ್ರಿಕೆಟ್ ಪ್ರಪಂಚದಲ್ಲಿ ಪ್ರಸಿದ್ದರಾಗುತ್ತಿದ್ದಾರೆ. ಇವರು ಕ್ರಿಕೆಟ್ ಆಡಬೇಕೆಂದು 9 ನೆ ಕ್ಲಾಸ್ ನಲ್ಲಿ ಶಾಲೆ ಬಿಡುತ್ತಾರೆ. ಇವರಿಗೆ ಒಂದು ಕಾಲದಲ್ಲಿ ಶೂ ಕೊಂಡುಕೊಳ್ಳಲು ಹಣವಿರಲಿಲ್ಲ. 2015 ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಾಂಡ್ಯ ಅವರನ್ನು ಖರೀದಿ ಮಾಡುತ್ತದೆ. ಇವರು ಐಪಿಎಲ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ಕೊಡುತ್ತಾರೆ. ಇದರಿಂದ ಅವರು ಟೀಮ್ ಇಂಡಿಯಾದಲ್ಲಿ ಆಡುವಂತೆ ಆಗುತ್ತದೆ. ಯಶಸ್ವಿ ಜಯಸ್ವಾಲ್ ಈ ಬಾರಿ ಐಪಿಎಲ್ ನಲ್ಲಿ ಅಷ್ಟೊಂದು ಯಶಸ್ವಿಯಾಗದಿದ್ದರು ಐಪಿಎಲ್ ಬಿಡ್ಡಿಂಗ್ ಸಮಯದಲ್ಲಿ ಭಾರಿ ಸದ್ದು ಮಾಡಿದನು. ರಾಜಸ್ಥಾನ್ ರಾಯಲ್ಸ್ ತಂಡ 2.4 ಕೋಟಿ ಕೊಟ್ಟು ಈತನನ್ನು ಖರೀದಿ ಮಾಡಿತ್ತು. ಜಯಸ್ವಾಲ್ ಉತ್ತರ ಪ್ರದೇಶದ ಬದೋಹಿಯವನು ಅಪ್ಪ ಪಾನಿಪುರಿ ವ್ಯಾಪಾರಿ ಈತ ಪಾನಿ ಪುರಿ ಮಾರಿಕೊಂಡು ಕ್ರಿಕೆಟ್ ಆಡಿ ಬೆಳೆದವನು ಯಾರದ್ದೋ ಪರಿಚಯದಿಂದ ಮುಂಬೈಗೆ ಬಂದು ಮಲಗಲು ಮಾತ್ರ ಜಾಗ ಪಡೆದು ನಂತರ ಕೋಚ್ ಪರಿಚಯವಾಗಿ ಸಣ್ಣ ಪುಟ್ಟ ಮ್ಯಾಚ್ ಆಡುತ್ತಾನೆ. ನಂತರ ಕೋಚ್ ಜ್ವಾಲಾಸಿಂಗ್ ಪರಿಚಯವಾಗಿ ಅಂಡರ್ ನೈಂಟೀನ್ ವಿಶ್ವಕಪ್ ನಲ್ಲಿ ಆಡಿ ಸೆಂಚುರಿ ಬಾರಿಸಿ ನಂತರ ಐಪಿಎಲ್ ಗೆ ಸೆಲೆಕ್ಟ್ ಆಗುತ್ತಾನೆ ಈ ಹುಡುಗನ ವಯಸ್ಸು ಕೇವಲ 18.

ರಿಂಕು ಸಿಂಗ್ ಇವರು ಕಲ್ಕತ್ತಾ ನೈಟರೈಡರ್ ಪರ ಫೀಲ್ಡಿಂಗ್ ಮಾಡುತ್ತಾರೆ. ಇವರಿಗೆ ಐಪಿಎಲ್ ನಲ್ಲಿ ಸರಿಯಾದ ಅವಕಾಶ ಸಿಗಲಿಲ್ಲ ಆದರೆ ಈತ ಪ್ರತಿಭಾವಂತ ಆಟಗಾರ. ಈತನ ತಂದೆ ಎಲ್ಪಿಜಿ ಸಿಲಿಂಡರ್ ಡೆಲಿವರಿ ಮಾಡುತ್ತಿದ್ದರೂ, ಅಣ್ಣ ಆಟೋ ರಿಕ್ಷಾ ಡ್ರೈವರ್ ಆಗಿದ್ದರು. ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಇತ್ತು. ರಿಂಕು ಸಿಂಗ್ ಗೆ ಕ್ರಿಕೆಟ್ ಮೇಲೆ ಆಸಕ್ತಿ ಇತ್ತು. ಡೊಮೆಸ್ಟಿಕ್ ಕ್ರಿಕೆಟ್ ಆಟಗಾರನಾಗಿದ್ದ ಕ್ರಿಕೆಟ್ ನಿಂದ ಏನು ಸಿಗುವುದಿಲ್ಲ ಆಗ ಕಸ ಗುಡಿಸಲು ನಿರ್ಧರಿಸುತ್ತಾನೆ ಆ ಸಮಯದಲ್ಲಿ ಐಪಿಎಲ್ ಬಿಡ್ಡಿಂಗ್ ನಡೆಯುತ್ತದೆ. 2018 ರಲ್ಲಿ ರಿಂಕು ಸಿಂಗ್ ಅವರನ್ನು ಕೆಕೆಆರ್ ತಂಡ 80 ಲಕ್ಷ ಕೊಟ್ಟು ಖರೀದಿ ಮಾಡುತ್ತದೆ. ಅದೇ ತಂಡದ ಪರವಾಗಿ ಆಡುತ್ತಿದ್ದಾರೆ. ಮಹಮ್ಮದ ಸಿರಾಜ್ ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿದ್ದಾರೆ. ಇವರು ಹೈದ್ರಾಬಾದ್ ನ ಕೊಳಗೇರಿಯಿಂದ ಬಂದಿದ್ದಾರೆ ಇವರ ತಂದೆ ಆಟೋ ಡ್ರೈವರ್. ಈತನನ್ನು ಆರಸಿಬಿ ತಂಡ 2.6 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಟಿ ನಟರಾಜನ್ ಚೆನ್ನೈನ ಸೇಲಂ ಜಿಲ್ಲೆಯ ಪುಟ್ಟ ಗ್ರಾಮದವರಾಗಿದ್ದು ಇವರ ತಂದೆ, ತಾಯಿ ಇಬ್ಬರೂ ದಿನಗೂಲಿ ನೌಕರರು. ನಟರಾಜನ್ ಅವರಿಗೆ ಕ್ರಿಕೆಟ್ ಅಂದರೆ ಹುಚ್ಚು ಮೊದಲು ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದರು ನಂತರ ತಮಿಳುನಾಡು ಕ್ರಿಕೆಟರ್ ಜಯಪ್ರಕಾಶ್ ಅವರು ನಟರಾಜನ್ ಅವರಿಗೆ ವೈಟ್ ಬಾಲ್ ಕ್ರಿಕೆಟ್ ಅಭ್ಯಾಸ ಮಾಡಿಸಿದರು. ತಮಿಳು ನಾಡು ಪ್ರೀಮಿಯರ್ ಲೀಗ್ ನಲ್ಲಿ ನಟರಾಜನ್ ಯಶಸ್ಸು ಕಂಡಿದ್ದರು. ಕಿಂಗ್ಸ್ ಪಂಜಾಬ್ 3 ಕೋಟಿ ಕೊಟ್ಟು ನಟರಾಜನ್ ಅವರನ್ನು ಖರೀದಿ ಮಾಡಿತ್ತು. ಈಗ ಇವರು ಏರಕರ್ ಸ್ಪೆಷಲಿಸ್ಟ್ ಆಗಿ ಮಿಂಚುತ್ತಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!