ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ಜನರು ಇಷ್ಟ ಪಡುತ್ತಿದ್ದ ವ್ಯಕ್ತಿ ಅಂದರೆ ಅದೂ ಶೈನ್ ಶೆಟ್ಟಿ . ಇತ್ತೀಚಿನ ದಿನಗಳಲ್ಲಿ ಶೈನ್ ಶೆಟ್ಟಿ ಅವರು ಶೈನಿಂಗ್ ಸ್ಟಾರ್ ಹೊರಹೊಮ್ಮುತ್ತಿದ್ದಾರೆ. ಇತ್ತೀಚಿಗೆ ಅಷ್ಟೇ ಶೈನ್ ಶೆಟ್ಟಿ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ಶೈನ್ ಶೆಟ್ಟಿ ಅವರ ಮದುವೆ ಬಗ್ಗೆ ಏನು ಹೇಳಿದ್ದಾರೆ ನೋಡೋಣ.

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಅವರು ಇತ್ತೀಚೆಗೆ ಹಲವಾರು ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಅಭಿಮಾನಿಗಳಿಗೆ ಮನರಂಜನೆ ಹಾಗೂ ಸಂತೋಷವನ್ನು ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಮೈಸೂರಿನ ಒಂದು ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಜೊತೆ ಜೊತೆಯಲ್ಲಿ ದಾರವಾಹಿಯ ನಟಿ ಮೇಘ ಶೆಟ್ಟಿ ಕೂಡ ಭಾಗವಹಿಸಿ ತಮ್ಮ ಅಭಿಮಾನಿಗಳಿಗೆ ಬಹಳಷ್ಟು ಮನರಂಜನೆ ನೀಡಿದ್ದಾರೆ. ಶೈನ್ ಶೆಟ್ಟಿ ಹಾಗೂ ಮೇಘಾ ಶೆಟ್ಟಿ ಇವರಿಬ್ಬರು ಈಗ ಬಹಳಷ್ಟು ಪ್ರಸಿದ್ಧಿ ಹೊಂದಿದ ಕಲಾವಿದರು ಹಾಗೂ ಇಬ್ಬರು ಕೂಡ ಶೆಟ್ಟಿ ಸಮುದಾಯಕ್ಕೆ ಸೇರಿದ ಕಲಾವಿದರು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಹಾಗೂ ಮೇಘ ಅವರ ಮದುವೆ ಬಗ್ಗೆ ಮಾತನಾಡುತ್ತಿದ್ದಾರೆ. ಮೇಘ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರೂ ಒಂದಾದರೆ ಚೆನ್ನಾಗಿರುತ್ತದೆ ಎನ್ನುವ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶೈನ್ ಶೆಟ್ಟಿ ಅವರು ಈ ರೀತಿಯಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ನಡೆದ ರಂಗದೇ ಕಾರ್ಯಕ್ರಮದಲ್ಲಿ ತಾನು ಮೊದಲ ಬಾರಿಗೆ ಮೇಘ ಶೆಟ್ಟಿ ಅವರನ್ನು ಭೇಟಿ ಮಾಡಿದ್ದೆ. ಮೇಘ ಶೆಟ್ಟಿ ಅವರು ಕೂಡ ಮಂಗಳೂರಿನವರು ನನಗೆ ಈ ಹಿಂದೆ ಮೇಘ ಶೆಟ್ಟಿ ಅವರ ಪರಿಚಯವಿರಲಿಲ್ಲ. ಮೈಸೂರಿನಲ್ಲಿ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು. ನನ್ನ ಹಾಗೂ ಮೇಘ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ದಯವಿಟ್ಟು ಹೊರಡಿಸಬೇಡಿ. ನನಗೆ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಲು ಹೇಳಿದ್ದಾರೆ ಹಾಗೆಯೇ ಬಂದಿದ್ದೇನೆ. ನನ್ನ ಹಾಗೂ ಮೇಘ ಅವರ ಮದುವೆಯ ಬಗ್ಗೆ ಹರಿದಾಡುತ್ತಿರುವ ಸುಳ್ಳುಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಹಾಗೆಯ ದೀಪಿಕಾ ದಾಸ್ ಅವರ ಬಗ್ಗೆ ಮಾತನಾಡಿದ ಶೈನ್ ಶೆಟ್ಟಿ ದೀಪಿಕಾ ಕೂಡ ನನ್ನ ಒಬ್ಬಳು ಉತ್ತಮ ಗೆಳತಿ ನಾವಿಬ್ಬರೂ ಉತ್ತಮ ಸ್ನೇಹಿತರಾಗಿದ್ದೇವೆ ನಾನೀಗ ನನ್ನ ಸಿನಿಮಾದ ಕಡೆ ಗಮನ ಕೊಡಬೇಕುಸಿನಿಮಾರಂಗದಲ್ಲಿ ಬಹಳ ಬೆಳೆಯಬೇಕು ಅನ್ನುವ ಆಸೆ ಇದೆ ಹಾಗಾಗಿ ನಾನು ಮದುವೆ ಕುರಿತಾಗಿ ಯೋಚನೆ ಮಾಡಿಲ್ಲ. ಮುಂದೆ ಸಮಯ ಬಂದಾಗ ಮದುವೆ ಬಗ್ಗೆ ಯೋಚಿಸುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೆ ಶೈನ್ ಶೆಟ್ಟಿ ತಿಳಿಸಿದ್ದಾರೆ. ಇನ್ನು ಇವರ ಮದುವೆ ಬಗ್ಗೆ ಮಾತನಾಡಿದ್ದು ಕೂಡ ಶೈನ್ ಶೆಟ್ಟಿ ಅವರ ಅಭಿಮಾನಿಗಳೇ ಆಗಿರುವುದರಿಂದ ಅಭಿಮಾನಿಗಳಿಗೆ ಪ್ರೀತಿಯಿಂದ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಮತ್ತೆ ಇತ್ತೀಚಿಗೆ ಶೈನ್ ಶೆಟ್ಟಿ ಅವರ ಮದುವೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಶೈನ್ ಶೆಟ್ಟಿ ಅವರು ಗಾಯಕಿ ಸಂಗೀತ ರಾಜೀವ್ ಅವರನ್ನು ವಿವಾಹವಾಗುತ್ತಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಗೀತ ರಾಜೀವ್ ಅವರು ಹಿನ್ನೆಲೆ ಗಾಯಕಿಯಾಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ರಿಯಾಲಿಟಿ ಶೋ ದಲ್ಲಿ ಜಡ್ಜ್ ಆಗಿ ಕೂಡ ಭಾಗವಹಿಸುತ್ತಿದ್ದಾರೆ. ಇನ್ನು ಈ ಎಲ್ಲ ಮಾತುಗಳಿಗೆ ಪೂರಕ ಎಂಬಂತೆ ಸಂಗೀತ ರಾಜೀವ್ ತಮ್ಮ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಇತ್ತೀಚೆಗಷ್ಟೇ ತಾನು ಒಬ್ಬ ವ್ಯಕ್ತಿಯ ಕೈ ಹಿಡಿದಿರುವ ಫೋಟೋವನ್ನು ಹಾಕಿ ಇದು ಯಾರ ಕೈ ಎಂದು ಗೆಸ್ ಮಾಡುವಂತೆ ಪೋಸ್ಟ್ ಒಂದನ್ನು ಹಾಕಿದ್ದರು. ಬಹಳಷ್ಟು ಜನರು ಅದಕ್ಕೆ ಆ ಕೈ ಶೈನ್ ಶೆಟ್ಟಿ ಅವರ ಕೈ ಎಂದು ಕಾಮೆಂಟ್ ಮಾಡಿದ್ದರು. ನಂತರ ಸಂಗೀತ ರಾಜೀವ್ ಹಾಗೂ ಶೈನ್ ಶೆಟ್ಟಿ ಇಬ್ಬರು ಸೇರಿ ತಾವಿಬ್ಬರು ಮದುವೆಯಾಗುತ್ತಿರುವ ವಿಷಯವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *