ಚೆಲುವಿನ ಚಿತ್ತಾರದ ಮುದ್ದು ಹುಡುಗಿ ಅಮೂಲ್ಯ ಅವರು ಈಗ ಹೇಗಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಅದ್ಬುತ ಅಭಿನಯದಿಂದಲೆ ಚಿಕ್ಕ ವಯಸ್ಸಿನಲ್ಲೇ ಗೋಲ್ಡ್ ನ್ ಕ್ವೀನ್ ಎಂಬ ಬಿರುದು ಪಡೆದ ಅಮೂಲ್ಯ ಲಾಕ್ ಡೌನ್ ನಂತರ ಸಿಹಿ ಸುದ್ದಿಯನ್ನು ಕೊಟ್ಟಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅಮೂಲ್ಯ ಕೇವಲ 14 ನೇ ವಯಸ್ಸಿಗೆ ನಾಯಕಿಯಾಗಿ ಕನ್ನಡ ಸಿನಿ ಪ್ರೇಕ್ಷಕರ ಮನಸನ್ನು ಗೆದ್ದಿದ್ದಾರೆ. ಅಮೂಲ್ಯ ಅವರು ಒಂದರ ಹಿಂದೆ ಒಂದರಂತೆ ಹಿಟ್ ಸಿನೆಮಾ ಮಾಡುತ್ತಿದ್ದಾಗಲೇ ತಮ್ಮ ಸಂಬಂಧಿಯಾದ ಜಗದೀಶ್ ಅವರನ್ನು ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯ ಬಳಿಕ ಸಿನೆಮಾ ಜೀವನದಿಂದ ದೂರ ಉಳಿದು ಪತಿಯೊಂದಿಗೆ ಫಾರಿನ್ ಟೂರ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು ಅಷ್ಟೇ ಅಲ್ಲದೆ ಲಾಕ್ ಡೌನ ಸಮಯದಲ್ಲಿ ದಂಪತಿಗಳಿಬ್ಬರೂ ಅನೇಕ ಸಾಮಾಜಿಕ ಚಟುವಟಿಕೆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ.

ಅಮೂಲ್ಯ ಅವರು ಇನ್ನುಮುಂದೆ ಸಿನೆಮಾದಲ್ಲಿ ನಟಿಸುವುದಿಲ್ಲ ಅವರು ತಾಯಿಯಾಗಲಿದ್ದಾರೆ ಎಂಬ ಮಾತು ಕೇಳಿಬರುತಿತ್ತು. ಮದುವೆ ನಂತರ ಅಮೂಲ್ಯ ಅವರು ಸಿನೆಮಾದಲ್ಲಿ ನಟಿಸುತ್ತಾರ ಇಲ್ಲವಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದಕ್ಕೆಲ್ಲ ತೆರೆ ಎಳೆದ ಅಮೂಲ್ಯ ಅವರು ಅಭಿಮಾನಿಗಳಿಗೆ ಭರ್ಜರಿ ಶುಭ ಸುದ್ದಿಯನ್ನು ನೀಡಿದ್ದಾರೆ. ಒಳ್ಳೆ ಸಿನೆಮಾ ಕಥೆ ಸಿಕ್ಕರೆ ಮತ್ತೆ ಸಿನೆಮಾಗಳಲ್ಲಿ ನಟಿಸುವುದಾಗಿ ಅಮೂಲ್ಯ ಹೇಳಿದ್ದಾರೆ. ಹಲವಾರು ಕಥೆಗಳನ್ನು ಅಮೂಲ್ಯ ಅವರು ಕೇಳುತಿದ್ದು ಜನವರಿ ತಿಂಗಳಲ್ಲಿ ಹೊಸ ಸಿನೆಮಾದ ಆಯ್ಕೆ ಅಂತಿಮವಾಗಲಿದೆ. ಮತ್ತೆ ನಿಮ್ಮ ಕಣ್ಣಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ. ಅಮೂಲ್ಯ ಅವರನ್ನು ಮತ್ತೆ ತೆರೆಯ ಮೇಲೆ ನೋಡಬಹುದಾಗಿದೆ.

Leave a Reply

Your email address will not be published. Required fields are marked *