ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅವರ ಜನ್ಮ ದಿನ. ಕೊರೋನ ವೈರಲ್ ಹಾವಳಿಯಿಂದ ಅಭಿಮಾನಿಗಳಿಗೆ ಮನೆಯ ಬಳಿ ಯಾರೂ ಬರಬೇಡಿ ಇರುವ ಕಡೆಯಿಂದಲೇ ಶುಭ ಹಾರೈಸಿ ಎಂದು ಕೇಳಿಕೊಂಡಿದ್ದರು. ಅಣ್ಣನನ್ನು ಕಳೆದುಕೊಂಡಿರುವ ದ್ರುವ ಮತ್ತು ಕುಟುಂಬದವರು ಅವರ ನೆನಪಿನಲ್ಲಿಯೇ ಕಾಲಕಳೆಯುತ್ತಿದ್ದಾರೆ. ಅದ್ದೂರಿಯಾಗಿ ಹುಟ್ಟು ಹಬ್ಬವನ್ನು ಆಚರಿಸದೆ ಸರಳವಾಗಿ ತಮ್ಮ ಆತ್ಮೀಯರು, ಕುಟುಂಬದವರೊಂದಿಗೆ ಆಚರಿಸಿಕೊಂಡಿದ್ದಾರೆ.
ಮೊನ್ನೆಯಷ್ಟೇ ಮೇಘನಾ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು, ಅಲ್ಲಿಗೆ ದ್ರುವ ಮತ್ತು ಪ್ರೇರಣಾ ಹೋಗಿದ್ದು ದ್ರುವ ಅತ್ತಿಗೆಗೆ ಶುಭ ಹಾರೈಸಿ ಭಾವುಕರಾಗಿದ್ದರು. ಮೇಘನಾ ಕೂಡ ದ್ರುವ ಸರ್ಜಾ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿ “ನನ್ನೊಂದಿಗೆ ನೀನು ಹೇಗೆ ಸದಾ ನಿಂತಿರುವೆಯೋ, ನಿನ್ನೊಂದಿಗೆ ನಾನು ಕೂಡ ಸದಾ ನಿಂತಿರುತ್ತೇನೆ. ಸದಾ ನಿನಗೆ ಸಂತೋಷವೇ ಸಿಗಲಿ ಎಂದು ಹಾರೈಸಿ ಒಂದು ಫೋಟೋವನ್ನು ಹಾಕಿ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ದ್ರುವ ಸರ್ಜಾ ಹುಟ್ಟು ಹಬ್ಬಕ್ಕೆ ಮೇಘನಾ ಅವರೂ ಭಾಗವಹಿಸಿದ್ದರು. ಮೊದಲು ಚಿರು ಫೋಟೋಗೆ ನಮಸ್ಕರಿಸಿ, ನಂತರ ದ್ರುವ ಅವರಿಗೆ ಚಿತ್ರರಂಗದಲ್ಲಿ ನೀನು ತುಂಬಾ ಎತ್ತರಕ್ಕೆ ಬೆಳೆಯಬೇಕು, ನಿನ್ನ ಅಣ್ಣನಂತೆ ದೊಡ್ಡ ಹೆಸರು ಮಾಡಬೇಕು, ನಿನ್ನ ಗೆಲುವಿನ ಹಿಂದೆ ಅಣ್ಣ ಚಿರು ಯಾವಾಗಲೂ ನಿನ್ನ ಜೊತೆ ಇರುತ್ತಾರೆ ಒಳ್ಳೆಯದಾಗಲಿ ಹುಟ್ಟು ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.