ಈಗಿನ ನಮ್ಮ ಜೀವನ ಶೈಲಿ ಆಹಾರ ಪದ್ಧತಿಯು ಗಳಲ್ಲಿ ಸಾಕಷ್ಟು ಬದಲಾವಣೆಯನ್ನು ನಾವು ಮಾಡಿಕೊಂಡಿದ್ದೆವೆ. ಆದರೆ ನಾವು ಸೇವಿಸುವ ಆಹಾರ ಎಷ್ಟರಮಟ್ಟಿಗೆ ಪೌಷ್ಟಿಕ ಆಹಾರ ಆಗಿದೆ ಇದರಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವಂತಹ ಅಂಶಗಳು ಎಷ್ಟು ಹಾಗೂ ಬೇಡವಾಗಿರುವ ಅಂಶಗಳು ಎಷ್ಟು ಎನ್ನುವುದು ನಮಗೆ ತಿಳಿದಿರುವುದಿಲ್ಲ. ಸೇವಿಸುವ ಆಹಾರದಿಂದ ನಮ್ಮ ಹೊಟ್ಟೆಯಲ್ಲಿ ಎಷ್ಟೋ ರೀತಿಯ ವಿಷಕಾರಿ ಹಾಗೂ ವ್ಯರ್ಥ ಪದಾರ್ಥಗಳು ಉಳಿದುಕೊಂಡಿರುತ್ತವೆ. ಕೆಲವೊಮ್ಮೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಈ ವಿಷಕಾರಿ ವ್ಯರ್ಥ ಪದಾರ್ಥಗಳನ್ನು ನಮ್ಮ ದೇಹದಿಂದ ಯಾವ ರೂಪದಲ್ಲಿ ಹೊರಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವು ಕೆಲವು ಸರಳ ಸುಲಭ ಮನೆಮದ್ದು ಗಳನ್ನು ಉಪಯೋಗಿಸಿಕೊಂಡು ನಮ್ಮ ದೇಹದಲ್ಲಿರುವ ವ್ಯರ್ಥ ವಿಷ ಕಾರಿ ಪದಾರ್ಥಗಳನ್ನು ಹೊರಹಾಕುವುದು ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಾವು ಈಗಿನ ಆರೋಗ್ಯ ಪದ್ಧತಿಯಲ್ಲಿ ಅನಿವಾರ್ಯ ಕಾರಣಗಳಿಂದ ಸಿದ್ಧ ಆಹಾರಗಳನ್ನು ಸೇವಿಸಿ ಅನಾರೋಗ್ಯದಜೀವನಶೈಲಿಯನ್ನು ಅನುಸರಿಸುತ್ತ ಮಾಲಿನ್ಯ ಭರಿತ ವಾಯುವನ್ನು ಕೂಡ ಸೇವಿಸುತ್ತಾ, ಇದೇ ರೀತಿ ಪ್ರತಿದಿನ ಜೀವನ ನಡೆಸುತ್ತಿದ್ದೇವೆ. ಹೀಗಿದ್ದಾಗ ನಮ್ಮ ಹೊಟ್ಟೆಯಲ್ಲಿ ಸಾಕಷ್ಟು ವಿಷಕಾರಿ ಅಂಶಗಳು ಕೂಡಿರುತ್ತವೆ. ನಮ್ಮ ಕಣ್ಣಿಗೆ ಹಾಗೂ ಮನಸ್ಸಿಗೆ ನೋಡಲು ಯಾವ ಆಹಾರ ಸುಂದರವಾಗಿ ಹಾಗು ರುಚಿಕರವಾಗಿ ಕಾಣುತ್ತದೆ ಅದು ನೇರವಾಗಿ ನಮ್ಮ ಹೊಟ್ಟೆಯನ್ನು ಸೇರಿರುತ್ತದೆ. ಅನಾರೋಗ್ಯಕರ ಆಹಾರ ಪದಾರ್ಥಗಳ ಸೇವನೆಯಿಂದ ನಮ್ಮ ಹೊಟ್ಟೆಯಲ್ಲಿ ಹಾಗೂ ಕರುಳುಗಳಲ್ಲಿ ಸಾಕಷ್ಟು ವಿಷಕಾರಿ ಪದಾರ್ಥಗಳು ಶೇಖರಣೆಯಾಗುತ್ತದೆ. ಇಂದು ನಾವು ಸೇವಿಸುತ್ತಿರುವ ಆಹಾರ ಪದಾರ್ಥಗಳು ಪಾನೀಯಗಳು ಅಷ್ಟೇ ಅಲ್ಲದೆ ನಾವು ಉಸಿರಾಡಲು ತೆಗೆದುಕೊಳ್ಳುವ ಗಾಳಿಯೂ ಕೂಡ ಸಾಕಷ್ಟು ಮಲೀನವಾಗಿರುತ್ತದೆ. ಇದರಿಂದಾಗಿ ನಮ್ಮ ಆಹಾರದಲ್ಲಿ ಇರುವಂತಹ ಸೂಕ್ಷ್ಮಜೀವಿಗಳು ನಮ್ಮ ಹೊಟ್ಟೆ ಮತ್ತು ಕರುಳನ್ನು ಸೇರಿಕೊಂಡು ಅಲ್ಲಿಯೇ ವಾಸ ಮಾಡಿ ಆಹಾರ ಸೇವಿಸುತ್ತಾರೆ ಮಗೆ ಯಾವುದಾದರೂ ಒಂದು ರೋಗವನ್ನು ತರಲು ದಾರಿಯಾಗಿರುತ್ತದೆ. ಹಾಗಾಗಿ ಆಗಾಗ ಸಂಪೂರ್ಣವಾಗಿ ನಮ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕಬೇಕಾಗಿರುತ್ತದೆ. ನಮ್ಮ ಹಿರಿಯರು ಇದನ್ನು ಹೊಟ್ಟೆ ತೊಳೆಸುವುದು ಎಂದು ಹೇಳುತ್ತಿದ್ದರು.
ಹಿಂದಿನ ಕಾಲದ ಜನರು ಹೊಟ್ಟೆಯನ್ನು ಶುದ್ಧೀಕರಣ ಮಾಡಿಕೊಳ್ಳಲು ಉಪ್ಪುನೀರನ್ನು ಸೇವನೆ ಮಾಡಿ ಹೊಟ್ಟೆ ಶುದ್ಧಿಕರಿಸಿಕೊಳ್ಳುತ್ತಿದ್ದರು. ಇನ್ನೊಂದು ಉಪಾಯ ಎಂದರೆ ಹರಳೆಣ್ಣೆ ಸೇವನೆ ಮಾಡುವುದು. ಇದಕ್ಕಿಂತಲೂ ಶುದ್ಧವಾದ ಹಾಗೂ ಅಪ್ಪಟ ನೈಸರ್ಗಿಕವಾದ ಹಾಗೂ ಯಾವುದೇ ಅಡ್ಡ ಪರಿಣಾಮ ಬೀರದ ಔಷಧ ಎಂದರೆ ತುಳಸಿ. ಇದು ನಮ್ಮ ಹೊಟ್ಟೆಯಲ್ಲಿ ಇರುವ ಎಲ್ಲಾ ಕ್ರಿಮಿಕೀಟಗಳು ಹಾಗೂ ವಿಷಕಾರಿ ಅಂಶಗಳನ್ನು ಸಂಪೂರ್ಣವಾಗಿ ಹೊರಹಾಕಲು ಸಹಾಯ ಮಾಡುತ್ತದೆ. ನಾವು ನಮ್ಮ ದೇಹದಲ್ಲಿ ಇರುವಂತಹ ಕಲ್ಮಶಗಳನ್ನು ಹೊರಹಾಕಲು ಬಳಸುವಂತಹ ಮನೆಮದ್ದುಗಳು ಇವು ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಪದಾರ್ಥಗಳೇ ಆಗಿವೆ. ಇವುಗಳನ್ನು ಬಿಟ್ಟು ನಾವು ನಮ್ಮ ದೇಹದ ಕಲ್ಮಶವನ್ನು ಹೊರ ಹಾಕಲು ಎನು ಮಾಡಬೇಕು ಎನ್ನುವುದನ್ನು ನೋಡೋಣ.
ಮೊದಲು ಪಪ್ಪಾಯ ಎಲೆ ತಂದು ಅದನ್ನು ಚೆನ್ನಾಗಿ ತೊಳೆದು, ಮೂರು ದೊಡ್ಡ ಚಮಚದಷ್ಟು ರಸ ತೆಗೆದುಕೊಂಡು ಅದಕ್ಕೆ ಒಂದು ದೊಡ್ಡ ಚಮಚ ಜೇನುತುಪ್ಪ ಬೆರೆಸಿ ಸೇವಿಸಬೇಕು. ಇದರಿಂದ ನಮ್ಮ ಹೊಟ್ಟೆಯಲ್ಲಿ ಇರುವ ಎಲ್ಲಾ ಕಲ್ಮಶಗಳು ಕೂಡಾ ಹೊರ ಹಾಕಲ್ಪಡುತ್ತವೆ. ಹಾಗೆ ಹೊಟ್ಟೆ ಮತ್ತು ಕರುಳಿನಲ್ಲಿ ಇರುವ ಸೂಕ್ಷ್ಮ ಕ್ರಿಮಿಗಳು ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳು ಹೊರ ಹೋಗಿ ಹೊಟ್ಟೆ ಮತ್ತು ಕರುಳು ಸ್ವಚ್ಛವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಪಪ್ಪಾಯ ರಸ ಮತ್ತು ಜೇನುತುಪ್ಪ ಇವುಗಳ ಮಿಶ್ರಣ ನಮ್ಮ ಹೊಟ್ಟೆಗೆ ಸೇರಿ , ಹೊಟ್ಟೆಯ ಮತ್ತು ಕರುಳಿನ ಸುತ್ತ ಇರುವ ಒಳ ಗೋಡೆಗಳಲ್ಲಿ ಇರುವ ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮ ಜೀವಿಗಳನ್ನು ಸಾಯಿಸಿ, ಹೊಸದಾಗಿ ಜೀವಕೋಶಗಳ ಉತ್ಪತ್ತಿ ಆಗಲು ನೆರವಾಗುತ್ತದೆ. ಈ ಮೂಲಕ ಹೊಸದಾದ ಜೀರ್ಣ ರಸ ಉತ್ಪತ್ತಿ ಆಗಲು ಕಾರಣ ಆಗುತ್ತದೆ. ಈ ಮನೇ ಮದ್ದನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಈ ರೀತಿ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು.