ಕುರಿ ಸಾಕಾಣಿಕೆಯ ಬಗ್ಗೆ ಆಸಕ್ತಿ ಇದ್ದರು ಮಾಹಿತಿ ಇರುವುದಿಲ್ಲ ಬಹಳಷ್ಟು ಜನರಿಗೆ ಹಾಗಾಗಿ ಕಡಿಮೆ ಖರ್ಚಿನಲ್ಲಿ ಕುರಿ ಸಾಕಾಣಿಕೆಯಿಂದ ಲಾಭ ಪಡೆಯುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಮನು ಗೌಡ ಇವರು ತಮ್ಮ ಮನೆಯಲ್ಲಿಯೇ ಕುರಿಗಳನ್ನು ಸಾಕಿ 1 ಕುರಿಗೆ 7-10,000ರೂ ಲಾಭವಾಯಿತು. ಕುರಿಗಳನ್ನು ಗುಲ್ಬರ್ಗ, ಭದ್ರಾವತಿ ಸಂತೆ ಮತ್ತು ಕುಮಸಿ ಕಡೆಗಳಿಂದ ತರಲಾಯಿತು. ಲಾಕ್ ಡೌನ್ ಕ್ಕಿಂತ ಮೊದಲು 1ಕುರಿ ಮರಿಗೆ ಗೆ 3000 ಇತ್ತು ಈಗ 1ಕುರಿಗೆ 6000ರು ಗಳಾಗಿದೆ. ತೋಟದಲ್ಲಿ ಸಿಗುವ ಅಡಿಕೆ ದಬ್ಬೆಗಳು ಮತ್ತು ಹಂಚನ್ನು ಬಳಸಿ ಕಡಿಮೆ ಖರ್ಚಿನಲ್ಲಿ 8-10,000ದಲ್ಲಿ ಶೆಡ್ ನಿರ್ಮಾಣ ಮಾಡಬಹುದಾಗಿದೆ ದಬ್ಬೆಗಳನ್ನು ಕಾಲು ಸಿಕ್ಕಿಹಾಕಿಕೊಳ್ಳದಂತೆ ಜೋಡಿಸಿ ಅಟ್ಟ ಮಾಡಬೇಕು. ಕುರಿಗಳನ್ನು ತಂದಕೂಡಲೆ ಜಂತು ಹುಳು ಔಷಧಿ ಮತ್ತು ET, HS ವ್ಯಾಕ್ಸಿನ್ ಕೊಡಬೇಕು. ಕುರಿಗಳಿಗೆ ಬರುವುದು 3ರೀತಿಯ ಖಾಯಿಲೆ ಜ್ವರ ಭೇದಿ ಮತ್ತು ಕೆಮ್ಮು ಅವುಗಳಿಗೆ ವೈದ್ಯರಿಂದ ಸಲಹೆ ಪಡೆಯಬೇಕು.

ಕುರಿಗಳಿಗೆ ಹಾಕುವ ಆಹಾರವೆಂದರೆ ಮೆಕ್ಕೆಜೋಳ ಮತ್ತು ಸಡೆಸೊಪ್ಪುಗಳನ್ನು ಕಟ್ ಮಾಡಿ ಹಾಕಲಾಗುತ್ತದೆ ಅವುಗಳಿಗೆ ಫೀಡ್ಸ್ ಜೋಳ 70ಕೆ. ಜಿ ಪುಡಿಮಾಡಿ, 30ಕೆ.ಜಿ ಗಟ್ಟಿ ಜೋಳ, 30ಕೆ.ಜಿ ಅಕ್ಕಿ, 50ಕೆ.ಜಿ ಗೋಧಿ ಮತ್ತು ಹತ್ತಿಕಾಳು, ಹುರುಳಿ, ಹಲ್ಸಂದಿ ಮಿಕ್ಸ್ ಮಾಡಿ 1ಕುರಿಗೆ 200-300 ಗ್ರಾಂ ಹಾಕಬೇಕು ಬೆಳೆಯುತ್ತಿದ್ದಂತೆ ಜಾಸ್ತಿ ಆಹಾ ಹಾಕಬೇಕು ಇದರಿಂದ ಭೇದಿ ಆಗುವ ಚಾನ್ಸ್ ಕಡಿಮೆ. ಬೆಳಗ್ಗೆ 7ಗಂಟೆಗೆ ಫೀಡ್ಸ್ ಹಾಕಲಾಗುವುದು 12ಗಂಟೆಯ ನಂತರ ಮೆಕ್ಕೆಜೋಳ, ಸೊಪ್ಪುಗಳನ್ನು ಹಾಕಲಾಗುತ್ತದೆ 1ಕುರಿಯನ್ನು ಬೆಳೆಸಲು ಖರ್ಚು 2,500ರೂ ಬರುತ್ತದೆ 5-6ತಿಂಗಳು ಸಾಕಿ ನಂತರ ಮಾರಾಟ ಮಾಡಲಾಗುತ್ತದೆ. ತೂಕದ ಲೆಕ್ಕದಲ್ಲಿ 400-420ರೂ ಗಳಿಗೆ ಮಾರಲಾಗುತ್ತದೆ ಕುರಿಗಳನ್ನು ಸಿಂಗಲ್ ಆಗಿ ಮಾರುವುದರಿಂದ ಲಾಭ ಆಗುತ್ತದೆ.ಕುರಿಗಳೊಂಡಿಗೆ ಮೇಕೆಗಳನ್ನು ಸಾಕಲಾಗಿದೆ ಮೇಕೆಗಳಿಗೂ ಕುರಿಗಳಿಗೆ ಹಾಕುವ ಆಹಾರವನ್ನು ಹಾಕಲಾಗುತ್ತದೆ ಕಾರ್ಮಿಕರಿಲ್ಲದೆ ಮನೆಯವರೇ ಕುರಿ ಸಾಕಾಣಿಕೆ ಮಾಡಿ ಲಾಭ ಪಡೆಯಬಹುದಾಗಿದೆ. ಹೊಸದಾಗಿ ಕುರಿ ಸಾಕುವವರಿಗೆ ಅವರು ಕೊಡುವ ಸಲಹೆ 5-10ಕುರಿಗಳನ್ನು ಕಡಿಮೆ ಬಂಡವಾಳ ಹಾಕಿ ಅಡಿಕೆ ಮರದ ದಬ್ಬೆಗಳನ್ನು ಬಳಸಿ ಶೆಡ್ ನಿರ್ಮಾಣ ಮಾಡಿ ಅದರಲ್ಲಿ ಕುರಿ ಸಾಕಾಣಿಕೆ ಮಾಡಿ ಲಾಭ ಗಳಿಸಬಹುದೆಂದು ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ. ಕೃಷಿಯಲ್ಲಿ ಆಸಕ್ತಿ ಇರುವ ಯುವಕರು ಕುರಿ ಮತ್ತು ಮೇಕೆ ಸಾಕಾಣಿಕೆಯಿಂದ ಲಾಭ ಗಳಿಸಬಹುದು ನೋಡಿ.

Leave a Reply

Your email address will not be published. Required fields are marked *