ರಕ್ಷಿತಾ ಮತ್ತು ಪ್ರೇಮ್ ಬಗ್ಗೆ ಎಲ್ಲರಿಗೂ ತಿಳಿದಿದೆ ಅವರ ಪ್ರೇಮ್ ಕಹಾನಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ರಕ್ಷಿತಾ ಅವರು ಧಮ್ ಶೂಟಿಂಗ್ ಆದಮೇಲೆ ಡಬ್ಬಿಂಗೋಸ್ಕರ ಅಶ್ವಿನಿ ಸ್ಟುಡಿಯೋಸಗೆ ಹೋಗಿದ್ದರು. ಅಲ್ಲಿ ರಾಮ್ ಪ್ರಸಾದ್ ಸರ್ ಕ್ಯಾಬಿನ್ ನಲ್ಲಿ ಕುಳಿತುಕೊಂಡು ಅವರ ಜೊತೆ ಮಾತಾಡುತಿದ್ದರು. ಅದೇ ಸಮಯದಲ್ಲಿ ಪ್ರೇಮ್ ಅವರು ನಡೆದುಕೊಂಡು ಬಂದ್ರು ಆಗ ರಾಮ್ ಪ್ರಸಾದ್ ಸರ್ ಇಬ್ಬರಿಗೂ ಪರಿಚಯ ಮಾಡಿಸಿದರು. ಇವರು ಪ್ರೇಮ್, ಇವರು ರಕ್ಷಿತಾ ಅಂತ.

ರಕ್ಷಿತಾ ಅವರು ನಾ ನಿಮಗೆ ತುಂಬಾ ಇಷ್ಟಪಡ್ತೀನಿ ನೀವು ನನಗೆ ಇಷ್ಟ ಪಡಲೇಬೇಕು ಅಂತ ಅಲ್ಲ ನೀವ ಇಷ್ಟಪಡಲಿಲ್ಲ ಅಂದ್ರೆ ನನಗೆ ಬೇಜಾರಿಲ್ಲ ಅಂತ ಫೋನ್ ಮಾಡಿ ಹೇಳುತ್ತಾರೆ. ಪ್ರೇಮ್ ಅವರು ಡೈರೆಕ್ಟ್ ಆಗಿ ತಪ್ಪ ತಿಳ್ಕೋಬೇಡಿ ಆತರ ಏನಿಲ್ಲಮ್ಮ ಅಂತ ಹೇಳಿ ಫೋನ್ ಇಟ್ಟುಬಿಟ್ಟರು. ಮರುದಿನ ಮಧ್ಯಾಹ್ನ ಪ್ರೇಮ್ ಅವರು ಫೋನ್ ಮಾಡಿ ನನ್ನ ಆತರ ತಿಳ್ಕೋಬೇಡಿ. ಏನೋ ತಿಳ್ಕೊಂಡು ಐ ಲವ ಯು ಅಂತೆಲ್ಲ ಹೇಳ್ಕೊಂಡು ನಾವು ಚಪ್ಪರಗಳು ಏನೊ ಸಿನೆಮಾ ಮಾಡ್ಕೊಂಡು ಡೈರೆಕ್ಟರ್ ಆಗಬೇಕಂತ ಆಸೆ ಇಟ್ಕೊಂಡು ಬಂದಿದಿನಿ ಆತರ ನನ್ನ ಬಗ್ಗೆ ಅನ್ಕೋಬೇಡಿ ಅಂತ ಹೇಳ್ತಾರೆ. ಮುಂದೆ ಅವರು ಒಪ್ಪಿಕೊಳ್ಳುತ್ತಾರೆ. ಇಂಡಸ್ಟ್ರಿಯಲ್ಲಿ ಅವರಿಬ್ಬರೂ ಮದುವೆ ಆಗುತ್ತಾರೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಅವರ ಎಂಗೇಜ್ಮೆಂಟ್ ಆದಮೇಲೂ ರಕ್ಷಿತಾ ಬಗ್ಗೆ ಪ್ರೇಮ್ ಹತ್ತಿರ ಪ್ರೇಮ್ ಬಗ್ಗೆ ರಕ್ಷಿತಾ ಹತ್ತಿರ ಹೇಳೋರು. ಅದೇ ಜನ ಈವತ್ತು ನಮಸ್ತೇ ಮೇಡಂ ನಮಸ್ತೇ ಸರ್ ಅಂತಾರೆ.

ಮದುವೆ ಫಿಕ್ಸ್ ಆದಾಗ ರಕ್ಷಿತಾ ಅವರ ಅಮ್ಮನತ್ತಿರ ಪ್ರೇಮ್ ಅವರು ಹೇಳಿದ್ದರು ಇಡೀ ಕರ್ನಾಟಕದ ಜನಗಳ ಮುಂದೆ ಇವಳಿಗೆ ತಾಳಿ ಕಟ್ಟತಿನಿ ಅಂತ. ರಕ್ಷಿತಾ ಅವರು ನನ್ ಇಷ್ಟ ಪಟ್ಟಾಗ ಮೊದಲು ನಾನು ನಮ್ಮ ಮನೆಗೆ ಕರ್ಕೊಂಡ್ ಬಂದು ಚಿಕ್ಕ ಮನೆ ತೋರಿಸಿದೆ ನಾವು ಹಿಂಗಿದಿವಿ, ನಮ್ಮ ಅಮ್ಮ ಹೀಗಿದ್ದಾರೆ ನಮ್ಮ ಫ್ಯಾಮಿಲಿ ಹೀಗೆ ಇದೆ ನಮ್ಮಲ್ಲಿ ಯಾರಿಗೂ ಇಂಗ್ಲಿಷ್ ಗೊತ್ತಿಲ್ಲ ಹಳ್ಳಿಯಿಂದ ಬಂದಿದಿವಿ ನಮಗೆ ಗೊತ್ತಿರುವುದು ರಾಗಿ ಮುದ್ದೆ ಉಪ್ಸಾರು. ರಕ್ಷಿತಾ ಅವರು ಮುದ್ದೆಯನ್ನು ಮೊದಲು ತಿನ್ನುತ್ತಿರಲಿಲ್ಲ ಪ್ರೇಮ್ ಅವರು ಮೊದಲು ಚೈನೀಸ್ ಫುಡ್ ತಿನ್ನುತ್ತಿರಲಿಲ್ಲ ಇದಕ್ಕೆಲ್ಲ ಹೊಂದಾಣಿಕೆ ಆಗಬೇಕು ಹಾಗಿದ್ದರೆ ಮದುವೆ ಆಗುವೆ ಅಂತ ಪ್ರೇಮ್ ಅವರು ಹೇಳಿದಾಗ ರಕ್ಷಿತಾ ಒಪ್ಪಿಕೊಂಡು ಇಂದು ಅನ್ಯೋನ್ಯವಾಗಿದ್ದಾರೆ. ಪ್ರೇಮ್ ಮತ್ತು ರಕ್ಷಿತಾ ಅವರ ಪ್ರೇಮ ಕಹಾನಿ ಹೀಗೆ ಶುರುವಾಯಿತು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!