ಕೊರೋನದ ಸಂಕಷ್ಟದ ಸಮಯದಲ್ಲೂ ಉದ್ಯಮಿ ಮುಖೇಶ್​​ ಅಂಬಾನಿ ಗಂಟೆಗೆ ಎಷ್ಟು ಕೋಟಿ ಗಳಿಕೆ ಮಾಡಿದ್ದಾರೆ ಗೊತ್ತೇ

0 0

ಕೊರೋನದ ಸಂಕಷ್ಟದ ಸಮಯದಲ್ಲೂ ಅಂಬಾನಿ ಕೋಟಿಗಟ್ಟಲೆ ಹಣವನ್ನು ಗಳಿಸಿದ್ದಾರೆ ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಕೊರೋನ ಹೊಡೆತಕ್ಕೆ ಜಗತ್ತಿನ ಹಲವು ದೇಶಗಳ ಆರ್ಥಿಕತೆಯೇ ಬುಡಮೇಲಾಗಿದೆ. ವ್ಯಾಪಾರ ವಹಿವಾಟಿಗಂತೂ ಕೊರೋನ ಕಾಲ ಮರ್ಮಾಘಾತವೇ ಎಂದು ಹೇಳಬಹುದು. ಆದರೆ, ಇಂತಹ ಸಂಕಷ್ಟದ ಕಾಲದಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್​​ ಅಂಬಾನಿ ಕಳೆದ 6 ತಿಂಗಳಲ್ಲಿ ಪ್ರತಿ 1 ಗಂಟೆಗೆ 90 ಕೋಟಿ ರೂಪಾಯಿಯಂತೆ ಗಳಿಕೆ ಮಾಡಿದ್ದಾರೆ ಎಂಬ ಅಂಶ ಐಐಎಫ್.ಎಲ್ ವೆಲ್ತ್​​ ಮ್ಯಾನೆಜ್​ಮೆಂಟ್​ ಮತ್ತು ಹುರುನ್​ ಇಂಡಿಯಾ ಸಂಸ್ಥೆಗಳ ವರದಿಯಿಂದ ಹೊರ ಬಿದ್ದಿದೆ.

ವರದಿಯ ಪ್ರಕಾರ ಅಂಬಾನಿ ಒಡೆತನದ ಇಂಧನ​ ಹಾಗೂ ಟೆಲಿಕಾಂ ಉದ್ದಿಮೆಗಳು ಕಳೆದ 12 ತಿಂಗಳ ಅವಧಿಯಲ್ಲಿ ಭಾರಿ ಹಣ ಗಳಿಕೆ ಮಾಡಿದ್ದು, ಇದರಿಂದಲೇ ಅಂಬಾನಿಗೆ ಶೇ 73 ರಷ್ಟು ವಾರ್ಷಿಕ ಆದಾಯ ಬಂದಿದೆ. ಹುರುನ್​ ಇಂಡಿಯಾ ಶ್ರೀಮಂತರ ಪಟ್ಟಿಯೂ ಬಿಡುಗಡೆಯಾಗಿದ್ದು, ಸತತವಾಗಿ 9ನೇ ಬಾರಿಯೂ 63 ವರ್ಷದ ಮುಖೇಶ್​​ ಅಂಬಾನಿಯೇ ದೇಶದ ನಂ.1 ಶ್ರೀಮಂತನಾಗಿ ಹೊರ ಹೊಮ್ಮಿದ್ದಾರೆ. ಈ ಮೊದಲು 2,77,700 ಕೋಟಿ ರೂನಷ್ಟಿದ್ದ ಅಂಬಾನಿಯ ಒಟ್ಟು ಆಸ್ತಿಯ ಮೌಲ್ಯ ಕೇವಲ ಒಂದು ವರ್ಷದ ಅಂತರದಲ್ಲಿ 6,58,400 ಕೋಟಿಗೆ ಏರಿಕೆಯಾಗಿದೆ. ಕರೋನ ಕಷ್ಟದ ಸಮಯದಲ್ಲೂ ಅಂಬಾನಿಯ ಉದ್ದಿಮೆಗಳು ಮಾತ್ರ ಆದಾಯ ಗಳಿಸುತಿತ್ತು ಎನ್ನುವುದು ಆಶ್ಚರ್ಯವಾದರೂ ಸತ್ಯವಾಗಿದೆ.

Leave A Reply

Your email address will not be published.