ನಮ್ಮ ರಾಜ್ಯದಲ್ಲಿ, ರಾಜ್ಯ ಸರ್ಕಾರದ ಕಡೆಯಿಂದ ನಿರುದ್ಯೋಗಿಗಳಾಗಿರುವ ಯುವಕ ಹಾಗೂ ಯುವತಿಯರಿಗಾಗಿ ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಯಿಂದ ಕೋಳಿ ಫಾರಂ ಮಾಡಲು ಬಯಸುವ ನಿರುದ್ಯೋಗ ಯುವಕ ಹಾಗೂ ಯುವತಿಯರಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಾಮಾನ್ಯ ವರ್ಗದ ಜನರು ಹಾಗೂ ಹಿಂದುಳಿದ ವರ್ಗದ ಜನರಿಗೆ ಕೋಳಿ ಫಾರಂ ಸ್ಥಾಪಿಸಿಕೊಳ್ಳಲು ಒಟ್ಟು 1 ಲಕ್ಷದ 60 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಹಾಗೂ ಅದೇ ರೀತಿ SC ಹಾಗೂ ST ಅಭ್ಯರ್ಥಿಗಳಿಗೆ ಕೋಳಿ ಸಾಕಾಣಿಕೆ ಮಾಡುವುದರ ಸಲುವಾಗಿ ಒಂದು ಲಕ್ಷದ ಎಂಬತ್ತು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಹಣದಲ್ಲಿ ಸಾಮಾನ್ಯ ವರ್ಗದವರಿಗೆ 40 ಸಾವಿರ ರೂಪಾಯಿವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ ಹಾಗೂ SC ST ಅಭ್ಯರ್ಥಿಗಳಿಗೆ ಎಂಬತ್ತು ಸಾವಿರ ರೂಪಾಯಿವರೆಗೂ ಸಬ್ಸಿಡಿಯನ್ನು ನೀಡಲಾಗುತ್ತದೆ.
ಈ ಮೇಲಿನ ಸೌಲಭ್ಯಗಳನ್ನು ಪಡೆದುಕೊಳ್ಳಲು ನಮ್ಮ ರಾಜ್ಯ ಸರ್ಕಾರದ ಕಡೆಯಿಂದ ಐದು ದಿನಗಳ ತರಬೇತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ತರಬೇತಿಯನ್ನು ಕರ್ನಾಟಕ ಸರ್ಕಾರದ ಕುಕ್ಕುಟ ಮಹಾಮಂಡಳಿ ಯಿಂದ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ನೀವು ಈ ಉಚಿತ ತರಬೇತಿಯನ್ನು ಪಡೆದರೆ ತರಬೇತಿಪಡೆದ ಒಂದು ಸರ್ಟಿಫಿಕೇಟ್ ಹಾಗೂ ದಿನಕ್ಕೆ ಎರಡು ನೂರು ರೂಪಾಯಿಯಂತೆ ಐದು ದಿನಕ್ಕೆ 1000 ರೂಪಾಯಿಯನ್ನು ತರಬೇತಿ ಭತ್ಯೆ ನ್ನಾಗಿ ನೀಡಲಾಗುವುದು. ಈ ತರಬೇತಿಯನ್ನು ಮುಗಿಸಿದ ನಂತರ ಸರಕಾರದ ಕಡೆಯಿಂದ ಕೋಳಿ ಫಾರಂ ಸ್ಥಾಪಿಸಲು ಉಚಿತವಾಗಿ ಸಹಾಯಧನವನ್ನು ನೀಡಲಾಗುತ್ತದೆ.
ಇನ್ನು ಇಷ್ಟಕ್ಕೆ ಸಹಾಯಧನವನ್ನು ಎಲ್ಲಿ ಹಾಗೂ ಹೇಗೆ ಪಡೆಯಬೇಕು ಅಂತ ನೋಡುವುದಾದರೆ ನಿಮ್ಮ ಜಿಲ್ಲೆಯ ಅಥವಾ ನಿಮ್ಮ ತಾಲೂಕಿನ ಕರ್ನಾಟಕ ಸಹಕಾರ ಕುಕ್ಕುಟ ಮಂಡಳಿಯಿಂದ ಪಡೆಯಬಹುದು. ಒಂದು ವೇಳೆ ಆಫೀಸ್ ಎಲ್ಲಿದೆ ಎಂದು ತಿಳಿಯದೇ ಇದ್ದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಿ ಅಥವಾ ಪಶುವೈದ್ಯಕೀಯ ಆಫೀಸ್ಗೆ ನೇರವಾಗಿ ಭೇಟಿ ನೀಡಿದರೆ ಸಾಕು ಸಂಪೂರ್ಣ ಮಾಹಿತಿ ದೊರೆಯುತ್ತದೆ. ಈ ಅರ್ಜಿಯನ್ನು 18ರಿಂದ 45 ವರ್ಷದ ವರೆಗಿನ ಎಲ್ಲ ಯುವಕ ಹಾಗೂ ಯುವತಿಯರು ಹಾಗೂ ಎಲ್ಲಾ ಜಾತಿಯವರು ಸಲ್ಲಿಸಬಹುದಾಗಿದೆ. ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಅಂದರೆ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕಿನ ಪಾಸ್ಬುಕ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ , ಎರಡು ಭಾವಚಿತ್ರಗಳು ಹಾಗೂ ಇನ್ನಿತರ ಪ್ರಮುಖ ದಾಖಲೆಗಳು ಬೇಕಾಗುತ್ತದೆ. ಸ್ವಯಂ ಉದ್ಯೋಗ ಮಾಡುವವರಿಗೆ ಇದು ಸಹಾಯಕಾರಿ ಆಗಬಹುದು. ಪ್ರತಿ ವರ್ಷವೂ ಕೂಡ