ಸಂಯುಕ್ತ ಹೊರನಾಡ್ ಹೆಸರು ಕೆಳುತ್ತಿದ್ದಂತೆಯೆ ಅವರ ಮುಗ್ಧ ನಗು ನೆನಪಾಗುತ್ತದೆ. ಯಾವಾಗಲೂ ನಗುವ ಚೆಲುವೆ ಇವರು ಕನ್ನಡ ಚಿತ್ರರಂಗದಲ್ಲಿ ಕೆಲವು ಚಿತ್ರಗಳ ಮೂಲಕ ಎಲ್ಲರಿಗೂ ಪರಿಚಯವಾಗಿದ್ದಾರೆ. ಸಂಯುಕ್ತ ಹೊರನಾಡ್ ಅವರು ತಮ್ಮ ಕುಟುಂಬದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳ್ಲಿ ಹರಿಬಿಟ್ಟಿದ್ದಾರೆ. ಇವರ ಕುಟುಂಬದ ಸಣ್ಣ ಪರಿಚಯ ನಾವು ಮಾಡಿಕೊಳ್ಳೊಣ.

ಸಂಯುಕ್ತ ಹೊರನಾಡ್ ಅವರು ಸುಧಾ ಬೆಳವಾಡಿ ಹಾಗೂ ಎಂ.ಜಿ ಸತ್ಯ ಅವರ ಮಗಳು. ಸಂಯುಕ್ತ ಹೊರನಾಡ್ ಅವರ ಸಹೋದರ ಶಾಂತನು ಹೊರನಾಡ್. ಸಂಯುಕ್ತ ಹೊರನಾಡ್ ಅವರ ಅಜ್ಜಿ ಎಂದರೆ ಸುಧಾ ಬೆಳವಾಡಿಯವರ ತಾಯಿ ಭಾರ್ಗವಿ ನಾರಾಯಣ್. ಸಂಯುಕ್ತ ಹೊರನಾಡ್ ಅವರು ತನ್ನ ತಾಯಿಯ ಜೊತೆ ತೆಗೆದ ಫೋಟೊ ಹಾಗೂ ಅವರ ಜೊತೆ ಕಳೆದ ಸಂತೋಷದ ಕ್ಷಣಗಳ ಪೋಟೊ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸಹೋದರ ಶಾಂತನು, ತಂದೆ ಎಂ.ಜಿ.ಸತ್ಯ ಅವರ ಜೊತೆಗೆ ಇರುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಜ್ಜಿ ಭಾರ್ಗವಿ ನಾರಾಯಣ್ ಹಾಗೂ ತಾಯಿ ಸುಧಾ ಬೆಳವಾಡಿ ಜೊತೆಗೆ ಇದ್ದ ಪೋಟೊಗಳನ್ನು ಹಂಚಿಕೊಂಡಿದ್ದಾರೆ. ಮಾವ ಹಾಗೂ ಅಮ್ಮನ ಮದ್ಯದಲ್ಲಿ ನಿಂತಿದ್ದ ಪೋಟೋ ಹಾಗೂ ತಾಯಿ ಸುಧಾ ಬೆಳವಾಡಿಯವರಿಗೆ ಬಂದ ಪ್ರಶಸ್ತಿಯ ಪೋಟೊವನ್ನು ಹಂಚಿಕೊಂಡಿದ್ದಾರೆ. ಕುಟುಂಬದೊಂದಿಗೆ ಇರುವ ಪೋಟೊಗಳ ಜೊತೆ ತಮ್ಮ ಮುದ್ದಿನ ಪ್ರಾಣಿಗಳೊಂದಿಗೆ ಇರುವ ಪೋಟೊವನ್ನು ಸಹ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ನಟನೆಯಲ್ಲಿ ಎತ್ತಿದ ಕೈ ಆದ ಸಂಯುಕ್ತ ಹೊರನಾಡ್ ಅವರು ಚಿತ್ರ ಬಿಡಿಸುವುದು, ಪ್ರಾಣಿ ಸಾಕಣೆ ಹಾಗೂ ಇತರ ಸಮಾಜ ಸೇವೆ ಕ್ಷೇತ್ರಗಳಲ್ಲಿ ಕೂಡಾ ತಮ್ಮ ಗಮನ ಹರಿಸಿದ್ದಾರೆ. ಸಂಯುಕ್ತ ಹೊರನಾಡ್ ಅವರು ಇನ್ನಷ್ಟು ಬೆಳೆಯಲಿ, ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!