ಹಲವು ವಿಷಯಗಳು ನಮ್ಮನ್ನು ಚಕಿತಗೊಳಿಸುತ್ತವೆ. ಯಾಕೆ ಹಾಗೆ ಎಂಬ ಗೊಂದಲ ಕಾಡುತ್ತದೆ. ಆ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೂಡುತ್ತದೆ. ನಂತರ ವಿಷಯದ ಬಗೆಗೆ ಹುಡುಕಿ ತಿಳಿದುಕೊಂಡಾಗ ಇಷ್ಟೇನಾ ಎಂಬ ಭಾವನೆ ಬರುವುದು ಸರ್ವೇಸಾಮಾನ್ಯ. ಇಲ್ಲಿರುವ ವಿಷಯಗಳು ಕೂಡ ಹಾಗೆಯೆ ಇದೆ. ಮಾತ್ರೆಗಳು ನಮ್ಮ ದಿನನಿತ್ಯದ ಜೀವನದಲ್ಲಿ ಒಂದು ಪ್ರಮುಖ ಪಾತ್ರವಹಿಸುತ್ತದೆ. ಸಣ್ಣ ಕೆಮ್ಮು, ನೆಗಡಿ, ತಲೆನೋವಿನ ಸಮಸ್ಯೆಗೆ ಮೆಡಿಕಲ್ ಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಬರುತ್ತೆವೆ. ಡಾಕ್ಟರ್ ಹತ್ತಿರ ಹೋದರಂತೂ ಮಾತ್ರೆಗಳ ಬರೆದು ಕೊಡುವುದು ಸಾಮನ್ಯ. ಅದರೆ ಕೆಲವು ಮಾತ್ರೆಗಳ ಮೇಲೆ ಮದ್ಯದಲ್ಲಿ ಒಂದು ಗೆರೆ ಇರುತ್ತದೆ. ಕೆಲವೊಂದು ಮಾತ್ರೆಗೆ ಈ ಗೆರೆ ಇರುವುದಿಲ್ಲ. ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಮಾತ್ರೆಗಳ ಮೇಲೆ ಈ ಗೆರೆಗಳನ್ನು ಸುಲಭವಾಗಿ ಮುರಿಯಲು ಸಾಧ್ಯವಾಗಲಿ ಎಂದು ಇಡುತ್ತಾರೆ. ಕೆಲವೊಮ್ಮೆ ಡಾಕ್ಟರ್ ಅರ್ಧ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳುತ್ತಾರೆ ಆಗ ಈ ಗೆರೆಗಳು ಮದ್ಯದಲ್ಲಿ ಮುರಿಯಲು ಸಹಾಯ ಮಾಡುತ್ತವೆ. ಅದಕ್ಕೆಂದೆ ಮಾತ್ರೆಗಳ ಮೇಲೆ ಒಂದು ಗೆರೆ ಇರುವುದು.
ಭಾರತ ದೇಶ ಪ್ರಕೃತಿಗೆ ಹೆಸರಾಗಿರುವುದು. ಜಲಪಾತಗಳು, ಸಮುದ್ರ ತೀರಗಳು, ಬೆಟ್ಟಗುಡ್ಡ, ದ್ವೀಪಗಳು, ಹೀಗೆ ಹಲವಾರು ರೀತಿಯ ಸ್ಥಳಗಳು ಹೊಂದಿದೆ. ಅದರಂತೆ ದ್ವೀಪಗಳ ಬಗ್ಗೆ ತಿಳಿದೆ ಇದೆ. 1208 ದ್ವೀಪಗಳು ನಮ್ಮ ದೇಶಕ್ಕೆ ಸೇರಿದ್ದಾಗಿದೆ. ಅದರಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳು ಒಂದು. ಎಲ್ಲ ದೇಶಗಳಿಗೂ ದ್ವೀಪಗಳು ಇರುತ್ತವೆ. ಆದರೆ ಅತಿ ಹೆಚ್ಚು ದ್ವೀಪಗಳನ್ನು ಹೊಂದಿರುವ ದೇಶ ಯಾವುದು ಗೊತ್ತಾ? ಅದನ್ನು ಕೇಳಿದರೆ ಆಶ್ಚರ್ಯ ಪಡುವುದು ಖಚಿತ. ಅದು ಸ್ವೀಡನ್ ದೇಶ. ಈ ದೇಶದಲ್ಲಿ 2,21,800 ದ್ವೀಪಗಳು ಇದೆ. ಈ ದೇಶವೇ ಅತ್ಯಂತ ಹೆಚ್ಚು ದ್ವೀಪಗಳನ್ನು ಒಳಗೊಂಡಿದೆ. ಇನ್ನೂ ಪ್ರತಿ ದಿನ ಜಗತ್ತಿನ ಯಾವುದೋ ಒಂದು ಕಡೆಯಲ್ಲಿ ಭೂ ಕಂಪನಗೊಳ್ಳುವುದು ನಡೆದೆ ಇರುತ್ತದೆ. ಭೂಕಂಪದ ಬಗ್ಗೆ ಗೊತ್ತೆ ಇರುತ್ತದೆ. ಜಪಾನ್ ದೇಶದಲ್ಲಿ ದಿನನಿತ್ಯವೂ ಭೂಕಂಪ ಸಾಮಾನ್ಯ. ಭೂಕಂಪದ ಮಾಹಿತಿ ಬೇಕಾದವರು ಗೂಗಲ್ ನಲ್ಲಿ ಅರ್ಥ್ ಕ್ವಿಕ್ ಎಂದು ಹುಡುಕಿದರೆ ಸದ್ಯದಲ್ಲಿ ಆಗಿರುವ ಭೂಕಂಪಗಳ ಮಾಹಿತಿ ಸಿಗುತ್ತದೆ. ಭೂಕಂಪ ಆಗುವುದು ಹೇಗೊ ಹಾಗೆ ಚಂದ್ರಕಂಪವೂ ಜರುಗುತ್ತದೆ. ಇದೇ ರೀತಿ ಎಲ್ಲಾ ಗ್ರಹಗಳಲ್ಲೂ ನಡೆಯುತ್ತಿರುತ್ತದೆ. ಪ್ರಪಂಚದ ಎಲ್ಲಾ ತರಹದ ಪ್ರಾಣಿಗಳಲ್ಲಿ ಹೆಣ್ಣು ಸಂತಾನವನ್ನು ತನ್ನ ಹೊಟ್ಟೆಯಲ್ಲಿ ಹೊರುವುದು ಸಾಮಾನ್ಯ ವಿಷಯ. ಆದರೆ ಅದೊಂದು ಜೀವಿ ಮಾತ್ರ ಗಂಡು ತನ್ನ ಸಂಸಾರ ಚೀಲದಲ್ಲಿ ಸಂತಾನವನ್ನು ಹೊರುತ್ತದೆ ಅದು ಯಾವುದೆಂದರೆ ನೀರು ಕುದುರೆ. ಹೆಣ್ಣು ನೀರು ಕುದುರೆಗಳಿಗೆ ಸಂತಾನೋತ್ಪತ್ತಿ ಸಮಯದಲ್ಲಿ ಅಂಡಾಶಯವನ್ನು ಗಂಡು ನೀರು ಕುದುರೆಯ ಸಂಸಾರ ಚೀಲಕ್ಕೆ ವರ್ಗಾಯಿಸುವ ವಿಧಾನವನ್ನು ಹೊಂದಿರುತ್ತದೆ.
ಭೂಮಿಯಲ್ಲಿ ವಾಸಿಸುವ ಎಲ್ಲಾ ಪ್ರಾಣಿ ಪಕ್ಷಿಗಳಲ್ಲಿ ಆಸ್ಟ್ರೀಚ್ ಪಕ್ಷಿಯು ಅತ್ಯಂತ ದೊಡ್ಡ ಕಣ್ಣು ಹೊಂದಿರುವ ಪಕ್ಷಿಯಾಗಿದೆ. ಆಸ್ಟ್ರೀಚ್ ಪಕ್ಷಿ 120 ಕೆ.ಜಿ ವರೆಗೆ ಬೆಳೆಯುವ ಈ ಪಕ್ಷಿ 2 ಮೀಟರ್ ಉದ್ದ ಇದ್ದು 70 ಕಿ. ಮೀ. ವೇಗದಲ್ಲಿ ಓಡುವ ಪಕ್ಷಿಯಾಗಿದೆ. ಆಸ್ಟ್ರೀಚ್ ಪಕ್ಷಿಯ ವಿಚಿತ್ರ ಸಂಗತಿ ಎಂದರೆ ಇದರ ಮೆದುಳು ಕಣ್ಣಿಗಿಂತ ಸಣ್ಣದಾಗಿರುತ್ತದೆ. ಎಷ್ಟೋ ವರ್ಷಗಳ ನಂತರ ಅಯೋಧ್ಯೆ ಶ್ರೀ ರಾಮ ಮಂದಿರ ವಿವಾದ ಕೊನೆಗಂಡಿತು. ಅಗಸ್ಟ್ ಐದರಂದು ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೇರವೆರಿಸಿದರು. ವಿಷಯವರನೆಂದರೆ ರಾಮ ಮಂದಿರ ಟ್ರಸ್ಟ್ ರಾಮ ಮಂದಿರದ ಕೆಳಗೆ ಟೈಮ್ ಕ್ಯಾಪ್ಸುಲ್ ಹಾಕಬೇಕೆಂದು ನಿರ್ಧಾರ ಮಾಡಿದೆ. ಮುಂದೆ ಯಾರಾದರೂ ರಾಮ ಮಂದಿರದ ಇತಿಹಾಸದ ಬಗ್ಗೆ ಅಧ್ಯಯನ ಮಾಡಿದರೆ ರಾಮ ಜನ್ಮ ಭೂಮಿಯ ಬಗೆಗೆ ತಿಳಿಯಲಿ ಎಂಬ ಕಾರಣಕ್ಕಾಗಿ ಈ ನಿರ್ಧಾರ ಮಾಡಿದೆ. ಟೈಮ್ ಕ್ಯಾಪ್ಸುಲ್ ಎಂದರೆ ಯಾವುದೇ ಒಂದು ಮಾಹಿತಿಯನ್ನು ಬರೆದು ಕಂಟೇನರ್ ನಲ್ಲಿ ಮುಚ್ಚಿ ಟೈಮ್ ಸೆಟ್ ಮಾಡಿ ಮುಚ್ಚಿಡುತ್ತಾರೆ. ಮುಂದಿನ ಪೀಳಿಗೆಗೆ ಮಾಹಿತಿ ನೀಡಲು ಹೀಗೆ ಮಾಡುತ್ತಾರೆ.. ಈ ಟೈಮ್ ಕ್ಯಾಪ್ಸುಲ್ ನಲ್ಲಿ ಸಾವಿರ ವರ್ಷಗಳವರೆಗೂ ಟೈಮ್ ಪಿಕ್ಸ್ ಮಾಬಹುದು. ಇಂದಿರಾ ಗಾಂಧಿಯವರು ಪ್ರಧಾನಿ ಆದ ಸಮಯದಲ್ಲಿ ಕೂಡ ಇಂತಹ ಒಂದು ಟೈಮ್ ಕ್ಯಾಪ್ಸುಲ್ ನ್ನು ಕೆಂಪು ಕೋಟೆಯ ಕೆಳಗೆ ಇಟ್ಟಿದ್ದರು. ಅದರ ಬಗೆಗೆ ವಿವಾದ ಎದ್ದು ಇಂದಿರಾರವರು ಮುಂದಿನ ಚುನಾವಣೆಯಲ್ಲಿ ಸೋತು ಹೋಗುತ್ತಾರೆ.. ಆಗ ಪ್ರಧಾನಿ ಆದ ಮುರಾರ್ಜಿ ದೇಸಾಯಿಯವರು ಈ ಟೈಮ್ ಕ್ಯಾಪ್ಸುಲ್ ನ್ನು ಹೊರಗೆ ತೆಗೆಯುತ್ತಾರೆ. ಆದರೆ ಇದುವರೆಗೂ ಆ ಟೈಮ್ ಕ್ಯಾಪ್ಸುಲ್ ನಲ್ಲಿ ಏನಿತ್ತು ಎನ್ನುವುದು ತಿಳಿದು ಬಂದಿಲ್ಲ.
ಇಂಟರ್ನೆಟ್ ನಲ್ಲಿ ನೋಡಿದಾಗ ಟ್ರೋಲ್, ಮೆಮೆ ಮಾಡಿದ ಫೋಟೋಗಳಲ್ಲಿ ಒಬ್ಬ ವ್ಯಕ್ತಿಯು ನಗುತ್ತಿರುವ ಚಿತ್ರವನ್ನು ನೋಡುತ್ತೆವೆ. ಅದನ್ನು ಲೋಗೋ ಎಂದು ತುಂಬಾ ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ಲೋಗೋ ಆಗಿರದೆ ಒಬ್ಬ ವ್ಯಕ್ತಿಯ ಚಿತ್ರವಾಗಿದೆ. ಅವರ ಹೆಸರು ಯೋಮಿಂಗ್. ಇವರು ಚೈನೀಸ್ ಬಾಸ್ಕೆಟ್‌ಬಾಲ್ ಆಟಗಾರ. ಇವರದೆ ಚಿತ್ರ ಇದಾಗಿದೆ. ಒಮ್ಮೊಮ್ಮೆ ಗಾಢವಾದ ನಿದ್ದೆಯಲ್ಲಿರುವಾಗ ಶಾಕ್ ಹೊಡೆದಂತೆ ಎದ್ದು ಕೂರುತ್ತೆವೆ. ಯಾರೋ ಎತ್ತಿ ಎಸೆದಂತೆ ಭಾಸವಾಗುತ್ತದೆ. ಇದು ಭಯಾನಕವೆನಿಸಿದರೂ ಇದು ನಮ್ಮನ್ನು ಕಾಪಾಡಿರುತ್ತದೆ. ಈ ವಿಚಿತ್ರ ಅನುಭವಕ್ಕೆ ಮಯೊಕ್ಲೋನಿಕ್ ಕ್ರಂಪ್ಸ್ ಎಂದು ಕರೆಯುತ್ತಾರೆ. ಅದು ಹೇಗೆ ನಮ್ಮನ್ನು ಕಾಪಾಡುತ್ತದೆ ಎಂದರೆ ನಿದ್ದೆ ಮಾಡಿದ ಸಂದರ್ಭದಲ್ಲಿ ಉಸಿರಾಟದ ಗತಿ ಕಡಿಮೆಯಾಗಿರುತ್ತದೆ. ಪಲ್ಸ್ ರೇಟ್ ಕೂಡ ಕಡಿಮೆ ಆಗಿರುತ್ತದೆ. ದೇಹದ ಮಾಂಸ ಖಂಡಗಳೆಲ್ಲ ವಿಶ್ರಾಂತ ಸ್ಥಿತಿಯಲ್ಲಿ ಇರುತ್ತದೆ. ಆಗ ಕೆಲವೊಮ್ಮೆ ಗೊಂದಲಕ್ಕೆ ಈಡಾದ ಮೆದುಳು ಸತ್ತು ಹೋಗಿರುವುದಾಗಿ ಭಾವಿಸುತ್ತದೆ. ಸಾವಿನ ಸ್ಥಿತಿಗೆ ಕರೆದೊಯ್ಯುತ್ತದೆ. ಆಗ ನಮ್ಮ ದೇಹ ಬದುಕಿರುವ ಸೂಚನೆಯನ್ನು ಮೆದುಳಿಗೆ ರವಾನಿಸುತ್ತದೆ. ಹೀಗೆ ಸಂದೇಶ ರವಾನೆಯಾದಾಗ ಯಾರೋ ಎತ್ತಿ ಎಸೆದಂತೆ, ಶಾಕ್ ತಗುಲಿದಂತೆ ಅನುಭವ ಆಗುತ್ತದೆ. ಸುಮಾರಾಗಿ ಎಲ್ಲರಲ್ಲಿ ಕನಸು ಬೀಳುತ್ತದೆ. ಅದರಲ್ಲಿ ದೆವ್ವಗಳ ಕನಸು, ಕೆಟ್ಟ ಕನಸು ಬಿದ್ದರೆ ಮೆದುಳು ಡಿಸ್ಟರ್ಬ್ ಆಗಿದೆ ಎಂದು ಅರ್ಥ. ಹೆದರುವಂತಹ ಕನಸು ಬೀಳುತ್ತಿದ್ದರೆ ಜೀವನದಲ್ಲಿ ಅಂತಹ ಘಟನೆಗಳು ನಡೆದಿರಬಹುದು.. ಒಳ್ಳೆಯ ಕನಸು ಕಾಣುತ್ತಿದೆ ಎಂದರೆ ಏನೂ ತೊಂದರೆ ಆಗಿಲ್ಲವೆಂದು ಅರ್ಥ. ಮೆದುಳು ಡಿಸ್ಟರ್ಬ್ ಆಗಿದ್ದಲ್ಲಿ ನಿಮಗೆ ರೆಸ್ಟ್ ಬೇಕು.. 2009 ರಲ್ಲಿ ಬಿಗ್ ಬೆನ್ ಎನ್ನುವ ಟ್ವಿಟರ್ ಅಕೌಂಟ್ ಒಂದು ಕ್ರಿಯೆಟ್ ಮಾಡಲಾಗಿದೆ. ವಿಚಿತ್ರ ವೆಂದರೆ ಈ ಅಕೌಂಟ್ ನಲ್ಲಿ ಟ್ವಿಟ್ ಮಾಡುವುದು ಬಾಂಗ್ ಬಾಂಗ್ ಬಾಂಗ್ ಎಂಬ ಶಬ್ದ ಮಾತ್ರವೇ. ಪ್ರತಿ ಒಂದು ಗಂಟೆಗೊಮ್ಮೆ ಈ ಟ್ವಿಟ್ ಅಪ್ಲೋಡ್ ಅಗುತ್ತದೆ. ಇಲ್ಲಿವರೆಗೆ 86,900 ಟ್ವಿಟ್ ಮಾಡಲಾಗಿದೆ. 4,35,000 ಜನ ಈ ಒಂದು ಪದಕ್ಕೆ ಫಾಲೋವರ್ಸ್ ಇದ್ದಾರೆ ವಿಚಿತ್ರ ಅಲ್ಲವೆ.