ಗರ್ಭಿಣಿಯರು ಮೂರು ತಿಂಗಳು ಇಂತಹ ಆಹಾರಗಳನ್ನು ತಿನ್ನಬಾರದು

0 40

ಹೆಣ್ಣು ಮಕ್ಕಳು ಗರ್ಭಿಣಿಯರಾದಾಗ ಎಷ್ಟು ಎಚ್ಚರಿಕೆಯಿಂದ ಇದ್ದರೆ ಅಷ್ಟು ಒಳ್ಳೆಯದು. ಕೆಲವೊಂದು ಸಲ ಎಷ್ಟು ಎಚ್ಚರಿಕೆ ವಹಿಸಿದರೂ ಅಚಾತುರ್ಯವಾಗಿಬಿಡುತ್ತದೆ. ಇನ್ನು ಗರ್ಭಿಣಿಯರು ಆಹಾರದ ವಿಷಯದಲ್ಲಿ ಎಚ್ಚರ ವಹಿಸಬೇಕು. ಕೆಲವು ಆಹಾರಗಳನ್ನು ತಿನ್ನಲೇ ಬೇಕಾಗುತ್ತದೆ. ಇದರಿಂದ ಮಗು ಆರೋಗ್ಯವಾಗಿರುತ್ತದೆ. ಇನ್ನೂ ಕೆಲವು ಆಹಾರಗಳನ್ನು ಈ ಸಂದರ್ಭದಲ್ಲಿ ತಿನ್ನದಿರುವುದು ಒಳ್ಳೆಯದು. ಇದರಿಂದಾಗಿ ಮಗುವಿನ ಬೆಳವಣಿಗೆಗೆ ತೊಂದರೆ ಆಗಬಹುದು. ಹಾಗಾದರೆ ತಿನ್ನಬಾರದ ಆಹಾರಗಳು ಯಾವುದು ಎಂಬುದನ್ನು ತಿಳಿಯೋಣ.

ಕೆಲವು ಆಹಾರಗಳಿಂದ ಮಗುವಿನ ಬೆಳವಣಿಗೆ ಕುಂಠಿತ ಆಗಬಹುದು ಇಲ್ಲವೆ ಕೆಲವೊಂದು ಬಾರಿ ಅಬಾರ್ಷನ್ ಕೂಡ ಆಗಿಬಿಡಬಹುದು. ಇಂತಹ ಆಹಾರಗಳನ್ನು ಮೊದಲ ಮೂರು ತಿಂಗಳು ತಿನ್ನಲೆಬಾರದು. ಅವುಗಳಲ್ಲಿ ಮೊದಲನೆಯದಾಗಿ ಮೀನು. ಸಮುದ್ರದ ಮೀನಿನಲ್ಲಿ ಹೆಚ್ಚಿನ ಮರ್ಕ್ಯೂರಿ ಇರುವುದರಿಂದ ಇದನ್ನು ತಿನ್ನಬಾರದು‌. ಮರ್ಕ್ಯೂರಿ ಮಗುವಿನ ಬೆಳವಣಿಗೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಮೀನು ತಿನ್ನಬೇಕು ಅನ್ನಿಸಿದಲ್ಲಿ ಕೆರೆ ಮೀನು ಎಂದು ಕೇಳಿ ತೆಗೆದುಕೊಂಡು ತಿನ್ನಬಹುದು. ಕೆರೆಯ ಮೀನಿನಿಂದ ಮಗುವಿಗೆ ಯಾವುದೆ ತೊಂದರೆ ಆಗುವುದಿಲ್ಲ. ಎರಡನೆಯದಾಗಿ ಏಡಿ. ಅತಿಯಾದ ಉಷ್ಣತೆ ಹೊಂದಿರುತ್ತದೆ ಏಡಿಕಾಯಿ. ಸರಿಯಾಗಿ ಬೇಯಿಸದೆ ಏಡಿ ತಿಂದರೆ ಜಂತು ಹುಳ ಆಗುವ ಸಂಭವ ಇರುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿಯೂ ನೀಲಿ ಬಣ್ಣದ ಏಡಿ ತಿನ್ನುವುದೆ ಬೇಡ. ಇದರ ಬದಲು ಏಡಿಯನ್ನು ತಿನ್ನದಿರುವುದೆ ಉತ್ತಮ.

ಮೂರನೆಯದಾಗಿ ಪ್ರಾಣಿಗಳ ಲಿವರ್. ಪ್ರಾಣಿಗಳ ಲಿವರ್ ಕೂಡ ಉಷ್ಣತೆಯಿಂದ ಕೂಡಿರುತ್ತದೆ. ಯಾವುದೇ ಪ್ರಾಣಿಗಳ ಲಿವರ್ ತಿನ್ನುವುದುಬೇಡ. ನಾಲ್ಕನೆಯದಾಗಿ ಆಗತಾನೆ ಕರೆದು ತಂದ ಹಾಲು. ಆಗತಾನೆ ಕರೆದು ತಂದ ಹಾಲು ಮತ್ತು ಅದರಿಂದ ಮಾಡಿದ ಯಾವ ಆಹಾರಗಳು ಗರ್ಭಿಣಿಯರಿಗೆ ಒಳ್ಳೆಯದಲ್ಲ. ಹಾಲನ್ನು ನೂರು ಡಿಗ್ರಿ ಸೆಲ್ಸಿಯಸ್ ನಲ್ಲಿ ಬಿಸಿ ಮಾಡಿ, ಕುದಿಸಿ ಕುಡಿಯುವುದು ಉತ್ತಮ.

ಐದನೆಯದಾಗಿ ತಾಜಾ ಹಾಲಿನಿಂದ ಮಾಡಿದ ಚಿಸ್ ಗಳ ಬಳಕೆ ಕೂಡ ಮಾಡದಿರುವುದು ಉತ್ತಮ. ಆರನೆಯದಾಗಿ ಬೇಯಿಸದ ಮೊಟ್ಟೆ. ಮೊಟ್ಟೆ ಒಳ್ಳೆಯದು ಆದರೆ ಬೇಯಿಸದ ತಾಜಾ ಮೊಟ್ಟೆ ಒಳ್ಳೆಯದಲ್ಲ. ಇದು ಮಗುವಿನ ಬೆಳೆಯುತ್ತಿರುವ ಫೆಟಲ್ ಮೇಲೆ ಪ್ರಭಾವ ಬೀರುತ್ತದೆ. ಏಳನೆಯದಾಗಿ ಹಲಸು. ಹಲಸಿನ ಹಣ್ಣಿನಲ್ಲಿ ವಾಯುವಿನ ಅಂಶ ಹೆಚ್ಚಾಗಿದೆ. ಇದರಿಂದಾಗಿ ಕಾಲು ಸೆಳೆತ, ಹೊಟ್ಟೆ ನೋವು ಬರುವ ಸಾಧ್ಯತೆ ಇದೆ. ಮಗುವಿನ ಬೆಳವಣಿಗೆಗೆ ಅಪಾಯಕಾರಿ ಆಗಿದೆ. ಎಂಟನೆಯದಾಗಿ ನುಗ್ಗೆಕಾಯಿ. ಮಗುವಿನ ಬೆಳವಣಿಗೆಗೆ ನುಗ್ಗೆಕಾಯಿಯಲ್ಲಿರುವ ಉಷ್ಣತೆಯ ಅಂಶ ಒಳ್ಳೆಯದಲ್ಲ.

ಮಗುವಿನ ಬೆಳವಣಿಗೆ ಕುಂಠಿತಗೊಳಿಸುತ್ತದೆ. ತರಕಾರಿಗಳನ್ನು ಚೆನ್ನಾಗಿ ತೊಳೆಯದೆ ಬಳಸಿದರೆ ಅದರಲ್ಲಿ ಇರುವ ಬ್ಯಾಕ್ಟೀರಿಯಾಗಳು ಮಗುವಿಗೆ ತೊಂದರೆ ಮಾಡುವ ಸಂಭವ ಇರುತ್ತದೆ. ತರಕಾರಿಗಳನ್ನು ಮೂರು ಬಾರಿಯಾದರೂ ಬಿಸಿ ನೀರಿನಲ್ಲಿ ತೊಳೆಯುವುದು ಉತ್ತಮ. ಸೊಪ್ಪುಗಳನ್ನು ಸರಿಯಾಗಿ ನೋಡಿ ಹುಳ ಮೊಟ್ಟೆ ಇಟ್ಟಿದ್ದರೆ ಎಲ್ಲವನ್ನು ಸ್ವಚ್ಚಗೊಳಿಸಿ ತಿನ್ನುವುದು ಉತ್ತಮ. ಗರ್ಭಿಣಿಯರು ನೀರನ್ನು ಕುಡಿಯುವಾಗ ಕುದಿಸಿ ನೀರು ಕುಡಿಯುವುದು ಉತ್ತಮ. ಬಿಸಿ ನೀರು ಬಳಸುವುದು ಇನ್ನು ಉತ್ತಮ. ವೈರಸ್ ಗಳಿಂದ ಉಂಟಾಗುವ ಜಂತು ಹುಳುಗಳಿಂದ ಮಗುವಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಗರ್ಭಿಣಿಯರು ಜಂತು ಔಷಧ ತೆಗೆದುಕೊಳ್ಳಬಾರದು ಹಾಗಾಗಿ ಜಂತು ಹುಳ ಆಗದಂತೆ ನೋಡಿಕೊಳ್ಳುವುದೆ ಉತ್ತಮ.

ಗೆಣಸು ಕೆಟ್ಟದ್ದು ಎನ್ನುತ್ತಾರೆ‌. ಮೊದಲ ಬಾರಿಗೆ ಗರ್ಭವತಿಯಾಗಿದ್ದಲ್ಲಿ ಇದನ್ನು ಬಳಸದಿರುವುದೆ ಒಳ್ಳೆಯದು. ಕಪ್ಪು ಜೀರಿಗೆ ಗರ್ಭಿಣಿಯರಿಗೆ ಒಳ್ಳೆಯದಲ್ಲ. ಇದು ಉಳಿದವರಿಗೆ ಉತ್ತಮ. ಇದರಲ್ಲಿರುವ ಉಷ್ಣತೆ ಮಗುವಿನ ಬೆಳವಣಿಗೆಗೆ ತೊಂದರೆ ಮಾಡಬಹುದು. ಪಪ್ಪಾಯ ಹಣ್ಣು ಹಾಗೂ ಅನಾನಸ್ ಹಣ್ಣು ತಿನ್ನಲೆಬಾರದು. ಇದರಲ್ಲಿ ಅಬಾರ್ಷನ್ ಮಾಡುವ ಗುಣಗಳು ಇದೆ. ಹಾಗೂ ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ. ಬೆಳ್ಳುಳ್ಳಿ ಬಳಕೆ ಕಡಿಮೆ ಇರುವುದು ಉತ್ತಮ. ಸೂಕ್ಷ್ಮ ಇರುವವರಿಗೆ ಇದು ಒಳ್ಳೆಯದಲ್ಲ. ಕುಂಕುಮ ಹೂವು ಕುಡಿಯುವುದು ಕೂಡ ಸೂಕ್ಷ್ಮ ಇರುವ ಗರ್ಭಿಣಿಯರಿಗೆ ಒಳ್ಳೆಯದಲ್ಲ. ಬೇಕಾದಲ್ಲಿ ಐದು ತಿಂಗಳ ನಂತರ ಬಳಸಹುದು. ಎಳ್ಳು ಕೂಡ ಉಪಯೋಗಿಸುವುದು ಬೇಡ. ಹಾಗೂ ಅಲೊವೇರಾ ಇದರಲ್ಲಿ ಟ್ರಿಗ್ಗರ್ಸ್ ಎಂಬ ಅಂಶ ಇರುತ್ತದೆಯಂತೆ ಆದ್ದರಿಂದ ಗರ್ಭಿಣಿಯರಿಗೆ ಒಳ್ಳೆಯದಲ್ಲ. ಬ್ರೂಣ ಒಡೆದುಹೋಗುವ ಅಂಶ ಆಲೋವೇರಾದಲ್ಲಿ ಇರುತ್ತದೆಯಂತೆ.

ಮೊದಲ ಮೂರು ತಿಂಗಳು ಗರ್ಭಿಣಿಯರು ಹಾಗೂ ಮಗು ಇಬ್ಬರೂ ತುಂಬಾ ಸೂಕ್ಷ್ಮ ಇರುತ್ತಾರೆ. ಇಂತಹ ಆಹಾರಗಳನ್ನು ತೆಗೆದುಕೊಂಡಾಗ ಮಗುವಿನ ಬೆಳವಣಿಗೆ ಕಡಿಮೆ ಆಗಬಹುದು. ಅಥವಾ ಹುಟ್ಟಿದ ನಂತರ ಮಗುವಿನಲ್ಲಿ ಅಂಗಾಗಗಳ ದೋಷ ಉಂಟಾಗಬಹುದು. ಮೆದುಳು ಬೆಳವಣಿಗೆಗೆ ಕೂಡ ಪ್ರಭಾವ ಬೀರಬಹುದು. ಆದಷ್ಟು ಇವುಗಳ ಬಳಕೆ ಕಡಿಮೆ ಮಾಡಿಕೊಳ್ಳವುದು ಉತ್ತಮ.

Leave A Reply

Your email address will not be published.