ಮನುಷ್ಯನ ಮನಸ್ಸು ಕೋತಿಯ ರೀತಿ.ಏಕೆಂದರೆ ಒಂದು ಕಡೆ ನಿಂತ ಹಾಗೆ ನಿಲ್ಲುವುದಿಲ್ಲ. ಕೋತಿಗಳು ಹಾಗೆ ನಿಂತಲ್ಲಿ ನಿಲ್ಲುವುದಿಲ್ಲ. ಕೋತಿ ಗಾಯವನ್ನು ಪರಚಿ ಪರಚಿ ಹೇಗೆ ದೊಡ್ಡ ಗಾಯವನ್ನಾಗಿ ಮಾಡಿಕೊಳ್ಳುತ್ತದೆಯೋ ಅದೇ ರೀತಿ ನಮ್ಮ ಮನಸ್ಸು ಕೂಡ ನಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ಪದೇ ಪದೇ ನೆನಪಿಸುತ್ತದೆ. ದುಃಖಿಸುತ್ತಾ ನಮ್ಮನ್ನು ಇನ್ನೂ ದುಃಖ ತಪ್ತವಾಗಿ ಮಾಡಿ ಬಿಡುತ್ತದೆ. ಇದಕ್ಕೆ ಗೌತಮ ಬುದ್ಧನು ಸುಲಭವಾಗಿ ಪರಿಹಾರವನ್ನು ತಿಳಿಸಿದ್ದಾನೆ. ಅದನ್ನು ನಾವು ಇಲ್ಲಿ ನೋಡೋಣ.
ನಾವು ಮೊದಲು ಅನೇಕ ನೋವು, ಸಂಕಷ್ಟಗಳನ್ನು ನೋಡಿರುತ್ತೇವೆ. ಆದರೆ ಅವುಗಳಿಂದ ಹೊರಗೆ ಬರುವುದೇ ಇಲ್ಲ. ಅದನ್ನು ಯೋಚಿಸಿ ಯೋಚಿಸಿ ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ.ಇನ್ನು ನಾವು ಕೇವಲ ನಮ್ಮ ಭವಿಷ್ಯದ ಬಗ್ಗೆ, ನಮ್ಮ ಜೀವನದ ಬಗ್ಗೆ, ನಮ್ಮ ಗುರಿಯನ್ನು ಸೇರುವ ಬಗ್ಗೆ,ನಮ್ಮ ಕನಸನ್ನು ನನಸು ಮಾಡುವುದರ ಬಗ್ಗೆ ಮಾತ್ರ ಯೋಚನೆ ಮಾಡೋಣ.ಯಾವುದೇ ಭಯವಿಲ್ಲದೆ ಧೈರ್ಯದಿಂದ, ಆತ್ಮವಿಶ್ವಾಸದಿಂದ ಮುಂದೆ ಸಾಗೋಣ.
ಮನಸ್ಸಿನ ದುಃಖದ ವಾತಾವರಣದಿಂದ ಹೇಗೆ ಹೊರಬರಬೇಕು ಎಂದು ಬುದ್ಧನು ಹೇಳುತ್ತಾನೆ. ಒಂದು ದಿನ ಒಬ್ಬ ಶಿಷ್ಯನು ಬುದ್ಧನ ಬಳಿ ಸ್ವಾಮಿ ಮನಸ್ಸಿನ ದುಃಖಗಳು ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ.ಪದೇ ಪದೇ ನೆನಪಾಗಿ ಉಳಿದಿರುತ್ತದೆ.ಇದರಿಂದ ಹೊರಬರುವ ಮಾರ್ಗ ತಿಳಿಸಿ ಎಂದ.ಆಗ ಗೌತಮ ಬುದ್ಧ ಸಮಯ ಬಂದಾಗ ತಿಳಿಸಿಕೊಡುವುದಾಗಿ ಹೇಳುತ್ತಾರೆ.
ಒಂದು ದಿನ ಗೌತಮ ಬುದ್ಧನು ಅವನ ಶಿಷ್ಯರ ಜೊತೆ ಅರಣ್ಯಕ್ಕೆ ಹೋದಾಗ ವಿಶ್ರಾಂತಿಗಾಗಿ ಒಂದು ನದಿಯ ದಡದಲ್ಲಿ ಕುಕಿತುಕೊಳ್ಳುತ್ತಾರೆ. ಆಗ ಗೌತಮ ಬುದ್ಧನು ಶಿಷ್ಯನನ್ನು ಕರೆದು ದಾಹ ಆಗುತ್ತಿದೆ ನೀರು ತೆಗೆದುಕೊಂಡು ಬಾ ಎಂದು ಹೇಳುತ್ತಾನೆ. ನೀರು ತರಲು ಶಿಷ್ಯ ಹೋದಾಗ ಅಲ್ಲಿ ಕೆಲರು ಬಟ್ಟೆ ಒಗೆಯುತ್ತಿದ್ದರಿಂದ ನೀರು ಕೊಳಕುಗೊಂಡಿತ್ತು.ಆದ್ದರಿಂದ ಪುನಃ ತಿರುಗಿ ಬಂದು ಸ್ವಾಮಿ ನೀರು ತುಂಬಾ ಕೊಳಕಾಗಿದೆ ಎನ್ನುತ್ತಾನೆ. ಸ್ವಲ್ಪ ಸಮಯದ ನಂತರ ಮತ್ತೆ ನೀರು ತರಲು ಹೋಗಲು ಹೇಳಿದನು ಬುದ್ಧ. ಶಿಷ್ಯ ಮತ್ತೆ ನೀರು ತರಲು ಹೋದಾಗ ನೀರು ಇನ್ನೂ ಕೊಳಕುಗೊಂಡಿತ್ತು. ಶಿಷ್ಯನು ಬುದ್ಧನಲ್ಲಿ ಬಂದು ಆ ನೀರು ಕುಡಿಯಲು ಸಾಧ್ಯವಿಲ್ಲ ನೀವು ಅನುಮತಿ ಕೊಟ್ಟರೆ ಪಕ್ಕದ ಗ್ರಾಮಕ್ಕೆ ಹೋಗಿ ನೀರು ತರುತ್ತೇನೆ”ಎಂದ.
ಬೇಡ ಸ್ವಲ್ಪ ತಾಳ್ಮೆಯಿಂದ ಇರು”ಎಂದು ಬುದ್ಧ ಹೇಳುತ್ತಾನೆ.ಸ್ವಲ್ಪ ಸಮಯದ ನಂತರ ಮತ್ತೆ ಶಿಷ್ಯನನ್ನು ಕಳಿಸುತ್ತಾನೆ. ಆಗ ಶಿಷ್ಯ ಹೋಗಿ ನೋಡಿದಾಗ ನೀರು ಶುದ್ಧವಾಗಿರುತ್ತದೆ. ನೀರನ್ನು ತಂದು ಬುದ್ಧನಿಗೆ ಕೊಡುತ್ತಾನೆ.ಬುದ್ಧನು ನೀರನ್ನು ಈ ತರಲು ಏನು ಮಾಡಿದೆ ಎಂದು ಕೇಳಿದಾಗ ಶಿಷ್ಯನು ನಾನು ಏನೂ ಮಾಡಿಲ್ಲ. ಅದು ತಾನಾಗಿಯೇ ಶುದ್ಧವಾಗಿತ್ತು ಎನ್ನುತ್ತಾನೆ.
ಇದರ ಅರ್ಥ ನಮ್ಮ ಮನಸ್ಸು ಸಹನೆಯಿಂದ ತಾಳ್ಮೆಯಿಂದ ಇದ್ದರೆ ನೀರಿನಂತೆ ಶುದ್ಧವಾಗುತ್ತದೆ. ಮನಸ್ಸು ಸಮಾಧಾನದಿಂದಿರಲು ತಾಳ್ಮೆಯಿಂದ ಕಾಯಬೇಕು.ಸಹನೆಯಿಂದ ಇರಬೇಕು. ಆಗಲೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಾಧ್ಯ.