ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಕೌರವರ ಕಡೆಯಿದ್ದು ಮಾನವೀಯತೆ ಮೆರೆದವನು ಕರ್ಣ ಒಬ್ಬನೆ. ಕರ್ಣ ದಾನವೀರ ಎಂದೆ ಹೆಸರಾಗಿದ್ದವನು. ಮಿತ್ರ ಧರ್ಮ ನಿಭಾಯಿಸುವುದಕ್ಕಾಗಿ ಅಧರ್ಮವಾದರೂ ಅವನ ಧರ್ಮ ನಿಭಾಯಿಸಿದ. ರಣರಂಗದಲ್ಲಿ ಅರ್ಜುನನ ಬಾಣದಿಂದ ಮೃತನಾಗುವ ಸಂದರ್ಭದಲ್ಲಿ ಕೃಷ್ಣನ ಬಳಿ ವರ ಕೇಳುತ್ತಾನೆ. ಕೃಷ್ಣ ಈಡೇರಿಸುವ ಆ ವರ ಏನು ಎಂಬುದನ್ನು ನಾವು ತಿಳಿಯೋಣ.

ಕುರುಕ್ಷೇತ್ರ ಒಂದು ಮುಖ್ಯ ತಿರುವು. ಎಷ್ಟೋ ಸೈನಿಕರ ರಕ್ತ ನದಿಯಂತೆ ಹರಿದಿದೆ ಈ ಯುದ್ಧದಲ್ಲಿ. ಧರ್ಮ – ಅಧರ್ಮದ ಯುದ್ಧ ಒಂದೆಡೆ ಆದರೆ ಪ್ರತಿಷ್ಠೆಗಾಗಿ ಯುದ್ಧ ಇನ್ನೊಂದೆಡೆ. ಕರ್ಣನು ಅರ್ಜುನನಿಗಿಂತ ಪರಾಕ್ರಮಿ. ಆದರೆ ಕರ್ಣನ ಬಾಣಕ್ಕೆ ಕೃಷ್ಣಾರ್ಜುನರ ರಥ ಒಂದು ಅಡಿ ಹಿಂದೆ ಸರಿದರೆ, ಅರ್ಜುನನ ಬಾಣಕ್ಕೆ ಕರ್ಣನ ರಥ ನೂರು ಅಡಿ ಹಿಂದೆ ಸರಿಯುತ್ತಿತ್ತು. ಆದರೆ ಭೇಷ್ ಕರ್ಣ ಎಂದು ಹೊಗಳುವ ಕೃಷ್ಣನನ್ನು ಯಾಕೆ ಎಂದು ಅರ್ಜುನ ಕೇಳಿದಾಗ, ಪಾರ್ಥ ನಿನ್ನ ರಥ ಭೂಮಿ ತೂಕದಂತೆ ಇದೆ ಯಾಕೆಂದರೆ ವಾಯುಪುತ್ರ ಹನುಮನ ಜೊತೆಗೆ ಸ್ವತಃ ನಾನು ಉಪಸ್ಥಿತನಿದ್ದೆನೆ. ಇಷ್ಟು ಇದ್ದು ಒಂದು ಅಡಿ ಹಿಂದೆ ಸರಿಸುವ ಶಕ್ತಿ ಕರ್ಣನಲ್ಲಿ ಇದೆ. ಅವನು ಪರಾಕ್ರಮಿ ಅಲ್ಲವೆ ಎಂದಿದ್ದ ಕೃಷ್ಣ. ಅಧರ್ಮದ ಕಡೆಯಿಂದ ಯುದ್ದ ಮಾಡುತ್ತಿದ್ದರೂ ಕೌರವರ ಕಡೆಯಿದ್ದ ಧರ್ಮ ರಕ್ಷಕ ಕರ್ಣ. ಎಂದಿಗೂ ಅವನನ್ನು ಅಧರ್ಮಿ ಎಂದು ಯಾರೂ ಕರೆಯುವುದಿಲ್ಲ. ಕರ್ಣ ಒಬ್ಬ ಮಹಾರಥಿ. ಅವನಿಗಾದ ಅನ್ಯಾಯ ತಿಳಿದಾಗಲೂ ನ್ಯಾಯದ ಪರ ನಿಂತ ಧರ್ಮ ಪಾಲಕ‌. ಅರ್ಜುನನ ರಕ್ಷಣೆಗಾಗಿ ಕೃಷ್ಣನು ಕಪಟನಾಟಕದ ಪಾತ್ರಧಾರಿಯಾಗಿ ಇಂದ್ರನನ್ನು ಕಳುಹಿಸಿ ಕರ್ಣನಿಂದ ಕವಚ ಹಾಗೂ ಕರ್ಣಕುಂಡಲ ಪಡೆಯುತ್ತಾನೆ.

ಕರ್ಣನನ್ನು ಎದುರಿನಿಂದ ಕೊಲ್ಲಲು ಸಾಧ್ಯವಿಲ್ಲ ಎಂದು ಗೊತ್ತಿದ್ದ ಕೃಷ್ಣ ಕರ್ಣನ ರಥ ನೆಲದಲ್ಲಿ ಹುಗಿದಾಗ, ರಥದ ಚಕ್ರ ತೆಗೆಯುತ್ತಿದ್ದ ಕರ್ಣನ ಬಳಿ ಕೃಷ್ಣ ಕರ್ಣನ ಬಾಯಲ್ಲಿ ಇದ್ದ ಚಿನ್ನದ ಹಲ್ಲುಗಳನ್ನು ಬೇಡುತ್ತಾನೆ. ತಕ್ಷಣವೇ ಕರ್ಣ ಅಲ್ಲಿರುವ ಕಲ್ಲಿನಿಂದ ಹಲ್ಲು ತೆಗೆದುಕೊಡುತ್ತಾನೆ. ಇದರಿಂದ ಸಂತುಷ್ಠನಾದ ಕೃಷ್ಣ ಮೂರು ವರಗಳ ಬೇಡುವಂತೆ ಕೇಳುತ್ತಾನೆ. ಅದಂತೆ ಕರ್ಣ ಮೊದಲನೆಯ ವರವಾಗಿ ಮುಂದಿನ ಜನ್ಮದಲ್ಲಿ ಅನ್ಯಾಯವಾದವರಿಗೆ ತಾನು ಸಹಾಯಮಾಡಬೇಕು. ಈ ಜನ್ಮದಲ್ಲಿ ಸೂತ ಪುತ್ರನೆಂದು ನನಗೆ ಬಹಳಷ್ಟು ಅನ್ಯಾಯವಾಗಿದೆ ಎನ್ನುತ್ತಾನೆ. ಎರಡನೆಯ ವರವಾಗಿ ಮುಂದಿನ ಜನ್ಮದಲ್ಲಿ ಕೃಷ್ಣ ನನ್ನ ರಾಜ್ಯದಲ್ಲಿ ಜನಿಸಬೇಕು ಎಂದು ಬೇಡುತ್ತಾನೆ. ಕೊನೆಯ ವರವಾಗಿ ಎಲ್ಲಿ ಅನ್ಯಾಯ ಇಲ್ಲವೋ ಅಲ್ಲಿ ನನ್ನ ಅಂತ್ಯದ ನಂತರ ತನ್ನ ಅಂತ್ಯಕ್ರಿಯೆಗಳು ನಡೆಯಬೇಕು ಎಂದು ಬೇಡುತ್ತಾನೆ. ಜಗತ್ತಿನ ಯಾವ ಮೂಲೆಯಲ್ಲಿಯೂ ಅನ್ಯಾಯ ನಡೆಯದ ಸ್ಥಳವೇ ಇಲ್ಲ ಇದರಿಂದ ಗಲಿಬಿಲಿಗೊಂಡ ಕೃಷ್ಣ ಯೋಚಿಸಿ ತನ್ನ ಅಂಗೈಯಲ್ಲಿ ಕರ್ಣನ ಅಂತ್ಯ ಸಂಸ್ಕಾರ ನೆರವೇರಿಸುತ್ತಾನೆ. ಇದರಿಂದ ಕರ್ಣ ನೇರವಾಗಿ ವೈಕುಂಠ ತಲುಪುತ್ತಾನೆ.

ಕರ್ಣ ಮಿತ್ರಧರ್ಮಕ್ಕಾಗಿ ಅಧರ್ಮ ಆರಿಸಿಕೊಳ್ಳಬೇಕಾಗಿ ಬಂದರು ಹಿಂಜರಿಯಲಿಲ್ಲ. ಅವನೊಂದಿಗೆ ಬಾರಿ ಬಾರಿ ಅನ್ಯಾಯ ನಡೆದರೂ ಬೇಡಿದವರಿಗೆ ಇಲ್ಲವೆನ್ನದೆ ದಾನ ಮಾಡಿದವನು ಕರ್ಣ. ಅಂತಹ ಧೀರ ಯೋಧ ಕರ್ಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!