ಮೀನು ಸಾಕಾಣಿಕೆಯನ್ನು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆದ ಸಾವಣ್ಣ ಅವರಿಂದ ಮೀನು ಸಾಕಾಣಿಕೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾವಣ್ಣ ಅವರು ತಮ್ಮ ಒಂದು ಎಕರೆಯಲ್ಲಿ ಮೀನು ಸಾಕಾಣಿಕೆ ಮಾಡಿದ್ದಾರೆ ಬೆಳೆ ಬೆಳೆಯಲಾಗದ ಜಾಗದಲ್ಲಿ 7 ಫೀಟ್ ಆಳದಲ್ಲಿ ನೀರು ಬಿಟ್ಟು ಮೀನು ಸಾಕಾಣಿಕೆ ಮಾಡಲಾಗಿದೆ. ಇವರು ಹೊಸಪೇಟೆಯಿಂದ ಮೀನುಗಳನ್ನು ತಂದಿದ್ದಾರೆ ಒಂದು ಸಾವಿರ ಮೀನುಗಳಿಗೆ 300-350 ರೂ ಇರುತ್ತದೆ. ಅವರು ಮೀನು ಮರಿಗಳನ್ನು 1000 ದ ಒಂದೊಂದು ನೀರು ತುಂಬಿದ ಕವರ್ ಪ್ಯಾಕ್ ನಲ್ಲಿ ಆಕ್ಸಿಜನ್ ಹಾಕಿ ಕೊಡುತ್ತಾರೆ. ಅದನ್ನು 8 ರಿಂದ 10 ತಾಸಿನ ಒಳಗೆ ಮಾಡಿಕೊಂಡ ನೀರಿನ ಘಟಕಕ್ಕೆ ಬಿಡಬೇಕು. ಸಾವಣ್ಣ ಅವರು ೧೫ ಸಾವಿರ ಮೀನುಗಳನ್ನು ತಂದಿದ್ದಾರೆ ಅವುಗಳ ಬೆಳವಣಿಗೆಯನ್ನು ನೋಡಿಕೊಂಡು ಹೆಚ್ಚಿನ ಮರಿಗಳನ್ನು ಸಾಕಲಾಗುತ್ತದೆ. ೧೫ ಸಾವಿರ ಮೀನುಗಳ ಖರೀದಿಗೆ ೩ ಸಾವಿರ ರೂ ಖರ್ಚಾಯಿತು. ಕಟ್ಲೆ ಕಮಲಕರ್, ಭಾಸ್ಕರ್ ಎಂಬ ಮೀನಿನ ತಳಿಗಳನ್ನು ತರಲಾಗಿದೆ. ತರುವಾಗ ಯಾವ ಮೀನು ಚೆನ್ನಾಗಿ ಬೆಳೆಯುತ್ತದೆ ಎಂದು ನೋಡಿಕೊಂಡು ತರಬೇಕು. ಸಾವಣ್ಣ ಅವರು ತಂದ ಎಲ್ಲಾ ಮೂರು ತಳಿಗಳ ಮೀನುಗಳು ನಾಲ್ಕು ತಿಂಗಳಲ್ಲಿ ಅರ್ಧ ಕೆ.ಜಿ ಇಂದ 1ಕಜಿ ವರೆಗೆ ಬೆಳೆದಿದೆ. ಮೀನು ಸಾಕಾಣಿಕೆಗೆ ನೀರಿಗಾಗಿ ಎರಡು ಬೋರ್ವೆಲ್ ಮತ್ತು ಹಳ್ಳವಿದೆ. ಬೇಸಿಗೆಕಾಲದಲ್ಲಿ ಹಳ್ಳಗಳಲ್ಲಿ ನೀರು ಖಾಲಿಯಾದಾಗ ಬೋರ್ವೆಲ್ ನಿಂದ ನೀರನ್ನು ಉಪಯೋಗಿಸಲಾಗುತ್ತದೆ.

ಮೀನುಗಳಿಗೆ ಆಹಾರವೆಂದರೆ ಮರಿಗಳಿರುವಾಗ ಎರಡು ತಿಂಗಳವರೆಗೆ ಶೇಂಗಾ ಹಿಂಡಿಯನ್ನು ಹಾಕಲಾಗುತ್ತದೆ. ೧೫ ಸಾವಿರ ಮೀನುಗಳಿಗೆ 6 ಕೆ.ಜಿ ಶೇಂಗಾ ಹಿಂಡಿಯನ್ನು ಹಾಕಲಾಗುತ್ತದೆ. ನಂತರ ಮೆಕ್ಕೆ ಜೋಳ, ಸಜ್ಜೆ, ಅಕ್ಕಿ ನುಚ್ಚು ಇವುಗಳನ್ನು ಹಾಕಲಾಗುತ್ತದೆ ಮರಿಗಳು ದೊಡ್ಡದಾದಾಗ ದಿನಕ್ಕೆ ೨೦ ರಿಂದ 25 ಕೆ.ಜಿ ಹಾಕಲಾಗುತ್ತದೆ. 8 ತಿಂಗಳವರೆಗೆ ಸಾಕಿದ ನಂತರ ಅವುಗಳನ್ನು ಮಾರಲಾಗುತ್ತದೆ. 8 ತಿಂಗಳವರೆಗೆ ೨ ರಿಂದ ೨ ವರೆ ಕೆ.ಜಿ ಬೆಳವಣಿಗೆಯಾಗುತ್ತದೆ.

ಮೀನು ವ್ಯಾಪಾರಸ್ಥರು ಮೀನು ಸಾಕಾಣಿಕಾ ಜಾಗಕ್ಕೆ ಬಂದು ತೂಕ ಮಾಡಿ ಮಾರ್ಕೆಟ್ ರೇಟ್ ನಂತೆ ವ್ಯಾಪಾರ ಮಾಡುತ್ತಾರೆ ಒಂದು ಕೆಜಿ ಗೆ ೮೦ ರಿಂದ ೧೦೦ ರೂ ಸಾಮಾನ್ಯವಾಗಿ ಇರುತ್ತದೆ. ೧೫ ಸಾವಿರ ಮೀನುಗಳಿಗೆ ೮ ತಿಂಗಳಲ್ಲಿ 3 ಲಕ್ಷ ರೂ ಖರ್ಚಿಗೆ ಬರುವುದು. ೧೫ ಸಾವಿರ ಮೀನುಗಳಲ್ಲಿ ೧೦ ಸಾವಿರ ಮೀನುಗಳಿದ್ದರೂ 10 ಲಕ್ಷ ಆದಾಯ ಬರುತ್ತದೆ, ಖರ್ಚನ್ನು ತೆಗೆದರೂ ೫ ರಿಂದ 6 ಲಕ್ಷ ಲಾಭ ಗಳಿಸಬಹುದು. ಮೀನು ಸಾಕಾಣಿಕೆಗೆ ನೀರು ಮತ್ತು ಆಹಾರ ಕೊಡುವುದೆ ಮುಖ್ಯ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

Leave a Reply

Your email address will not be published. Required fields are marked *