ಕನ್ನಡ ಸಿನಿಮಾ ರಂಗದಲ್ಲಿ ಶೃತಿಯವರ ಅಭಿನಯ ಎಲ್ಲರಿಗೂ ಹಿಡಿಸುವಂತದ್ದು. ಎಷ್ಟೋ ಕಷ್ಟಗಳ ನಡುವೆಯು ತನ್ನ ಅಭಿನಯ ಕಲೆ ಹಾಗೂ ಶ್ರದ್ಧೆಯಿಂದ ಚಿತ್ರರಂಗದಲ್ಲಿ ಹೆಸರು ಮಾಡಿದವರು ಶೃತಿ. ಅಳುವ ಪಾತ್ರಗಳನ್ನು ನೆನಪು ಮಾಡಿಕೊಂಡರೆ ಮೊದಲು ನೆನಪಾಗುವುದೆ ಶೃತಿಯವರು. ಕನ್ನಡದ ಎಲ್ಲ ದಿಗ್ಗಜರೊಂದಿಗೆ ಹಾಗೂ ಈಗಿನ ನಟರೊಂದಿಗೂ ನಟಿಸಿರುವ ಹೆಗ್ಗಳಿಕೆ ಅವರದು. ಎಲ್ಲಾ ಪಾತ್ರಗಳನ್ನು ತನ್ನದಾಗಿಸಿಕೊಂಡು ಪಾತ್ರಕ್ಕೆ ಜೀವ ತುಂಬುವ ಹೆಮ್ಮೆಯ ನಟಿ. ಇವರ ಬಗ್ಗೆ ಡಾಕ್ಟರ್. ವಿಷ್ಣುವರ್ಧನ್ ಅವರು ಹೆಮ್ಮೆಯ ಮಾತುಗಳನ್ನು ಹೇಳಿದ್ದಾರೆ. ಅವುಗಳನ್ನು ಎಸ್ ನಾರಾಯಣ್ ಅವರು ವಿವರಿಸಿದ ರೀತಿ ಹೀಗಿದೆ.
ಎಸ್ ನಾರಾಯಣ್ ಅವರು ವೀರಪ್ಪ ನಾಯಕ ಸಿನಿಮಾ ಬರೆಯುವಾಗ ಶೃತಿ ಅವರನ್ನು ನೆನಪಿಸಿಕೊಂಡೆ ಬರೆದಿದ್ದರಂತೆ. ವಿಷ್ಣುವರ್ಧನ್ ಅವರು ನಾಯಕನ ಪಾತ್ರ ಮಾಡುತ್ತಿದ್ದರು. ವಿಷ್ಣುವರ್ಧನ್ ನಾಯಕಿ ಯಾರು ಎಂಬುದು ತಿಳಿದಿರಲಿಲ್ಲ. ನಾಯಕಿಯ ಪಾತ್ರದ ಪರಿಚಯ ಮಾತ್ರ ಇತ್ತು. ಅದಾಗಲೆ ಶೃತಿ ಅವರು ಎಸ್ ನಾರಾಯಣ್ ಅವರ ಮೂರು ಚಿತ್ರದಲ್ಲಿ ಅಭಿನಯಿಸಿ ಚಿತ್ರ ಕೂಡಾ ಗೆದ್ದಿತ್ತು. ವೀರಪ್ಪ ನಾಯ್ಕ ಚಿತ್ರದಲ್ಲಿ ಕೂಡ ಅವರೆ ನಟಿಸಬೇಕೆಂದು ಎಸ್ ನಾರಾಯಣ್ ಶೃತಿಯವರಿಗೆ ಪೋನ್ ಮಾಡಿದಾಗ ಶೃತಿಯವರ ತಾಯಿ ಶೃತಿಯವರು ಮದುವೆಯಾಗುತ್ತಿದ್ದಾರೆ. ಮದುವೆಯಾಗಿ ನಾಲ್ಕು ದಿನಕ್ಕೆ ಚಿತ್ರೀಕರಣಕ್ಕೆ ಬರುವುದು ಅಸಾಧ್ಯ ಬೇರೆಯವರನ್ನು ನೋಡಿಕೊಳ್ಳಿ ಎಂದರಂತೆ. ಆದರೂ ಶೃತಿಯವರೆ ಈ ಪಾತ್ರಕ್ಕೆ ಬೇಕು ಎಂದಿದ್ದರಂತೆ ಎಸ್ ನಾರಾಯಣ್. ಈ ವಿಷಯ ತಲುಪಿದಾಗ ಎಸ್ ನಾರಾಯಣ್ ಮದುವೆ ಆಗುತ್ತಿರುವುದಕ್ಕೆ ಶುಭಾಶಯ ಆದರೆ ವೀರಪ್ಪ ನಾಯ್ಕ ಚಿತ್ರಕ್ಕೆ ನಿಮ್ಮನ್ನು ಬಿಟ್ಟು ಬೇರೆಯವರ ಕಲ್ಪನೆ ಬರುತ್ತಿಲ್ಲ. ದಯವಿಟ್ಟು ಸಹಕರಿಸಿ ಎಂದರು. ಅದಕ್ಕೆ ಶೃತಿಯವರು ಎಷ್ಟು ದಿನ ಬೇಕು ಚಿತ್ರೀಕರಣಕ್ಕೆ ಕೇಳಿದಾಗ ಇಪ್ಪತ್ತೈದು ದಿನ ಬರಲು ಹೇಳಿದಾಗ ಬರುವೆ ಎಂದಿದ್ದರು ಶೃತಿ. ಯಾವ ಹೆಣ್ಣು ಮಕ್ಕಳು ಮದುವೆಯಾದ ನಾಲ್ಕು ದಿನಕ್ಕೆ ಕೆಲಸಕ್ಕೆ ಬರುವುದಿಲ್ಲ ಇದರಲ್ಲಿ ಶೃತಿಯವರ ಶ್ರದ್ಧೆ ಎದ್ದು ತೋರುತ್ತದೆ.
ವಿಷ್ಣುವರ್ಧನ್ ಅವರು ಚಿತ್ರಿಕರಣದ ವೇಳೆಗೆ ಮೇಕಪ್ ಮಾಡಿಕೊಂಡು ಬಂದ ಶೃತಿಯವರನ್ನು ನೋಡಿ ಎದ್ದು ನಿಂತಿದ್ದರು. ಮದುವೆಯಾಗಿ ನಾಲ್ಕನೆಯ ದಿನಕ್ಕೆ ಚಿತ್ರೀಕರಣಕ್ಕೆ ಬಂದಿದ್ದು ಯಾಕೆ ಆಶ್ಚರ್ಯವಾಗಿ ಕೇಳಿದ್ದರು. ಅದಕ್ಕೆ ಶೃತಿಯವರು ಸರ್ ನಾನೆ ನಾಯಕಿಯಾಗಿಬೇಕು ಎಂದರು ಅದಕ್ಕೆ ಬಂದೆ ಎಂದರಂತೆ. ಆಗ ವಿಷ್ಣುವರ್ಧನ್ ಅವರು ಎಸ್ ನಾರಾಯಣ್ ಅವರಿಗೆ ಈಗ ನಿಮ್ಮ ಸಿನಿಮಾ ಗೆಲ್ಲುತ್ತದೆ ಎಂದಿದ್ದರು. ಯಾಕೆಂದರೆ ಶೃತಿಯವರು ಪಾತ್ರವನ್ನು ತಿಂದು ಅಭಿನಯಿಸುತ್ತಾರೆ ನಿಮ್ಮ ಆಯ್ಕೆ ಸರಿಯಾಗಿದೆ ಎಂದಿದ್ದರು. ಒಬ್ಬ ನಿರ್ದೇಶಕನಿಗೆ ಅಂದು ಕೊಂಡಿದ್ದು ಆದರೆ ಖುಪಿಯಾಗುತ್ತದೆ. ಅಂದುಕೊಂಡ ಪಾತ್ರಕ್ಕೆ ಪಾತ್ರಧಾರಿ, ಚಿತ್ರೀಕರಣದ ಜಾಗ ಸಿಕ್ಕಿದಾಗ ಸಣ್ಣ ಪುಟ್ಟ ಖುಷಿಯಾಗುತ್ತದೆ. ವಿಷ್ಣುವರ್ಧನ್ ಹಾಗೂ ಶೃತಿಯವರ ಅಭಿನಯ ಎಸ್ ನಾರಾಯಣ್ ಅವರ ಕನಸು ಈಡೇರಿದಂತೆ ಕಂಡಿತ್ತು. ಒಬ್ಬರಿಗಿಂತ ಒಬ್ಬರು ಅಷ್ಟು ಅದ್ಭುತವಾಗಿ ಅಭಿನಯಿಸುತ್ತಿದ್ದರು. ಶೃತಿಯವರು ತುಂಬಾ ಡೆಂಜರ್ ಅವರ ಜೊತೆಗೆ ಅಭಿನಯಿಸುವು ಕಷ್ಟ ಎಂದು ವಿಷ್ಣುವರ್ಧನ್ ಅವರು ಹೇಳುತ್ತಿದ್ದರಂತೆ.
ಒಬ್ಬ ಕಲಾವಿದರ ಅಭಿನಯವನ್ನು ಇನ್ನೊಂದು ಕಲಾವಿದ ಹೊಗಳುವುದು ಒಂದು ಪರಿಪಕ್ವ ಮನುಷ್ಯನಿಂದಲೆ ಸಾಧ್ಯ ಅದು ಡಾ ರಾಜ್ ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅವರಿಗೆ ಇತ್ತು ಎಂದು ಎಸ್ ನಾರಾಯಣ್ ಹೇಳುತ್ತಾರೆ. ವೀರಪ್ಪನಾಯ್ಕ ಚಿತ್ರೀಕರಣದ ಸಮಯದಲ್ಲಿ ತುಂಬ ವಿಶೇಷವಾದ ದಿನ ಎಂದರೆ ಸಪ್ಟೆಂಬರ್ ಹದಿನೆಂಟನೇ ದಿನ. ಡಾಕ್ಟರ್ ವಿಷ್ಣುವರ್ಧನ್ ಅವರ ಜನ್ಮದಿನ. ವಿಶೇಷವೆಂದರೆ ಶೃತಿಯವರ ಜನ್ಮದಿನವು ಅಂದೆ ಆಗಿತ್ತು. ಎಸ್ ನಾರಾಯಣ್ ಅವರು ಪತ್ರಿಕೆಯವರನ್ನು ಕರೆಸಿ, ಚಿತ್ರ ತಂಡದ ಜೊತೆಯಲ್ಲಿ ಆಚರಿಸಿದ್ದರು. ಈ ದಿನ ಯಾವತ್ತು ಮರೆಯಲಾಗುವುದಿಲ್ಲ ಎಂದು ಎಸ್ ನಾರಾಯಣ್ ಹೇಳುತ್ತಾರೆ. ಕೆಲವೊಂದು ಘಟನೆಗಳನ್ನು ಹೇಮಾ ಚೌಧರಿ ಅವರ ಬಾಯಲ್ಲಿ ಕೇಳಬೇಕು ಅದರ ವಿಶೇಷತೆಯೆ ಬೇರೆ. ಹೇಮಾ ಚೌಧರಿ ವೀರಪ್ಪ ನಾಯ್ಕನ ತಾಯಿಯ ಪಾತ್ರ ಮಾಡಿದವರು. ಅವರನ್ನು ಆಯ್ಕೆ ಮಾಡಿದಾಗ ವಿರೋಧಗಳು ವ್ಯಕ್ತವಾಗಿತ್ತು ಆದರೆ ಹೇಮಾ ಚೌಧರಿ ಅವರು ಆ ಪಾತ್ರಕ್ಕೆ ತಕ್ಕಂತೆ ಅಭುನಯಿಸಿದ್ದರು ಎಂದು ಎಸ್ ನಾರಾಯಣ್ ಅವರು ಹೇಳುತ್ತಾರೆ. ಇವು ಶೃತಿಯವರು ಅಭಿನಯಕ್ಕೆ ನೀಡಿದ ಮಹತ್ವ ಹಾಗೂ ಶ್ರದ್ಧೆಯನ್ನು ತಿಳಿಸುತ್ತದೆ.