ವಯಸ್ಕರಲ್ಲಿ ಕಾಣಿಸುವ ಸಾಮಾನ್ಯ ರೋಗ ಎಂದರೆ ಅದು ಬೆನ್ನು ನೋವು. ಒಂದು ಅಂದಾಜಿನ ಪ್ರಕಾರ ಶೇಕಡ 80ರಷ್ಟು ವಯಸ್ಕರು ದೀರ್ಘಕಾಲ ಅಥವಾ ತಾತ್ಕಾಲಿಕ ಬೆನ್ನುನೋವಿನಿಂದ ಬಳಲುತ್ತಿರುತ್ತಾರೆ. ತೀವ್ರವಾದ ಸ್ನಾಯು ನೋವು ಅತಿಯಾದ ತೂಕ, ಸಂಧಿವಾತ, ಆಸ್ಟಿಯೋಪೊರೊಸಿಸ್ ಅತಿಯಾದ ಶ್ರಮದ ಕೆಲಸ, ಕ್ಯಾಲ್ಸಿಯಂ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದಾಗಿ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಈ ರೀತಿಯಾಗಿ ಬೆನ್ನುನೋವು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಎನ್ನಬಹುದು. ಬೆನ್ನುನೋವು ಕಾಣಿಸಿಕೊಂಡಾಗ ಬರಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಬದಲು ನೈಸರ್ಗಿಕವಾಗಿ ದಿವ್ಯ ಔಷಧ ವಾಗಿರುವ ಬೆಳ್ಳುಳ್ಳಿಯನ್ನು ಒಮ್ಮೆ ಬಳಕೆ ಮಾಡಿ ನೋಡಿ. ಬೆಳ್ಳುಳ್ಳಿಯ ಬಳಕೆಯಿಂದ ಬೆನ್ನುನೋವನ್ನು ಹೇಗೆ ನಿವಾರಿಸಿಕೊಳ್ಳಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಅಪಾರ ಪ್ರಮಾಣದಲ್ಲಿ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಬೆಳ್ಳುಳ್ಳಿ ಉರಿಯೂತ ಹಾಗೂ ಬೆನ್ನು ನೋವು ಸಮಸ್ಯೆಯನ್ನು ಸುಲಭವಾಗಿ ನಿವಾರಿಸುತ್ತದೆ. ಇದರ ಜೊತೆಗೆ ಬೆಳ್ಳುಳ್ಳಿಯ ಜೊತೆಗೆ ಇನ್ನಿತರ ನೋವುನಿವಾರಕ ಪದಾರ್ಥಗಳನ್ನು ಬಳಸುವುದರಿಂದ ದೀರ್ಘಕಾಲದ ಬೆನ್ನುನೋವನ್ನು ನಿವಾರಣೆ ಮಾಡಿ ಚೇತರಿಕೆಯನ್ನು ನಾವು ಕಾಣಬಹುದು. ಸಂಪೂರ್ಣವಾಗಿ ಬೆನ್ನುನೋವನ್ನು ಕಡಿಮೆ ಮಾಡಿಕೊಳ್ಳಬೇಕು ಅಂತ ಇರುವವರು ಈ ರೀತಿಯಾಗಿ ಬೆಳ್ಳುಳ್ಳಿ ಮಿಶ್ರಣವನ್ನು ಮಾಡಿಕೊಳ್ಳಬೇಕು. 10 ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದಕ್ಕೆ 60ml ಅಷ್ಟು ತೆಂಗಿನ ಎಣ್ಣೆಯನ್ನು ಸೇರಿಸಿಕೊಳ್ಳಬೇಕು. ಮಿಶ್ರಣವನ್ನು ಸಣ್ಣ ಉರಿಯಲ್ಲಿ ಬಿಸಿ ಮಾಡಿ ಕೊಳ್ಳಬೇಕು ನಂತರ ಸೋಸಿಕೊಳ್ಳಬೇಕು. ಸೋಸಿದ ಈ ಎಣ್ಣೆಯನ್ನು ಶೇಖರಿಸಿ ಇಟ್ಟುಕೊಳ್ಳಬಹುದು ಬೆನ್ನುನೋವು ಕಾಣಿಸಿಕೊಂಡಾಗ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ಮೂರು ಗಂಟೆಗಳ ಕಾಲ ಹಾಗೆಯೇ ಬಿಟ್ಟು ನಂತರ ಬೆಚ್ಚಗಿನ ನೀರು ಬಳಸಿ ತೊಳೆದುಕೊಳ್ಳಬೇಕು. ಈ ರೀತಿಯಾಗಿ ಬೆಳ್ಳುಳ್ಳಿಯನ್ನು ಬಳಸಿಕೊಂಡು ಬೆನ್ನುನೋವನ್ನು ಕಡಿಮೆ ಮಾಡಿಕೊಳ್ಳಬಹುದು

Leave a Reply

Your email address will not be published. Required fields are marked *