ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಪವರ್ ಸ್ಟಾರ್ ಪುನೀತ್

0 0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಅವರ ಹೊಸ ಲುಕ್ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಲಾಕ್ ಡೌನ್ ನಲ್ಲಿ ಉದ್ದ ಗಡ್ಡ, ಮೀಸೆ ಬಿಟ್ಟಿದ್ದರು. ಈಗ ಗಡ್ಡ ತೆಗೆದು ಮೀಸೆ ಸ್ಟೈಲ್ ನ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಪುನೀತ್ ರಾಜಕುಮಾರ್ ಗಡ್ಡದ ಗೆಟಪ್ ನಲ್ಲಿದ್ದರು. ಈಗ ಗಡ್ಡ ಶೇವ್ ಮಾಡಿ ಮೀಸೆ ಮಾತ್ರ ಬಿಟ್ಟಿದ್ದಾರೆ. ಈ ಹೊಸ ಲುಕ್ ನಲ್ಲಿ ಪುನೀತ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಉದ್ದ ಮೀಸೆ ಲುಕ್ ನಲ್ಲಿ ಪುನೀತ್ ಕಾಣಿಸಿಕೊಳ್ಳುವುದು ಅಪರೂಪ.

ಇತ್ತೀಚಿಗೆ ‘ಮಾಯಾಬಜಾರ್’ ಚಿತ್ರದ ಹಾಡಿನಲ್ಲಿ ಅಪ್ಪು ಮೀಸೆ ಗೆಟಪ್ ನಲ್ಲಿ ಮಿಂಚಿದ್ದರು. ರೆಟ್ರೋ ಸ್ಟೈಲ್ ನಲ್ಲಿ ಪುನೀತ್ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೆ ಮೀಸೆ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಜೇಮ್ಸ್ ಅಥವಾ ಯುವರತ್ನ ಸಿನಿಮಾಗೆ ಇರಬಹುದು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಪುನೀತ್ ಯುವರತ್ನ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ, ಚಿತ್ರದ ಹೈ ವೋಲ್ಟೇಜ್ ಹಾಡಿನ ಚಿತ್ರೀಕರಣ ಮುಗಿಸಿದ್ದಾರೆ, ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಜೊತೆಗೆ ಜೇಮ್ಸ್ ಸಿನಿಮಾದ ಚಿತ್ರೀಕರಣ ಸಹ ಶುರುವಾಗುತ್ತಿದೆ. ಆದರೆ ಈ ಲುಕ್ ಜೇಮ್ಸ್ ಸಿನಿಮಾಕ್ಕಾ ಅಥವಾ ಯುವರತ್ನ ಸಿನಿಮಾಕ್ಕಾ ಅಥವಾ ಲಕ್ ಟೆಸ್ಟ್ ಎಂಬ ಕೂತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಇತ್ತೀಚಿಗಷ್ಟೆ ಪುನೀತ್ ಗೋವಾದಲ್ಲಿ ದಾಡಿ ಬಿಟ್ಟಿರುವ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು, ಆದರೆ ಆಗಲೇ ಗಡ್ಡ ಶೇವ್ ಮಾಡಿದ್ದಾರೆಂದು ತಿಳಿದುಬಂದಿದೆ. ಒಟ್ಟಿನಲ್ಲಿ ಪುನೀತ್ ಯಾವ ಲುಕ್ ನಲ್ಲಿ ಕಾಣಿಸಿಕೊಂಡರು ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ.

Leave A Reply

Your email address will not be published.