ಚಿಕ್ಕವಯಸ್ಸಿಗೆ ಶುಗರ್ ಕಾಣಿಸಿಕೊಳ್ಳುತ್ತದೆ ಶುಗರ್ ಒಮ್ಮೆ ಬಂದರೆ ವಾಸಿ ಆಗುವುದಿಲ್ಲ ಎಂದು ತಿಳಿದಿರುತ್ತಾರೆ. ಗಿಡಮೂಲಿಕೆ ಔಷಧಿಯ ಸೇವನೆಯಿಂದ ಶುಗರ್ ನ್ನು ನಿಯಂತ್ರಣಕ್ಕೆ ತರಬಹುದು ಅದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಇತ್ತೀಚಿನ ದಿನಗಳಲ್ಲಿ 17-18 ವರ್ಷಕ್ಕೆ ಶುಗರ್ ಕಾಣಿಸಿಕೊಳ್ಳುತ್ತದೆ. ಶುಗರ್ ನಲ್ಲಿ ಟೈಪ್ 1 ಟೈಪ್ 2 ಎನ್ನುವರು. ಆಯುರ್ವೇದದಲ್ಲಿ ವಾಸಿಮಾಡಬಹುದಾದ ಔಷಧಿಗಳಿವೆ. ವಾತದಲ್ಲಿ 3 ಟೈಪ್, ಪಿತ್ತದಲ್ಲಿ 6 ಟೈಪ್ ಕಫದಲ್ಲಿ 10 ಟೈಪ್ ಶುಗರ್ ಇದೆ. ಕಫ ಮತ್ತು ಪಿತ್ತದಲ್ಲಿ ಬರುವ ಶುಗರ್ ವಾಸಿಯಾಗುತ್ತದೆ. ಆದರೆ ವಾತದಲ್ಲಿ 4 ರೀತಿಯ ಶುಗರ್ ಇದ್ದು 2 ರೀತಿಯ ಶುಗರ್ ವಾಸಿಯಾಗುವುದಿಲ್ಲ. ಶುಗರ್ ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಬರುತ್ತದೆ. ಇದಕ್ಕೆ ತರಕಾರಿಗಳನ್ನು ಹೆಚ್ಚು ಸೇವಿಸಬೇಕು. 3 ತಿಂಗಳಿಗೊಮ್ಮೆ ಎಚ್.ಬಿ.ಎ. ಒನ್. ಸಿ ಚೆಕ್ ಮಾಡಿಸಬೇಕು ಅದು 6 ಇದ್ದರೆ ಶುಗರ್ ನಾರ್ಮಲ್ ಇದೆ ಎಂದರ್ಥ. ತಿಂಗಳಿಗೊಮ್ಮೆ ಬ್ಲಡ್ ಚೆಕ್ ಮಾಡಿಸಬೇಕು. ಮನೆಯಲ್ಲೆ ಶುಗರ್ ಚೆಕ್ ಮಾಡುವುದು ಸರಿಯಾಗಿರುವುದಿಲ್ಲ. ಶುಗರ್ ಚೆಕ್ ಮಾಡುವ ಮೊದಲು ಬೇಧಿ ಮಾತ್ರೆ ತೆಗೆದುಕೊಂಡು ದೇಹದಲ್ಲಿರುವ ಕಲ್ಮಶ ಹೋದ ನಂತರ ಶುಗರ್ ಚೆಕ್ ಮಾಡಿಸಬೇಕು.

ಶುಗರ್ ನಿಯಂತ್ರಣ ಮಾಡುವ ಮನೆಮದ್ದು ಇದೆ ಅದು ಯಾವುದೆಂದರೆ ಗುಲಾಬಿ ಹೂವಿನ ದಳ 2 ಗ್ರಾಂ ಒಣಗಿಸಿದ ದಳವಾದರೆ ಉತ್ತಮ. ಅವರಿಕೆ ಹೂವಿನ ಚೂರ್ಣ 2 ಗ್ರಾಂ. ಒಣಗಿಸಿದ ಆನೆ ಮುಳ್ಳಿನ ಚೂರ್ಣ 2ಗ್ರಾಂ ಇವುಗಳನ್ನು 300 ml ನೀರಿನಲ್ಲಿ ಕುದಿಸಬೇಕು ಕುದಿದು 100ml ಆಗಬೇಕು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ 100 ml ಕುಡಿಯಬೇಕು. ರಾತ್ರಿ ಖಾಲಿ ಹೊಟ್ಟೆಯಲ್ಲಿ 100 ml ಕುಡಿಯಬೇಕು. ಹೀಗೆ 100 ದಿನ ಮಾಡುವುದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಇದು ಆಗದೇ ಇದ್ದವರು ಹರ್ಬಲ್ ಮೆಡಿಸಿನ್ ಸಿಗುತ್ತದೆ. ಆಹಾರದಲ್ಲಿ ನಿಯಂತ್ರಣ ಇರಬೇಕು. ಕಲ್ಲಂಗಡಿ, ದಾಳಿಂಬೆ ಹಣ್ಣನ್ನು ತಿನ್ನಬೇಕು. ನೀರಿನಂಶ ಇರುವ ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಅವು ಯಾವುವೆಂದರೆ ಬೂದುಗುಂಬಳ ಕಾಯಿ, ಮೂಲಂಗಿ, ನವಿಲಕೋಲು, ಮಂಗಳೂರು ಸೌತೇಕಾಯಿ ತಿನ್ನಬೇಕು. ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ರಾಗಿ, ಕೆಂಪಕ್ಕಿ ಸೇವಿಸಬೇಕು ಕೆಂಪಕ್ಕಿಯಲ್ಲಿ ಫೈಬರ್ ಅಂಶ ಹೆಚ್ಚಿರುತ್ತದೆ ಇದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ದೇಹದಲ್ಲಿ ನೀರಿನಂಶ ಹೆಚ್ಚಾದಾಗ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಶುಗರ್ ವಾಸಿಯಾಗಿ ಬಹಳ ವರ್ಷಗಳು ಆರಾಮಾಗಿ ಜೀವನ ನಡೆಸಿದವರು ಇದ್ದಾರೆ ಆಹಾರದಲ್ಲಿ ನಿಯಂತ್ರಣ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *