ನಿಮ್ಮ ಜಮೀನು ಬೇರೆಯವರ ಹೆಸರಲ್ಲಿ ಇದ್ದು ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಆಗುತ್ತಿಲ್ಲವೇ?

0 4,439

ದೇಶದ ಬೆನ್ನೆಲುಬಾಗಿರುವ ರೈತರು ಬಹಳಷ್ಟು ಸಂಕಷ್ಟವನ್ನು ಎದುರಿಸುತ್ತಾರೆ. ಸರಕಾರದ ಯೋಜನೆಗಳನ್ನು ಪಡೆಯುವಲ್ಲಿ ರೈತರು ವಿಫಲರಾಗುತ್ತಾರೆ ಆದ್ದರಿಂದ ರೈತರಿಗಾಗಿ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ರೈತರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಇಲ್ಲಿದೆ ಒಂದು ಸಿಹಿಸುದ್ದಿ.

ಬಹಳಷ್ಟು ರೈತರ ಜಮೀನು ಮೃತಪಟ್ಟವರ ಹೆಸರಿನಲ್ಲಿ ಹಾಗೂ ತಾತಾ ಮುತ್ತಾತನ ಹೆಸರಿನಲ್ಲಿ ಇರುತ್ತದೆ ಇದರಿಂದ ಸರ್ಕಾರದ ಯಾವುದೇ ಯೋಜನೆಗಳ ಲಾಭ ಪಡೆಯಲು ಆಗುವುದಿಲ್ಲ. ರೈತರಿಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಗಂಗಾ ಕಲ್ಯಾಣ, ಉಚಿತ ಬೋರ್ವೆಲ್ ಜೊತೆಗೆ ಪ್ರಧಾನಮಂತ್ರಿ ಕಿಸಾನ ಸಮ್ಮಾನ ಯೋಜನೆಯಿಂದ ರೈತರಿಗೆ ಕೇಂದ್ರ ಸರ್ಕಾರದಿಂದ 6,000 ರೂ ಹಾಗೂ ರಾಜ್ಯ ಸರ್ಕಾರದಿಂದ 4,000 ರೂ ದೊರೆಯುತ್ತದೆ.

ಸಾಲಮನ್ನಾ, ಬೆಳೆ ಸಾಲ, ಸಬ್ಸಿಡಿ ದರದಲ್ಲಿ ಕೃಷಿ ಉಪಕರಣಗಳು ಹೀಗೆ ಸಾಕಷ್ಟು ಯೋಜನೆಗಳಿವೆ ಆದರೆ ಬಹಳಷ್ಟು ರೈತರ ಜಮೀನಿನ ಪಹಣಿ ಪತ್ರ ಮೃತಪಟ್ಟವರ ಹೆಸರಿನಲ್ಲಿ, ತಾತಾ ಮುತ್ತಾತನ ಹೆಸರಿನಲ್ಲಿ ಇರುವುದರಿಂದ ಯೋಜನೆಗಳ ಲಾಭವನ್ನು ಪಡೆಯಲಾಗುತ್ತಿಲ್ಲ.

ಹಾಗಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ ರಾಜ್ಯಾದ್ಯಂತ ಪೌತಿ ಖಾತೆ ಆಂದೋಲನ ನಡೆಸುವ ಮೂಲಕ ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಖಾತೆ ಮಾಡವುದಾಗಿದೆ. ಈ ಆಂದೋಲನದ ಮೂಲಕ ಮೃತಪಟ್ಟವರ, ತಾತಾ ಮುತ್ತಾತನ ಹೆಸರಿನಲ್ಲಿರುವ ಜಮೀನಿನ ಪಹಣಿ ಪತ್ರವನ್ನು ಮಕ್ಕಳ ಹೆಸರಿಗೆ ವರ್ಗಾಯಿಸಲಾಗುತ್ತದೆ.

ರೈತರ ಮಕ್ಕಳಿಗೆ ಸರಕಾರದ ಎಲ್ಲ ಯೋಜನೆಗಳ ಲಾಭವನ್ನು ದೊರಕಿಸಿಕೊಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಮೀನಿನ ಪಹಣಿಪತ್ರವನ್ನು ಮಕ್ಕಳಿಗೆ ವಿಭಜಿಸಿ ಅವರ ಹೆಸರಿಗೆ ವರ್ಗಾಯಿಸಬೇಕೆಂದು ಕಂದಾಯ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಸೂಚನೆ ನೀಡಿದ್ದಾರೆ.

ಇದರಿಂದ ನೂರಾರು ವರ್ಷಗಳಿಂದ ಪಿತ್ತ್ರಾಜಿತ ಹೆಸರಿನಲ್ಲಿರುವ ತಮ್ಮ ಆಸ್ತಿಯನ್ನು ತಮ್ಮ ಹೆಸರಿಗೆ ಸುಲಭವಾಗಿ ವರ್ಗಾಯಿಸಲು ಸರ್ಕಾರದಿಂದ ರೈತರಿಗೆ ಸುವರ್ಣ ಅವಕಾಶ ನೀಡಲಾಗಿದೆ ಈ ಮಾಹಿತಿಯನ್ನು ತಮ್ಮ ಆಸ್ತಿಯು ಪಿತ್ರಾರ್ಜಿತ ಅಥವಾ ಮೃತಪಟ್ಟವರ ಹೆಸರಿನಲ್ಲಿ ಇದ್ದು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದ ಎಲ್ಲ ರೈತರಿಗೆ ತಪ್ಪದೆ ತಿಳಿಸಿ ಹಾಗೂ ಈ ಯೋಜನೆಯ ಲಾಭವನ್ನು ಹೆಚ್ಚು ರೈತರು ಪಡೆದುಕೊಂಡು ಸರ್ಕಾರದ ಇತರೆ ಎಲ್ಲಾ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲಿ.

Leave A Reply

Your email address will not be published.