ಮುಖದ ಕಾಂತಿ, ಗ್ಲೋ ಹೆಚ್ಚಿಸಿಕೊಳ್ಳಲು ಮನೆಯಲ್ಲಿಯೇ ಏನು ಮಾಡಬಹುದೆಂದು ಈ ಲೇಖನದ ಮೂಲಕ ತಿಳಿಯೋಣ.
ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಆಂತರಿಕ ಸೌಂದರ್ಯ ಮುಖ್ಯ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಟೆನ್ಷನ್ ಮಾಡಿಕೊಳ್ಳಬಾರದು. ಕನಿಷ್ಟ ದಿನಕ್ಕೆ 4 ಲೀಟರ್ ನೀರನ್ನು ಕುಡಿಯಬೇಕು. ಪ್ರತಿದಿನ ಮೋಷನ್ ಗೆ 2 ರಿಂದ 3 ಸಲ ಹೋಗಬೇಕು . ಹಣ್ಣು ತರಕಾರಿಗಳನ್ನು ಮತ್ತು ಮೊಳಕೆಯೊಡೆದ ಕಾಳುಗಳನ್ನು ಹೆಚ್ಚು ಸೇವಿಸಬೇಕು. ಹಣ್ಣುಗಳಲ್ಲಿರುವ ಆಂಟಿ ಆ್ಯಕ್ಸಿಡೆಂಟ್ ಗಳು ನಮ್ಮ ಮುಖದ ಗ್ಲೋ ಹೆಚ್ಚಿಸುತ್ತದೆ. ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸಬೇಕು. ಟೊಮೆಟೊ ಹಣ್ಣಿನಲ್ಲಿರುವ ಲೈಕೋ ತ್ರಿ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಪಪ್ಪಾಯ ಪೇಸ್ಟ್ ಮಾಡಿ ಅದಕ್ಕೆ ಕಿತ್ತಳೆ ರಸ ಮತ್ತು ಓಟ್ಸ್ ಸೇರಿಸಿ ಹಚ್ಚಿಕೊಂಡು 20 ನಿಮಿಷ ಬಿಟ್ಟು ವಾಷ್ ಮಾಡುವುದರಿಂದ ಮುಖದ ಗ್ಲೋ ಹೆಚ್ಚಾಗುತ್ತದೆ. ಹುತ್ತದ ಮಣ್ಣನ್ನು ಪ್ರತಿದಿನ ನೆನೆಸಿ ಬೆಳಗ್ಗೆ ಹಾಗೂ ಸಂಜೆ ಹಚ್ಚುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಹುತ್ತದ ಮಣ್ಣಿಗೆ ಮುಲ್ತಾನಿ ಮಿಟ್ಟಿಯನ್ನು ಮಿಕ್ಸ್ ಮಾಡಿ ಹಚ್ಚಬಹುದು.
ಪಪ್ಪಾಯ ಮತ್ತು ಬಾಳೆಹಣ್ಣನ್ನು ಪೇಸ್ಟ್ ರೀತಿ ಮಾಡಿ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆದುಕೊಳ್ಳಬೇಕು. ಟೊಮೆಟೊ ಹಣ್ಣಿನ ಪ್ಯಾಕ್ ಮತ್ತು ಬಾಳೆಹಣ್ಣಿನ ಸಿಪ್ಪೆಯ ಮಸಾಜ್ ಮಾಡುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಚರ್ಮದ ಕಾಂತಿ ಹೆಚ್ಚಲು ವಿಟಮಿನ್ ಸಿ ಇರುವ ಹಣ್ಣು, ತರಕಾರಿಗಳನ್ನು ಸೇವಿಸಬೇಕು. ಕ್ಯಾರೆಟ್ ಪೇಸ್ಟ್ ಮಾಡಿಕೊಂಡು ಅದಕ್ಕೆ ಅಲೋವೆರಾ ಜೆಲ್, ನಿಂಬೆರಸ, ಅರಿಶಿಣ, ಮುಲ್ತಾನಿ ಮಿಟ್ಟಿ ಮತ್ತು ನೀರನ್ನು ಸೇರಿಸಿ ಪ್ಯಾಕ್ ಮಾಡಿಕೊಂಡು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ಮುಖವನ್ನು ತೊಳೆಯಬೇಕು ಇದರಿಂದ ಮುಖದ ಗ್ಲೋ ಹೆಚ್ಚಾಗುತ್ತದೆ ಪ್ರತಿದಿನ ಹೀಗೆ ಮಾಡಬೇಕು. ಒಂದು ಚಮಚ ಕಡಲೆ ಹಿಟ್ಟು, 1 ಚಮಚ ಹೆಸರು ಕಾಳಿನ ಹಿಟ್ಟು, ಅರ್ಧ ಚಮಚ ಅರಿಶಿಣ, ಅರ್ಧ ಕಪ್ ಮೊಸರು, ಜೇನುತುಪ್ಪವನ್ನು ಮಿಶ್ರಣ ಮಾಡಿ ಈ ಲೇಪವನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತೊಳೆಯಬೇಕು ಇದರಿಂದ ಮುಖದ ಗ್ಲೋ ಹೆಚ್ಚಾಗುವುದರ ಜೊತೆಗೆ ಮುಖ ವೈಟ್ ಆಗುತ್ತದೆ. ಒಮೆಗಾ ತ್ರಿ ಯನ್ನು ತೆಗೆದುಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಈ ಸುಲಭ ಮನೆ ಮದ್ದನ್ನು ಎಲ್ಲರಿಗೂ ತಿಳಿಸಿ.