ಸುಪ್ರೀಂ ಶಶಿಕುಮಾರ್ ಅವರ ಮಗ ಅಕ್ಷಿತ್ ಅವರು ಸಿನೆಮಾ ರಂಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರ ಸಿನಿಮಾ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ಅಕ್ಷಿತ್ ಶಶಿಕುಮಾರ ಅವರಿಗೆ ಚಿಕ್ಕವಯಸ್ಸಿನಲ್ಲಿಯೇ ಸಿನೆಮಾಗಳಲ್ಲಿ ನಟಿಸಲು ಆಸಕ್ತಿ ಇತ್ತು ಪೇರೆಂಟ್ಸ್ ಎಜುಕೇಶನ್ ಮಾಡು ನಂತರ ಇಂಟರೆಸ್ಟ್ ಇದ್ದರೆ ಆಕ್ಟಿಂಗ್ ಮಾಡಲು ಹೇಳಿದ್ದರು. ಅವರು ಮೊದಲು ಶೂಟಿಂಗ್ ನೋಡಿದ್ದು ಕುರುಕ್ಷೇತ್ರ ಸಿನೆಮಾ. ಅಲ್ಲಿ ದಿ. ಬಾಸ್ ಭೇಟಿಯಾದರು. ಕನ್ನಡ ಇಂಡಸ್ಟ್ರಿ ಸಹವಾಸ ಬೇಡ ಎಂದು ಮನೆಯಲ್ಲಿ ಶಶಿಕುಮಾರ ಅವರಿಗೆ ಆಕ್ಸಿಡೆಂಟ್ ಆದಾಗ ಹೇಳಿದ್ದರು. ನಂತರ ಅಕ್ಷಿತ್ ಅವರು ಸಿನೆಮಾ ಇಂಡಸ್ಟ್ರಿಗೆ ಬರಲು ಕಾರಣ ತಂದೆ ಶಶಿಕುಮಾರ ಅವರು. ಅಣ್ಣಾವ್ರು ನನಗೆ ಪ್ರೇರಣೆ ಎಂದಿದ್ದಾರೆ ಅಕ್ಷಿತ್ ಅವರ ಮೊದಲ ಕನಸು ಸ್ಟೇಜ್ ಆಕ್ಟರ್ ಆಗುವುದಾಗಿತ್ತು. ಚಿಕ್ಕ ವಯಸ್ಸಿನಲ್ಲಿ ಅಕ್ಷಿತ್ ಅವರಿಗೆ ಅಪ್ಪ ಎಂದರೆ ಭಯ ಇತ್ತು. ಅಪ್ಪನ ನಂಬರನ್ನು ಹಿಟ್ಲರ್ ಎಂದು ಸೇವ್ ಮಾಡಿದ್ದರು. ನಂತರದ ದಿನಗಳಲ್ಲಿ ನಮ್ಮ ನಡುವೆ ಭಾಂದವ್ಯ ಬೆಳೆಯಿತು ಎಂದು ಹೇಳಿದರು. ಅಕ್ಷಿತ್ ಅವರ ಮೊದಲ ಸಿನೆಮಾ ಸೀತಾಯಣ ಅದರ ಶೂಟಿಂಗ್ ಗೆ ಶಿವಣ್ಣ ಮತ್ತು ದರ್ಶನ್ ಅವರು ಬರುತ್ತಾರೆ ಇದು ಅವರಿಗೆ ಬಹಳ ಖುಷಿ ಕೊಟ್ಟಿದೆ. ಸೀತಾಯಣ ಸಿನೆಮಾ ಶೂಟಿಂಗ್ ತೆಲಂಗಾಣ , ಆಂಧ್ರ ಪ್ರದೇಶಗಳಲ್ಲಿ ಮಾಡಲಾಗಿದೆ. ಪೂರ್ತಿ ಟೀಮ್ ಹೊಸಬರಿದ್ದರು ಸೀತಾಯಣ ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತದೆ. ಇದು ಅವರಿಗೆ ಚಾಲೆಂಜಿಂಗ್ ಆಗಿತ್ತು ಕನ್ನಡ ಬರುವವರಿಗೆ ತೆಲುಗು ಬರುತ್ತಿರಲಿಲ್ಲ ತೆಲುಗು ಬರುವವರಿಗೆ ಕನ್ನಡ ಬರುತ್ತಿರಲಿಲ್ಲ. ಸೀತಾಯಣ ಸಿನೆಮಾವನ್ನು ಶಶಿಕುಮಾರ ಅವರ ಮಗ ಆಕ್ಟ್ ಮಾಡುತ್ತಿದ್ದಾನೆ ಎಂದು ನೋಡಬೇಕು ಒಂದು ಅವಕಾಶ ಕೊಡಿ ಎಂದು ಅಕ್ಷಿತ್ ಹೇಳಿದ್ದಾರೆ. ಈ ಸಿನೆಮಾ ಲವ ಕಮ್ ಥ್ರಿಲ್ಲರ್ ಸಿನೆಮಾ ಆಗಿದೆ. ಕಾಮೆಡಿ ಕೂಡ ಇದೆ ಕಿರಿಯರಿಂದ ಹಿರಿಯರವರೆಗೆ ಈ ಸಿನೆಮಾವನ್ನು ನೋಡಬಹುದು. ಈ ಟೀಮ್ ನಲ್ಲಿ ಎಲ್ಲರೂ ಹೊಸಬರಿದ್ದು ಸಿನೆಮಾ ಹಿಟ್ ಆದ ನಂತರ ಎಲ್ಲರಿಗೂ ಈ ಸಿನೆಮಾ ಮೂಲಕ ಜೀವನ ಸಿಕ್ಕಂತಾಗುತ್ತದೆ. ಈ ಸಿನೆಮಾ ಕಥೆ ಸಿನೆಮಾದ ಹೀರೋಯಿನ್ ಅಂದ್ರೆ ವುಮೆನ್ ಬಗ್ಗೆ ಇದೆ. ಈ ಸಿನಿಮಾಕ್ಕಾಗಿ ಅಕ್ಷಿತ್ ಅವರು ಜಿಮ್ನಾಸ್ಟಿಕ್ ಹೋಗಿ ಫೈಟ್ ಬಗ್ಗೆ ತಯಾರಿ ಮಾಡಿಕೊಂಡರು . ತಂದೆಯವರು ಮನೆಯಲ್ಲಿ ತರಭೇತಿ ನೀಡಿದ್ದಾರೆ. ಸಪ್ಟೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು ಕೊರೋನ ಇರುವುದರಿಂದ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುತ್ತದೆ.
ಕಥೆಯನ್ನು ಆಯ್ಕೆ ಮಾಡಿರುವುದು ತಂದೆ ಶಶಿಕುಮಾರ ಅವರೆ ಇಲ್ಲಿತನಕ ಏನೇ ನಿರ್ಧಾರ ತೆಗೆದುಕೊಂಡರು ತಂದೇನೆ ತೆಗೆದುಕೊಂಡಿದ್ದಾರೆ ಎಂದು ಅಕ್ಷಿತ್ ಅವರು ಹೇಳಿದ್ದಾರೆ. ಶಶಿಕುಮಾರ್ ಅವರು ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಮನೆಯಲ್ಲಿ ಫಿಟ್ನೆಸ್ ಮೇಲೆ ನಿಗಾ ಇಡುತ್ತಾರೆ ಮತ್ತು ದೇವರ ಬಗ್ಗೆ ಆಸಕ್ತಿ ಹೊಂದಿದ್ದಾರೆ.ಮೊದಲು ತಂದೆಗೆ ಕೋಪ ಇತ್ತು ಈಗ ಕಡಿಮೆಯಾಗಿದೆ ಅವರನ್ನು ಈಗ ನಾನು ನೋಡಿಕೊಳ್ಳುತ್ತೇನೆ ಅವರು ರಿಲ್ಯಾಕ್ಸ್ ಆಗಲಿ ಎಂದು ಹೇಳಿದ್ದಾರೆ. ಮನೆಯಲ್ಲಿ ಅಪ್ಪನ ಜೊತೆ ಅಣ್ಣಾವ್ರ ಸಿನೆಮಾ ನೋಡುತ್ತೇವೆ.
ಅಪ್ಪನ ಅಲೆಗ್ಸಾಂಡರ್ ಸಿನೆಮಾ ನಂಗಿಷ್ಟ ಎಂದು ಅಕ್ಷಿತ್ ಹೇಳಿದ್ದಾರೆ. ಅಪ್ಪನ ಸಿನೆಮಾವನ್ನು ಒಮ್ಮೆಯೂ ಥಿಯೇಟರ್ ನಲ್ಲಿ ನೋಡಿಲ್ಲ. ಎಂಜಿನಿಯರಿಂಗ್ ಮಾಡಲು ಆಸಕ್ತಿ ಇರಲಿಲ್ಲ ಅಮ್ಮನ ಬಲವಂತಕ್ಕೆ ಓದಿರುವುದು. ಅಕ್ಷಿತ್ ಅವರಿಗೆ ಬಾಸ್ಕೆಟ್ ಬಾಲ್ ಮತ್ತು ಕರಾಟೆ ಅಂದ್ರೆ ಇಷ್ಟ ನ್ಯಾಷನಲ್ ಲೆವೆಲ್ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದರು. ಮಾಲಾಶ್ರೀ ಅವರು ನಮ್ಮ ತಂದೆಗೆ ಸೂಟ್ ಆಗುವ ಹೀರೋಯಿನ್ ಎಂದು ಅಕ್ಷಿತ್ ಹೇಳಿದ್ದಾರೆ. ಅಪ್ಪನಜೊತೆ ಒಂದು ಸಲವಾದರೂ ಆಕ್ಟ್ ಮಾಡುವ ಆಸೆ ನನಗಿದೆ. ಪ್ರೇಕ್ಷಕರಿಗೆ ಸೀತಾಯಣದಿಂದ ನಿರಾಸೆ ಆಗುವುದಿಲ್ಲ ಎಲ್ಲರೂ ಸಿನೆಮಾ ನೋಡಬೇಕೆಂದು ಮತ್ತು ಬೆಳೆಸಬೇಕೆಂದು ಕೇಳಿಕೊಂಡಿದ್ದಾರೆ.