ನಾಟಿ ಕೋಳಿ ಮತ್ತು ಫೈಟರ್ ಕೋಳಿ ಸಾಕಾಣಿಕೆ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಮುರುಳಿ ಎನ್ನುವ ಹಳ್ಳಿಮನೆ ಹೊಟೆಲ್ ಮಾಲಿಕ. ಇವರು ನಾಟಿ ಕೋಳಿ ಮತ್ತು ಪೈಟರ್ ಕೋಳಿ ಅಂತ ಬ್ರಿಡ ಪ್ರತ್ಯೇಕ ಮಾಡಿ ಅವುಗಳನ್ನು ನಾಟಿ ಕೋಳಿಗಳೊಂದಿಗೆ ಮಿಕ್ಸ್ ಮಾಡುವ ಹಾಗಿಲ್ಲ ಅವುಗಳನ್ನು ಪ್ರತ್ಯೇಕವಾಗಿ ಸಾಕುತ್ತಾರೆ. ಪ್ರಾರಂಭದಲ್ಲಿ 1 ಹುಂಜ 4 ಹ್ಯಾಟೆ ಇಂದ ತಮ್ಮ ಬಿಸ್ನೆಸ್ ಆರಂಭಿಸಿದರು. ರಾಗಿ, ಸಜ್ಜೆ ಮತ್ತು ಜೋಳ ಪುಡಿ ಮಾಡಿ ಹಾಕ್ತೀವಿ ವಾರಕ್ಕೊಂದು ಸಲ ರಾಗಿ ಅಂಬಲಿ ತೆಳು ಮತ್ತು ಮಜ್ಜಿಗೆ ಅನ್ನ ಕೋಳಿಗಳಿಗೆ ಇವರು ಪ್ರತೀ ನಿತ್ಯ ನೀಡುವ ಆಹಾರ. ಇನ್ನು ಕೋಳಿಗಳಿಗೆ ರೋಗ ಏನಾದರೂ ಬಂದಲ್ಲಿ ದನದ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಔಷೋಧಪಚಾರ ಮಾಡಲಾಗುತ್ತದೆ. ಇವರಲ್ಲಿಲ್ಲಿ ನಾಟಿ ಕೋಳಿಗಳನ್ನು ಲಭ್ಯವಿದ್ದು, 20-22 ಮೊಟ್ಟೆ ಇಡುತ್ತವೆ ಮತ್ತು 7-8 ಫೈಟರ್ ಹುಂಜಗಳಿವೆ.
ಕೋಳಿ ಮರಿಗಳನ್ನು 6-7 ತಿಂಗಳು ಸಾಕಿ ಆಮೇಲೆ 1kg 400-500ಗ್ರಾಂ ಬಂದು ನಂತರ ಮಾರಾಟ ಮಾಡಲಾಗುತ್ತದೆ. ನಾಟಿ ಕೋಳಿ 1 kg 700 ಗ್ರಾಂ ಬರುತ್ತದೆ, ಫೈಟರ್ ಕೋಳಿಗಳು 2-3kg, ಹುಂಜ ಅಂದ್ರೆ ಗಂಡು ಕೋಳಿ 3-4 kg ಬರತ್ತೆ.ಬೆಳಿಗ್ಗೆ 6ರಿಂದ ಮದ್ಯಾಹ್ನ 1 ರವರೆಗೆ ಫೈಟರ್ ಕೋಳಿಗಳನ್ನು ಹೊರಗಡೆ, 2 ರಿಂದ ಸಂಜೆ 6 ರವರೆಗೆ ನಾಟಿಕೋಳಿಗಳನ್ನು ಹೊರಗಡೆ ಬಿಡಲಾಗುತ್ತದೆ. ನಾಟಿ ಕೋಳಿಯ ಮೊಟ್ಟೆಗಳಿಗೆ 10-12 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ, ಫೈಟರ್ ಮೊಟ್ಟೆಗಳಿಗೆ 100-200 ರೂಪಾಯಿ ಗಳಿಗೆ ಮಾರಾಟ ಮಾಡಲಾಗುತ್ತದೆ.
ಹೊಸದಾಗಿ ನಾಟಿಕೋಳಿ ಬೆಳೆಸುವವರು ಮನೆಯಲ್ಲಿಯೇ 1 ಹುಂಜ 7 ಹ್ಯಾಟೆ ಬಿಟಗೊಂಡು ಅದರಿಂದ ಆರು ತಿಂಗಳಿಗೆ 50-60 ಮರಿಗಳು ಉತ್ಪತ್ತಿಯಾಗುತ್ತದೆ. ನಾಟಿ ಕೋಳಿ ಮೊಟ್ಟೆಗೆ ಮತ್ತು ಫೈಟರ್ ಕೋಳಿ ಮೊಟ್ಟೆಗೆ ವ್ಯತ್ಯಾಸ ಇದ್ದು, ನಾಟಿ ಕೋಳಿ ಮೊಟ್ಟೆ ಸಣ್ಣದಾಗಿ ಮತ್ತು ಫೈಟರ್ ಕೋಳಿ ಮೊಟ್ಟೆ ದೊಡ್ಡದಾಗಿರುತ್ತದೆ. ಇನ್ನು ಹೊಸದಾಗಿ ನಾಟಿಕೋಳಿ ಸಾಕುವವರು ಇದ್ದರೆ ಅವರಿಗೆ ಮುರುಳಿ ಅವರು ಈ ರೀತಿಯಾಗಿ ಸಲಹೆ ನೀಡುತ್ತಾರೆ. 300-400 ಮರಿಗಳನ್ನು ತಂದು ಬಂಡವಾಳ ಹಾಕಬೇಡಿ, ನಿಮ್ಮ ನೆಯಲ್ಲಿರುವ ಕೋಳಿಗಳಿಂದಲೆ ಮರಿಗಳನ್ನು ಪಡೆದು ಲಾಭ ಗಳಿಸಬಹುದು ಎಂದು ಹೇಳುತ್ತಾರೆ.