Ultimate magazine theme for WordPress.

ಕುಡಿತದ ಚಟದಿಂದ ಬಿಡಿಸಲು ಮನೆಮದ್ದು

0 13

ನಮ್ಮ ಸುತ್ತಲಿನ ಪರಿಸರದಲ್ಲಿಯೆ ಇದೆ ಆರೋಗ್ಯ ಸಂಜೀವಿನಿ, ಅಡುಗೆ ಮನೆಯಲ್ಲಿಯೆ ಇದೆ ಕುಟುಂಬದ ಆರೋಗ್ಯ. ಕುಡಿತ ಒಂದು ಕೆಟ್ಟ ಛಟವಾಗಿದ್ದು ನೆಮ್ಮದಿ ಹಾಳಾಗುತ್ತದೆ ಎಷ್ಟೋ ಜನರಿಗೆ ಕುಡಿತ ಬಿಡುವ ಮನಸ್ಸಿರುತ್ತದೆ ಆದರೆ ಹೇಗೆಂದು ತಿಳಿದಿರುವುದಿಲ್ಲ ಕುಡಿತ ಬಿಡುವ ಸುಲಭದ ಮನೆಮದ್ದಿನ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಈ ಮನೆಮದ್ದಿನಿಂದ ಕುಡಿತ ಬಿಡುವುದೊರೊಂದಿಗೆ ಬೀಡಿ, ಸಿಗರೇಟ್, ಗಾಂಜಾ, ಅಫೀಮುಗಳನ್ನು ಬಿಡಬಹುದು. ಇದನ್ನು ಮನೆಗಳಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾದ ಸಾಮಗ್ರಿಗಳು ಬಜೆ, ಜೀರಿಗೆ, ಏಲಕ್ಕಿ ಇವುಗಳಿಂದಲೆ ಮನೆ ಮದ್ದು ತಯಾರಿಸಬಹುದು. 2ಗ್ರಾಂ ಬಜೆಯನ್ನು ಪುಡಿ ಮಾಡಿ ವಜ್ರಕಾಯ ಅಂದರೆ ಪುಡಿ ಮಾಡಿದ್ದನ್ನು ಬಟ್ಟೆಯಲ್ಲಿ ಸುತ್ತಿ ಜರಡಿ ಹಿಡಿದಾಗ ಪೌಡರ್ ಬರುತ್ತದೆ ಇದನ್ನು ವಜ್ರಕಾಯ ಎನ್ನುವರು. ಏಲಕ್ಕಿ ಸಿಪ್ಪೆ ತೆಗೆದು ಪುಡಿ ಮಾಡಬೇಕು, ಜೀರಿಗೆಯನ್ನು ಪುಡಿ ಮಾಡಬೇಕು ಮೂರನ್ನು 2ಗ್ರಾಂ ತೆಗೆದುಕೊಂಡು 300ಎಮ್.ಎಲ್ ನೀರಿನಲ್ಲಿ ಕುದಿಸಬೇಕು ಕುದಿದು 100ಎಮ್.ಎಲ್ ಆಗಬೇಕು.

ಬೆಳಿಗ್ಗೆ ಮತ್ತು ರಾತ್ರಿ ಊಟದ ಮೊದಲು 100ಎಮ್.ಎಲ್ 100 ದಿನ ಕುಡಿಯುವುದರಿಂದ ಕುಡಿತ ಬಿಡುವುದಲ್ಲದೆ ಬೀಡಿ, ಸಿಗರೇಟನ್ನು ಸುಲಭವಾಗಿ ಬಿಡಬಹುದು. ಇದರಿಂದ ದೇಹಕ್ಕೆ ಯಾವುದೇ ರೀತಿಯ ಹಾನಿಯಿಲ್ಲ 100ದಿನದವರೆಗೆ ತಪ್ಪದೆ ಮಾಡಬೇಕು ಮಧ್ಯದಲ್ಲಿ ಬಿಡಬಾರದು. ಕುಡಿತದಿಂದ ಆರೋಗ್ಯ ಹಾಳಾಗುವುದಲ್ಲದೆ ಮನೆಯಲ್ಲಿದ್ದವರ ಮಾನಸಿಕ ನೆಮ್ಮದಿ ಹಾಳಾಗುತ್ತದೆ ಹಾಗಾಗಿ ಈ ಮನೆ ಮದ್ದಿನ ಮೂಲಕ ಕುಡಿತದಿಂದ ದೂರವಿರಿ ನಿಮ್ಮ ಮನೆಯವರನ್ನು ಮಾನಸಿಕ ಒತ್ತಡದಿಂದ ದೂರವಿರಿಸಿ. ತಪ್ಪದೆ ಈ ಮಾಹಿತಿಯನ್ನ ಎಲ್ಲರಿಗೂ ತಿಳಿಸಿ.

Leave A Reply

Your email address will not be published.