ನಾವು ದಿನನಿತ್ಯ ಗೊತ್ತಿಲ್ಲದೆ ತಪ್ಪು ಮಾಡುತ್ತೇವೆ. ನಾವು ಮಾಡುವ 15 ತಪ್ಪುಗಳನ್ನು ಈ ಲೇಖನದ ಮೂಲಕ ತಿಳಿಯೋಣ.
1) ಬುದ್ಧಿವಂತ ಯಾರೆಂಬ ಪ್ರಶ್ನೆಗೆ ನಾವು ಕೊಡುವ ಉತ್ತರ ಚೆನ್ನಾಗಿ ಹಣ ಸಂಪಾದಿಸುವವನು, ಚೆನ್ನಾಗಿ ಓದುವವನು, ಉತ್ತಮ ಆರೋಗ್ಯ ಹೊಂದಿರುವನು, ಅಷ್ಟೇ ಅಲ್ಲದೆ ಹುಡುಗಿಯರನ್ನು ಪಟಾಯಿಸುವವನು ಬುದ್ಧಿವಂತನೆಂದು ಹೇಳುತ್ತೇವೆ. ಆದರೆ ನೆನಪಿರಲಿ ಹಣ ಇರಲಿ ಇಲ್ಲದೆ ಇರಲಿ, ವಿದ್ಯೆ ಇರಲಿ ಇಲ್ಲದೆ ಇರಲಿ, ಕಷ್ಟದಲ್ಲಿ ಸುಖದಲ್ಲಿ, ಆರೋಗ್ಯದಲ್ಲಿ ಅನಾರೋಗ್ಯದಲ್ಲಿ, ಗೆಲುವಿನಲ್ಲಿ ಸೋಲಿನಲ್ಲಿ ಒಂದೇ ರೀತಿ ಇದ್ದು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸಿಕೊಂಡು ಸಂತೋಷವಾಗಿರುವವನು ಬುದ್ಧಿವಂತ ಏಕೆಂದರೆ ಅವನಿಗೆ ತನ್ನ ಮನಸ್ಸು ಮತ್ತು ಬುದ್ಧಿಯನ್ನು ನಿಯಂತ್ರಣ ಮಾಡಿಕೊಳ್ಳುವ ಸಾಮರ್ಥ್ಯವಿರುತ್ತದೆ. ನಾವು ಯಾವಾಗಲೂ ಆನಂದವಾಗಿ ಇರಬೇಕೆಂದರೆ ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಮತ್ತು ಸರಿ-ತಪ್ಪುಗಳಿಗೆ ವ್ಯತ್ಯಾಸ ಗೊತ್ತಿರಬೇಕು.
2) ನಾವು ಬಳಸುವ ಟೂತ್ ಪೇಸ್ಟ್ ನಲ್ಲಿ ಬರೆದಿರುತ್ತದೆ ನಾವು ಬಟಾಣಿ ಕಾಳಿನಷ್ಟೆ ಪ್ರಮಾಣದ ಪೇಸ್ಟನ್ನು ಬ್ರಷ್ ಮಾಡಲು ಬಳಸಬೇಕು. ಆದರೆ ನಾವು ಬ್ರಷ್ ನ ಆಕಡೆಯಿಂದ ಈ ಕಡೆಯವರೆಗೂ ಪೇಸ್ಟ್ ಹಾಕುತ್ತೇವೆ ಇಷ್ಟು ಪೇಸ್ಟ್ ಬಳಸುವುದರಿಂದ ಅದರಲ್ಲಿರುವ ಫ್ಲೋರೈಡ್ ನಿಂದ ಹಲ್ಲಿನ ಮೇಲ್ಭಾಗದ ಎನಾಮೆಲ್ ಹಾನಿಗೊಳಗಾಗುತ್ತದೆ. ಪೇಸ್ಟ್ ನ್ನು ನುಂಗಿದರೆ ಹೊಟ್ಟೆ ಉಬ್ಬುವ ಅನುಭವವಾಗುತ್ತದೆ. ಆದ್ದರಿಂದ ಮಕ್ಕಳು ಬ್ರಷ್ ಮಾಡುವಾಗ ಗಮನ ಹರಿಸಬೇಕು.
3) ಬಹಳಷ್ಟು ಜನರು ವಾರ್ಮ್ಅಪ್ ಮಾಡದೆ ವ್ಯಾಯಾಮ ಮಾಡುತ್ತಾರೆ. ವಾರ್ಮ್ ಅಪ್ ಮಾಡದೆ ವ್ಯಾಯಾಮ ಮಾಡಿದರೆ ಅದರ ಪರಿಣಾಮ ನಮ್ಮ ದೇಹಕ್ಕೆ ಆಗುವುದಿಲ್ಲ. ಇದರಿಂದ ಕೈ ಕಾಲು ನೋವು ಶುರುವಾಗುತ್ತದೆ.
4) ತುಂಬಾ ಜನಕ್ಕೆ ತಮ್ಮ ಲವರ್ ಬ್ರೇಕ್ ಅಪ್ ಹೇಳಿದರೆ ಆ ದಿನವೆಲ್ಲಾ ಪ್ರಪಂಚವೆ ತಲೆ ಮೇಲೆ ಬಿದ್ದಂತೆ ಬೇಸರದಿಂದ ಇರುತ್ತಾರೆ. ಅಷ್ಟು ಯೋಚಿಸುವ ಅಗತ್ಯವಿಲ್ಲ. ಏಕೆಂದರೆ ನಾವೆಷ್ಟು ದುಃಖ ಪಟ್ಟರೂ ಪ್ರಯೋಜನವಿಲ್ಲ ಬಿಟ್ಟು ಹೋದವರು ಮತ್ತೆ ಬರುವುದಿಲ್ಲ. ಬಂದರೂ ಅನುಕಂಪ ಆಗುತ್ತದೆ ಪ್ರೀತಿ ಇರುವುದಿಲ್ಲ.
5) ನಮ್ಮ ಕಿವಿಯನ್ನು ಕ್ಲೀನ್ ಮಾಡಲು ಕಾಟನ್ ಬಟ್ಸ್ ಬಳಸುತ್ತೇವೆ ಇದರಿಂದ ಕಿವಿಗೆ ಹಾನಿಯಾಗುತ್ತದೆ. 3 ಡ್ರಾಪ್ ಆಲಿವ್ ಎಣ್ಣೆಯನ್ನು ಹಾಕಿಕೊಂಡರೆ ವ್ಯಾಕ್ಸ್ ಹೊರಹೋಗುತ್ತದೆ ನಂತರ ಕಿವಿಯನ್ನು ಹತ್ತಿಯಿಂದ ಕ್ಲೀನ್ ಮಾಡಿಕೊಳ್ಳಬೇಕು.
6) ನಾವು ಕಾಟನ್ ನಿಂದ ತಯಾರಿಸಿದ ಪಿಲ್ಲೊ ಮೇಲೆ ಮಲಗುವುದರಿಂದ ನಮ್ಮ ಮುಖದ ತೇವಾಂಶ ಹೀರಿಕೊಂಡು ಮುಖವನ್ನು ಡ್ರೈ ಮಾಡುತ್ತದೆ ಮತ್ತು ತಲೆ ಕೂದಲು ಹಾಳಾಗುತ್ತದೆ. ಕಾಟನ್ ಪಿಲ್ಲೊ ಬಳಸುತ್ತಿದ್ದರೆ ಅದಕ್ಕೆ ಸಿಲ್ಕ್ ಕವರ್ ಹಾಕಿ ಬಳಸಬಹುದು.
7) ಕೆಲವರು 10 ದಿನದಲ್ಲಿ ತೂಕ ಇಳಿಸಲು ಡಯಟ್ ಮಾಡುತ್ತಾರೆ ಇದರಿಂದ ಆರೋಗ್ಯ ಹಾಳಾಗುತ್ತದೆ. ತಿಂಗಳಿಗೆ 2-3 ಕೆ.ಜಿ ತೂಕ ಕಡಿಮೆಯಾಗಬೇಕು. ಡಾಕ್ಟರ್ ಸಲಹೆಯಂತೆ ಡಯಟ್ ಮಾಡಬೇಕು.8) ಕೆಲವೊಬ್ಬರು ಏನು ಆಗುವುದಿಲ್ಲವೆಂದು ಜಾಸ್ತಿ ಕುಡಿಯುತ್ತಾರೆ ಯಾವುದೇ ಮನುಷ್ಯನ ಲಿಮಿಟ್ 2-3 ಪೆಗ್ ಮಾತ್ರ ಏನೆ ಆದರೂ ಧೂಮಪಾನ ಮದ್ಯಪಾನ ಆರೋಗ್ಯಕ್ಕೆ ಮಾರಕ. 9) ನಮ್ಮ ಜೊತೆ ಯಾರಾದ್ರೂ ಸ್ವಲ್ಪ ಹೊತ್ತು ಸ್ವೀಟ್ ಆಗಿ ಮಾತಾಡಿದರೆ ಅವರನ್ನು ಒಳ್ಳೆಯವರು ಎಂದು ತಿಳಿದುಕೊಳ್ಳುತ್ತೇವೆ. ಆದರೆ ಸ್ವೀಟ್ ಆಗಿ ಮಾತಾಡುವವರೆಲ್ಲಾ ಒಳ್ಳೆಯವರಲ್ಲ ಕೋಪದಿಂದ ಮಾತಾಡುವವರು ಕೆಟ್ಟವರಲ್ಲ. ಅವರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು 1 ವರ್ಷ ಅವರನ್ನು ಗಮನಿಸಬೇಕು.
10) ಅಪ್ಪ ಅಮ್ಮ ಕಷ್ಟ ಪಟ್ಟು ತಮ್ಮ ಮಕ್ಕಳನ್ನು ಬೆಳೆಸಿ ಓದಿಸುತ್ತಾರೆ. ಒಳ್ಳೆ ಜೀವನ ಕೊಡುತ್ತಾರೆ ಮಕ್ಕಳು ಫಾರಿನ್ ಅಥವಾ ದೂರದಲ್ಲಿ ಇರುತ್ತಾರೆ. ಇಲ್ಲಿ ಅಪ್ಪ ಅಮ್ಮ ನನ್ನ ಮಗಳು ಅಥವಾ ನನ್ನ ಮಗ ಫಾರಿನಲ್ಲಿದ್ದಾನೆ ಲಕ್ಷ ಹಣ ಬರುತ್ತದೆ ಎಂದು ಖುಷಿಯಿಂದ ಹೇಳಿಕೊಂಡಿರುತ್ತಾರೆ ಹೀಗೆ ಹೇಳುವ ಅಪ್ಪ ಅಮ್ಮ ಇರುವುದು ವೃದ್ಧಾಶ್ರಮದಲ್ಲಿ ಅಪ್ಪ ಅಮ್ಮನಿಗೆ ಬೇಕಾಗಿರುವುದು ಮಕ್ಕಳ ಪ್ರೀತಿ ಅವರನ್ನು ನೀವೆಲ್ಲೆ ಇದ್ದರು ಅವರನ್ನು ನೋಡಿಕೊಳ್ಳಿ.
11) ಬಹಳಷ್ಟು ಹೆಣ್ಣು ಮಕ್ಕಳ ಕೂದಲು ಉದುರಲು ಕಾರಣ ಬಿಗಿಯಾಗಿ ಜಡೆ ಹಾಕಿಕೊಳ್ಳುವುದರಿಂದ ಆದ್ದರಿಂದ ಸ್ವಲ್ಪ ಲೂಸಾಗಿ ಜಡೆ ಹಾಕಿಕೊಳ್ಳಬೇಕು.
12) ಮೊಯಶಶ್ಚರೈಸ್ ನ್ನು ದೇಹಕ್ಕೆ ಉಜ್ಜಬಾರದು ನಿಧಾನವಾಗಿ ಅಪ್ಲೈ ಮಾಡಬೇಕು. 13) ಕೋಪವಾಗಲಿ, ತಾಪವಾಗಲಿ ಪ್ರೀತಿಯಾಗಲಿ ಯಾವುದೇ ಇರಲಿ ಅತಿಯಾಗಿರಬಾರದು
ಅತಿಯಾದರೆ ಅದೆ ವಿಷವಾಗುತ್ತದೆ. 14) ರೋಡಿನಲ್ಲಿ ಯಾರಾದರೂ ಏನಾದರೂ ಹೇಳಿದರೆ ದುಃಖ ಪಡಬಾರದು ನಮ್ಮ ಎದುರಿಗಿರುವವರ ಮಾತನ್ನು ಸ್ವೀಕರಿಸುತ್ತೇವೊ ಆಗ ದುಃಖವಾಗುತ್ತದೆ.
15) ಪ್ರಪಂಚದಲ್ಲಿ ಅತಿ ದೊಡ್ಡ ಶತ್ರುವೆಂದರೆ ಅಹಂಕಾರ ಮತ್ತು ಸೋಮಾರಿ ಇವೆರಡರಲ್ಲಿ ಯಾವುದು ಇದ್ದರೂ ಜೀವನಕ್ಕೆ ಒಳ್ಳೆಯದಲ್ಲ ಜೀವನದಲ್ಲಿ ಏನಾದರೂ ಸಾಧಿಸಬೇಕೆಂದರೆ ಇವೆರಡರಿಂದ ದೂರವಿರಬೇಕು. ತಪ್ಪು ಮಾಡುವುದು ಸಹಜ ತಪ್ಪು ಮಾಡುವುದೆ ಜೀವನ ಆಗಬಾರದು.