ನಿಮ್ಮ ಮನೆಯಲ್ಲಿ ಇರುವ ತುಳಸಿ ಗಿಡಕ್ಕೆ ಈ ರೀತಿಯಾಗಿ ಮಾಡುವುದರಿಂದ ತುಳಸಿ ಗಿಡ ಚೆನ್ನಾಗಿ ಬೆಳೆಯುವುದು ಮಾತ್ರ ಅಲ್ಲದೆ ನಿಮ್ಮ ಮನೆಯೂ ಕೂಡಾ ಒಂದು ಪುಣ್ಯ ಕ್ಷೇತ್ರದ ಹಾಗೇ ಆಗುವುದು ಮನೆಯ ಅದೃಷ್ಟ ಅನ್ನೋದು ಸಂಪೂರ್ಣವಾಗಿ ಬದಲಾಗುವುದು. ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ತುಳಸಿ ಗಿಡಕ್ಕೆ ಬಹಳ ಮಹತ್ವವಿದೆ. ಅಪಾರ ಭಕ್ತಿ ಭಾವನೆಯಿಂದ ತುಳಸಿ ಗಿಡಕ್ಕೆ ಪೂಜೆಯನ್ನು ಮಾಡಲಾಗುತ್ತದೆ. ಆದರೆ ಈ ರೀತಿಯಾಗಿ ತುಳಸಿ ಗಿಡಕ್ಕೆ ಪ್ರತಿದಿನ ಪೂಜೆಯನ್ನು ಸಲ್ಲಿಸುವುದರಿಂದ ದೇವರಿಗೆ ಪೂಜೆ ಸಲ್ಲಿಸಿ ನಾವು ಹೇಗೆ ನಮ್ಮ ಮನೆಗೆ ಅದೃಷ್ಟವನ್ನು ತಂದುಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತುಳಸಿಗಿಡ ಆಯುರ್ವೇದದಲ್ಲಿ ಮುಖ್ಯವಾದ ಸ್ಥಾನವನ್ನು ಹೊಂದಿದೆ. ಎಲ್ಲ ರೀತಿಯ ರೋಗ, ಕಾಯಿಲೆಗಳಿಗೂ ತುಳಸಿಗಿಡ ದಿವ್ಯ ಔಷಧಿ ಎಂದು ಹೇಳಬಹುದು. ನಿಮ್ಮ ಮನೆಯ ಮುಂದೆ ಒಂದು ತುಳಸಿಗಿಡ ಇದ್ದರೆ ಸಾಕಷ್ಟು ಅದೃಷ್ಟವನ್ನು ಪಡೆದುಕೊಳ್ಳಬಹುದು. ತುಳಸಿ ಗಿಡಕ್ಕೆ ಹಿಂದೂಧರ್ಮದಲ್ಲಿ ಮಹತ್ವದ ಸ್ಥಾನವಿದ್ದು ಹಿಂದೂಗಳು ಮಾತ್ರ ತುಳಸಿ ಗಿಡದ ಪೂಜೆಯನ್ನು ಮಾಡುತ್ತಾರೆ. ಹಿಂದೂಗಳು ತುಳಸಿ ಗಿಡವನ್ನು ಲಕ್ಷ್ಮಿ ಸ್ವರೂಪ ಎಂದು ತಿಳಿದು ಪೂಜಿಸುತ್ತಾರೆ.
ಯಾವ ಮನೆಯ ಮುಂದೆ ತುಳಸಿಗಿಡ ಇರುತ್ತದೆ ಆ ಮನೆಯ ಮುಂದೆ ಯಾವುದೇ ರೀತಿಯ ದಾರಿದ್ರ್ಯ ಹಾಗೂ ದುಷ್ಟಶಕ್ತಿಗಳು ಬರುವುದಿಲ್ಲ ಎಂದು ಹೇಳಲಾಗುತ್ತದೆ ಹಾಗೂ ಅದನ್ನು ನಂಬಲಾಗುತ್ತದೆ ಕೂಡಾ. ಪ್ರತಿನಿತ್ಯ ತುಳಸಿ ಗಿಡವನ್ನು ಪೂಜೆ ಮಾಡುವಂತಹ ಮಹಿಳೆಯರು 7 ಜನ್ಮಗಳ ವರೆಗೂ ಸೌಭಾಗ್ಯವತಿ ಯಾಗಿರುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಮನೆಯಲ್ಲಿನ ಹೆಣ್ಣುಮಕ್ಕಳು ಬೆಳಿಗ್ಗೆ ಬೇಗ ಎದ್ದು, ಸ್ನಾನ ಮಾಡಿ ತುಳಸಿ ಗಿಡಕ್ಕೆ ಪೂಜೆಯನ್ನು ಮಾಡುವುದರಿಂದ ಏಳು ಜನ್ಮಗಳವರೆಗೂ ಸೌಭಾಗ್ಯವತಿ ಆಗಿ ಇರಬಹುದು.
ತುಳಸಿ ಗಿಡಕ್ಕೆ ಪ್ರತೀ ದಿನ ಪೂಜೆ ಸಲ್ಲಿಸುವರ ಮನೆಯಲ್ಲಿ ಯಾವುದೇ ಜಗಳ ಕಲಹಗಳು ಉಂಟಾಗುವುದಿಲ್ಲ. ಅಂತಹ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು. ಹಾಗಾಗಿ ಪ್ರತೀ ದಿನ ತುಳಸಿ ಗಿಡಕ್ಕೆ ಪೂಜೆಯನ್ನು ಮಾಡಬೇಕು ಹಾಗೂ ಪ್ರದಕ್ಷಿಣೆಯನ್ನು ಕೂಡ ಹಾಕಬೇಕು.
ಇನ್ನೊಂದು ಮುಖ್ಯವಾದ ವಿಷಯ ಎಂದರೆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಸಹ ಪ್ರತಿ ಅಮಾವಾಸ್ಯೆ ದಿನ ಅಥವಾ ಪ್ರತಿ ಶುಕ್ರವಾರ ದಿನ ಸಂಜೆ ತುಳಸಿ ಗಿಡಕ್ಕೆ ತುಪ್ಪದ ದೀಪವನ್ನು ಹಚ್ಚಬೇಕು ಹಾಗೂ ತುಳಸಿ ಗಿಡಕ್ಕೆ ಪೂಜೆಮಾಡಿದ 11 ಸುತ್ತು ಪ್ರದಕ್ಷಿಣೆ ಹಾಕುವುದರಿಂದ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ವೃದ್ಧಿಯಾಗುತ್ತದೆ. ಹಾಗೂ ಅಷ್ಟಲ್ಲದೆ ಮನೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೂ ಕೂಡ ನಿವಾರಣೆಯಾಗುವುದು.
ಹಾಗೆ ಶುಕ್ರವಾರದ ದಿನ ತುಳಸಿಕಟ್ಟೆಗೆ ಪೂಜೆ ಮಾಡುವಾಗ ದೇವರ ಎದುರು ಒಂದು ರೂಪಾಯಿ ನಾಣ್ಯವನ್ನು ಪೂಜೆ ಮಾಡಿ ನಂತರ ತುಳಸಿಕಟ್ಟೆ ಮಣ್ಣಿನಲ್ಲಿ ಹಾಕಿ ಮುಚ್ಚುವುದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಏನೇ ಇದ್ದರೂ ಕೂಡ ಪರಿಹಾರವಾಗುವುದು. ಇನ್ನು ಅನಾರೋಗ್ಯದ ಸಮಸ್ಯೆಯಿಂದ ಪ್ರತಿದಿನವೂ ಬಳಲುತ್ತಿದ್ದರೆ, ಅನಾರೋಗ್ಯದ ಸಮಸ್ಯೆಯಿಂದ ಹೊರಬರಲು ಪ್ರತಿದಿನ ತುಳಸಿ ಕಟ್ಟೆಯನ್ನು ಪೂಜಿಸುವುದರಿಂದ ಅನಾರೋಗ್ಯದ ಸಮಸ್ಯೆಯಿಂದ ಹೊರಬರಬಹುದು ಎನ್ನುವುದನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರತಿ ಅಮಾವಾಸ್ಯೆ ಹುಣ್ಣಿಮೆ ಅಥವಾ ಶುಕ್ರವಾರದ ದಿನ ತುಳಸಿಕಟ್ಟೆಗೆ ನಿಂಬೆಹಣ್ಣಿನಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಯಾವುದೇ ರೀತಿಯ ಸಂಕಷ್ಟದಿಂದ ಪಾರಾಗಬಹುದು.