ಇವರು ತುಂಬಾ ಹೆಸರು ಮಾಡಿದ ನಟಿ. ಸಹಜ ಸುಂದರಿ ಇವರು. ಹೆಸರು ರೂಪಿಣಿ. ರೂಪಿಣಿ ಎಂಬ ಹೆಸರು ಕೇಳಿಡೊಡನೆ ನೆನಪಾಗುವ ಹಾಡು ಎಂದರೆ ದೇವಣ್ಣ ನಿನ್ನ ಮೇಲೆ ಮನಸಣ್ಣ. ಮಾಗೈತೆ ಈ ಹಣ್ಣು ನೋಡಣ್ಣ ಎಂಬ ಹಾಡು. ಇವರು ಅಂಬರೀಶ್, ವಿಷ್ಣುವರ್ಧನ್ ಅಂತಹ ದೊಡ್ಡ ದೊಡ್ಡ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ. ಈಗ ಇವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವು ತಿಳಿಯೋಣ.

ವೀಕ್ಷಕನ ಮನದಾಳಕ್ಕೆ ಮನಮೋಹಕ ನಗುವಿನಿಂದ ಮುಟ್ಟಿದ್ದರು. ಅಷ್ಟು ಸ್ನಿಗ್ಧ ನಗು ಇವರದು. ಮೊದಲ ಬಾರಿಗೆ ಮಿಲಿ ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. 1975 ರಲ್ಲಿ ಬಾಲನಟಿಯಾಗಿ ಅಭಿನಯಿಸಿದರು. ಎರಡು ದಶಕಗಳ ಕಾಲ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ನಟಿಸಿದ್ದರು. ಅಮಿತಾಭ್ ಬಚ್ಚನ್, ಶತ್ರುಘ್ನ ಸಿನ್ಹಾ, ಮುಮ್ಮುಟ್ಟಿ, ಮೋಹನ್‌ ಲಾಲ್, ಕಮಲ ಹಾಸನ್, ರಜನಿಕಾಂತ್, ಅಷ್ಟೆ ಅಲ್ಲದೆ ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್ ಹೀಗೆ ದಿಗ್ಗಜರೊಂದಿಗೆ ನಟಿಸಿದ್ದಾರೆ. ರೂಪಿಣಿ ಮೊದಲ ಹೆಸರು ಕೋಮಲ್ ಮಹುವಾಕರ್ ಹುಟ್ಟಿದ್ದು ಮುಬೈನಲ್ಲಿ. ಚಿತ್ರರಂಗ ಬಯಸದೆ ಬಂದ ಭಾಗ್ಯ ಇವರಿಗೆ. ರಿಷಿಕೇಶ್ ಮುಖರ್ಜಿಯವರ ಕಣ್ಣಿಗೆ ರೂಪಿಣಿ ಕಂಡಿದ್ದರು. ಅವರ ಮಿಲಿ ಚಿತ್ರದ ಬಾಲನಟಿ ಪಾತ್ರಕ್ಕೆ ರೂಪಿಣಿಯನ್ನು ಆಡಿಷನ್ ನಡೆಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಕೊತ್ವಾಲ್, ಗುಂಗ್ರು, ಮೆರಿ ಅದಾಲತ್, ನಾಚ್ ಮಯ್ಯೂರಿ,ಆವಾರ್ ಬಾಪ್, ಚಮೇಲಿ ಕಿ ಶಾದಿ ಹೀಗೆ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಹದಿನಾಲ್ಕು ಸಿನಿಮಾ ಆದರೂ ಅಷ್ಟು ಹೆಸರು ಸಿಕ್ಕಿರಲಿಲ್ಲ.
1988 ರಲ್ಲಿ ಡಾಕ್ಟರ್. ವಿಷ್ಣುವರ್ಧನ್ ಜೊತೆ ಒಲವಿನ ಆಸರೆ ಚಿತ್ರದಲ್ಲಿ ಅಭಿನಯ ಮಾಡುತ್ತಾರೆ. ಕೆ.ವಿ. ಜಯರಾಂ ಅವರಿಗೆ ಹೊಸ ಪ್ರತಿಭೆ ಬೇಕಿತ್ತು, ಅದಾಗಲೆ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದ ರೂಪಿಣಿ ಕಾಣಿಸುತ್ತಾರೆ.

ಒಲವಿನ ಆಸರೆ ಚಿತ್ರ ಸಂಗೀತದಲ್ಲಿ ಹೆಸರು ಮಾಡುತ್ತದೆ. ನಂತರದಲ್ಲಿ ಜಗದೇಕ ವೀರ, ದೇವಾ, ಮತ್ತೆ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ ಹೀಗೆ ಹಲವಾರು ಚಿತ್ರಗಳಲ್ಲಿ ವಿಷ್ಣುವರ್ಧನ್ ಜೊತೆಯಲ್ಲಿ ನಟಿಸಿದ್ದರು. ಒಳ್ಳೆಯ ಜೋಡಿ ಎಂಬ ಹೆಸರು ಸಿಕ್ಕಿತ್ತು. ಹಾಗೆಯೆ ರವಿಚಂದ್ರನ್ ಅವರ ಜೊತೆಗೆ ಗೋಪಿ ಕೃಷ್ಣ ಚಿತ್ರದಲ್ಲಿ ತಿಂಡಿಪೋತಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಡಾಕ್ಟರ್. ಅಂಬರೀಶ್ ಅವರ ಜೊತೆಗೆ ಸಪ್ತಪದಿ, ಮಲ್ಲಿಗೆ ಹೂವಿನಲ್ಲಿ, ಎಂಬ ಚಿತ್ರದಲ್ಲಿ ನಟಿಸಿದ್ದರು. ಒಂದು ಕಡೆ ಕನ್ನಡದಲ್ಲಿ ನಟಿಸಿದ್ದರೆ ಐದು ಭಾಷೆಗಳಲ್ಲಿ ಒಂದೆ ಬಾರಿ ನಟಿಸಿ ಹೆಸರುವಾಸಿಯಾಗಿದ್ದರು. ಮನೆ ಮಗಳು ಎನ್ನುವಷ್ಟು ಯಶಸ್ಸು ಸಿಕ್ಕಿದಾಗಲೆ ಚಿತ್ರರಂಗವನ್ನು ತೊರೆದು ಬಿಡುತ್ತಾರೆ ರೂಪಿಣಿ. ಚಿತ್ರರಂಗ ಬಿಡಲು ಕಾರಣ ಮದುವೆ. ಚಿತ್ರರಂಗ ಬಿಡಲು ಮನಸ್ಸಿಲ್ಲದಿದ್ದರೂ ಹಾಗೂ ಮದುವೆಯ ವಯಸ್ಸು ಅಲ್ಲದಿದ್ದರೂ, ತಂದೆ ತಾಯಿ ಮಾತಿನಿಂದ ಮದುವೆಯಾಗುತ್ತಾರೆ. ತಂದೆ ಕಾಂತಿಲಾಲ್ ಅವರು ವಕೀಲರಾಗಿದ್ದರು. ತಾಯಿ ಪ್ರಮೀಳಾ ಡಯೆಟೀಷಿಯನ್. ಮಗಳು ಎಂದರೆ ತುಂಬಾ ಪ್ರೀತಿ. ಚಿತ್ರರಂಗದಲ್ಲಿ ಎಷ್ಟು ಹೆಸರು ಮಾಡಿದರೂ ಒಂದು ದಿನ ಬಿಡಲೆಬೇಕು. ಈಗ ಯಶಸ್ಸು ಸಿಕ್ಕಿರಬಹುದು ಆದರೆ ಇದು ನೀರಿನ ಮೇಲಿನ ಗುಳ್ಳೆಯಂತೆ. ಈಗಲೆ ಮದುವೆಯಾಗೂ ಯಶಸ್ಸು ಹೋದ ಮೇಲೆ ಮದುವೆಯಾದರೆ ಜನರು ಮಾತನಾಡುವ ರೀತಿ ಬದಲಾಗುತ್ತದೆ ಎಂದಿದ್ದರು.

ಅಪ್ಪ ಅಮ್ಮ ಎಷ್ಟು ಪೋಟೊ ಕಳಿಸಿದರೂ ಉತ್ತರ ನೀಡಿರುವುದಿಲ್ಲ ರೂಪಿಣಿ. ಪತಿನಿ ಪೆಣ್ ಎಂಬ ತಮಿಳು ಚಿತ್ರಕ್ಕೆ ಬೆಸ್ಟ್ ನಟಿ ಪ್ರಶಸ್ತಿ ಸಿಕ್ಕಿರುತ್ತದೆ. ಮನೆಗೆ ಬಂದಾಗ ಮದುವೆ ಆಗಲೇ ಬೇಕೆಂಬ ಮಾತಿನೊಂದಿಗೆ ಮನೆಯಲ್ಲಿ ಅಪ್ಪ ಅಮ್ಮ ಕುಳಿತಿರುತ್ತಾರೆ. ಯಶಸ್ಸು ಸಿಕ್ಕಿದಾಗ ಮದುವೆಯಾದರೆ ಅಪವಾದದಿಂದ ದೂರ ಇರುತ್ತಾಳೆ ಎಂದು ನಂಬಿದ್ದ ತಂದೆ ತಾಯಿಗೆ ರೂಪಿಣಿಯವರ ಗಡಿಬಿಡಿಯ ಮದುವೆಯಿಂದ ದೂರ ಆಗಿತ್ತು. ರೂಪಿಣಿ ಅವರು ರೋಗದಿಂದ ಬಳಲುತ್ತಿದ್ದಾರೆ. ನಟನೆ ಮಾಡುವಷ್ಟು ಸೌಖ್ಯವಿಲ್ಲ. ತುಂಬಾ ಗಾಳಿ ಸುದ್ದಿ ಹರಡಿದ್ದವು. ಇದನ್ನು ತಿಳಿಯದೆ ವಯಕ್ತಿಕ ಜೀವನದಲ್ಲಿ ನಿರತರಾದ ರೂಪಿಣಿ ತಾಯಿ ಹಾಗೂ ಪತಿಯಂತೆ ಡಾಕ್ಟರ್ ಪರೀಕ್ಷೆ ಬರೆದು ಡಾಕ್ಟರ್ ಆಗಿದ್ದಾರೆ. ತಮ್ಮದೆ ಆಸ್ಪತ್ರೆ ಮಾಡಿ ಪತಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ನಂತರ ತಾಯಿ ವಿಕಲ ಚೇತನರ ಹಾಗೂ ಸಮಾಜ ಕಲ್ಯಾಣ ಕಾರ್ಯ ಮಾಡು ಎಂದಾಗ ಸಮಾಜ ಸೇವೆ ಸಲ್ಲಿಸುತ್ತಾರೆ. ತಮ್ಮದೆ ಆದ ಸ್ಪರ್ಶ ಫೌಂಡೇಶನ್ ಸ್ಥಾಪಿಸಿ, ನೂರಾರು ಜೀವಗಳಿಗೆ ಆಧಾರ ಆಗಿದ್ದಾರೆ. ಭಾರತದ ಶಾಸ್ತ್ರೀಯ ನೃತ್ಯ ಮಾಡುತ್ತಿದ್ದಾರೆ. ಚಿತ್ತಿ 2 ಎನ್ನುವ ಧಾರಾವಾಹಿಯಲ್ಲಿ ಇಪ್ಪತ್ತಾರು ವರ್ಷಗಳ ನಂತರ ಅಭಿನಯ ಮಾಡುತ್ತಿದ್ದಾರೆ.

ಮತ್ತೆ ಹಿರಿತೆರೆಗೆ ಬರುವ ಯೋಚನೆ ಇರುವ ರೂಪಿಣಿ ಅವರಿಗೆ ಮತ್ತಷ್ಟು ಅವಕಾಶಗಳು ಕೈ ಬೀಸಿ ಕರೆಯಲಿ. ತಮ್ಮ ಉತ್ತಮ ಅಭಿನಯದಿಂದ ಕಲಾದೇವಿಯ ಆರಾಧನೆ ಮಾಡುವಂತಾಗಲಿ. ಇದು ನಮ್ಮೆಲ್ಲರ ಹಾರೈಕೆ.

Leave a Reply

Your email address will not be published. Required fields are marked *