ಸಾಮಾನ್ಯವಾಗಿ ನಮ್ಮ ರೈತರು ಬರಿ ಅಡಿಕೆ ಬೆಳೆಯನ್ನು ಬೆಳೆಯುವುದು ಸಹಜ ಆದ್ರೆ, ಅಡಿಕೆ ಬೆಳೆಯ ಜೊತೆಗೆ ಕಾಳುಮೆಣಸು ಬೆಳೆಯುವಲ್ಲಿ ಈ ರೈತ ಯಶಸ್ವಿಯಾಗಿದ್ದಾರೆ, ಇವರ ಸಂದರ್ಶನವನ್ನು ಮಾಡಲಾಗಿದ್ದು ಇವರ ಮಾತುಗಳು ಬೇರೆಯ ರೈತರಿಗೂ ಕೂಡ ಸ್ಪೂರ್ತಿಯಾಗಬಹುದು ಅನ್ನೋ ಕಾರಣಕ್ಕೆ ಈ ಮಾಹಿತಿಯನ್ನು ಕೊಡಲು ಬಯಸಿದ್ದೇವೆ, ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಮ್ಮ ರೈತ ಬಾಂಧವರಿಗೆ ತಿಳಿಸುವ ಪ್ರಯತ್ನ ಮಾಡಿ. ಕಾಳುಮೆಣಸು ಬೆಳೆಯುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.

ಶಿವಾನಂದಪ್ಪನವರು ತಮ್ಮ 10 ಎಕರೆ ಅಡಿಕೆ ತೋಟದಲ್ಲಿ ಕಾಳುಮೆಣಸು ಬೆಳೆದಿದ್ದಾರೆ. ಅಡಿಕೆ ಮರದ ಬುಡದಲ್ಲಿ ಒಂದು ಅಡಿ ಜಾಗ ಬಿಟ್ಟು ಮೂಕ್ಕಾಲು ಅಡಿ ಗುಂಡಿ ತೋಡಿ ಅದರಲ್ಲಿ ದನದ ಗೊಬ್ಬರ ಹಾಕಿ ನರ್ಸರಿಯಿಂದ ತಂದ ಗಿಡವನ್ನು ನೆಡಬೇಕು.ಒಂದು ವರ್ಷದ ನಂತರ ರಾಸಾಯನಿಕ ಗೊಬ್ಬರ ಮತ್ತು ಕಾಂಪ್ಲೆಕ್ಸ್ ಗೊಬ್ಬರವನ್ನು ಹಾಕಬೇಕು. ಇದನ್ನು ಮೇ ತಿಂಗಳ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮಳೆ ಕಡಿಮೆ ಇದ್ದಾಗ ನೆಡಬೇಕು. ಮಳೆ ಹೆಚ್ಚಿದ್ದಾಗ ನೆಟ್ಟರೆ ಕೊಳೆತುಹೋಗುತ್ತದೆ. ಪಣಿಯೂರು 1,2 ಈ ಜಾತಿಯ ಬಳ್ಳಿಯ ಗೊಂಚಲು ಉದ್ದವಾಗಿ, ಅಧಿಕ ಇಳುವರಿ ಬರುತ್ತದೆ. ಗಿಡ ನೆಟ್ಟು 3 ತಿಂಗಳ ನಂತರ ಅಡಿಕೆ ಮರಕ್ಕೆ ಕಟ್ಟಹಾಕಬೇಕು. ಕಾಳುಮೆಣಸು ಬೆಳೆಗೆ ಇತ್ತೀಚೆಗೆ ಸೊರಗ ರೋಗ ಬರುತ್ತಿದೆ. ಈ ರೋಗಕ್ಕೆ ಮೆಡಾಲಿಕ್ಸಿಲ್ಲ ಬುಡಕ್ಕೆ ಹಾಕಬೇಕು. ಗಿಡ ನೆಟ್ಟು 4-8 ವರ್ಷದಲ್ಲಿ ಇಳುವರಿ ಬರುತ್ತದೆ. ಕಾಳು ಬಿಟ್ಟ ನಂತರ 2 ಸಲ ಬ್ರೋಡೊ ದ್ರಾವಣ ಸಿಂಪಡಿಸಲಾಗುತ್ತದೆ. ಹೀಮೊಗ್ರೋಜಿ ಮತ್ತು ಮೈಕ್ರೋ ನ್ಯೂಟ್ರಿಷಿಯನ್ನನ್ನು ರಾಸಾಯನಿಕ ಗೊಬ್ಬರದೊಂದಿಗೆ ಮಿಕ್ಸ್ ಮಾಡಿ ವರ್ಷಕ್ಕೊಮ್ಮೆ ಹಾಕುವುದರಿಂದ ಪೋಷಕಾಂಶ ದೊರೆಯುತ್ತದೆ. 15ವರ್ಷದ ಬಳ್ಳಿಯಿಂದ ಕಾಳು ಒಣಗಿದ ನಂತರ 3-4ಕೆ.ಜಿ ಇಳುವರಿ ಬರುತ್ತದೆ.

ನಮ್ಮಲ್ಲಿರುವ ಬಳ್ಳಿಗಳನ್ನು ಕಟ್ಟಮಾಡಿ ನೆಡುವುದರಿಂದ ಹೊಸ ಗಿಡಗಳನ್ನು ಪಡೆಯಬಹುದು. ಕಾಳುಮೆಣಸು ಹಣ್ಣಾದಕೂಡಲೆ ಕಟಾವು ಮಾಡಬೇಕು ಇಲ್ಲದಿದ್ದರೆ ಹಕ್ಕಿಗಳು ತಿನ್ನುತ್ತವೆ. ಪೇಬ್ರುವರಿಯಿಂದ ಮಾರ್ಚ್ ತಿಂಗಳಲ್ಲಿ ಕಟಾವು ಮಾಡಬೇಕಾಗುತ್ತದೆ. 2-3ಸರಿ ಕಟಾವು ಮಾಡಬೇಕು. ಕಾಳು ಕೊಯ್ದ ನಂತರ 2-3 ದಿನ ಪ್ಲಾಸ್ಟಿಕ್ ನಿಂದ ಮುಚ್ಚಿಡುವುದರಿಂದ ಕಾಳು ಕಪ್ಪಾಗುತ್ತದೆ ನಂತರ ಮಷಿನ್ನ ನಿಂದ ಬೇರ್ಪಡಿಸಿ 3 ಬಿಸಿಲಿಗೆ ಒಣಗಿಸಬೇಕು. ಇದನ್ನು 10ವರ್ಷದವರಿಗೂ ಸಂಗ್ರಹಿಸಬಹುದು ಆದರೆ ತಂಡಿ ವಾತಾವರಣದಲ್ಲಿ, 1ವರ್ಷ ಇಡಬಹುದು. ಕಾಳುಮೆಣಸು 1ಕೆ.ಜಿಗೆ 280-290ರೂಪಾಯಿ ದರವಿದೆ. ಇತ್ತೀಚೆಗೆ ಹೊರದೇಶದಿಂದ ಕಳಪೆ ಮಟ್ಟದ ಕಾಳುಮೆಣಸನ್ನು ತಂದು ದೇಶಿ ಮೆಣಸಿನೊಂದಿಗೆ ಮಿಕ್ಸ್ ಮಾಡುತ್ತಿರುವುದರಿಂದ ರೇಟ್ ಕಡಿಮೆಯಾಗಿದೆ. ಈ ಬೆಳೆಗೆ ನೆರಳಿನ ತೋಟಗಳಲ್ಲಿ ಬೆಳೆಯಬಹುದು ನೀರು ಮತ್ತು ಕೀಟನಾಶಕ ಮತ್ತು ರೋಗನಾಶಕಗಳನ್ನು ಸಿಂಪಡಿಸುವುದರಿಂದ ಎಲ್ಲಾ ಪ್ರದೇಶಗಳಲ್ಲಿ ಬೆಳೆಯಬಹುದು. ಹೊಸದಾಗಿ ಕಾಳುಮೆಣಸು ಬೆಳೆಯುವವರು ಅಡಿಕೆ ಮರಗಳೊಂದಿಗೆ ಅಲ್ಲದೆ ಇತರೆ ಕಾಡು ಮರಗಳಿಗೂ ಹಬ್ಬಿಸಬಹುದು ತೋಟದಲ್ಲಿ ಬೆಳೆಸುವುದರಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *