ನಾವು ಏನಾದರೂ ಒಂದು ಕೆಲಸ ಮಾಡುವ ಮುನ್ನ ಈ ಕೆಲಸ ನಮ್ಮಿಂದ ಮಾಡಲು ಸಾಧ್ಯವಾ? ಈ ಕೆಲಸ ಸುರಕ್ಷಿತವೇ ಎಂದೆಲ್ಲ ಸಾವಿರ ಸಲ ಯೋಚನೆ ಮಾಡುತ್ತೇವೆ. ಕೆಲವೊಮ್ಮೆ ಕೆಲಸ ಕಷ್ಟ ಅಂತಾ ತಿಳಿದಾಗ ಮಶೀನ್ ಗಳ ಮೂಲಕ ಮಾಡಿ ಮುಗಿಸುತ್ತೇವೆ. ಒಬ್ಬನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಕೆಲವೊಮ್ಮೆ ಅನ್ನಿಸುವುದು. ಆದರೆ ಕೆಲವು ಜನರು ಇದಕ್ಕೆ ತದ್ವಿರುದ್ಧವಾಗಿ ಇರುತ್ತಾರೆ ಒಂಟೀಸಲಗದ ಹಾಗೇ ಎಲ್ಲಾ ಕೆಲಸವನ್ನೂ ಒಬ್ಬರೇ ಮಾಡಿ ಮುಗಿಸುತ್ತಾರೆ. ಅವರು ಈ ಭೂಮಿ ಆಕಾಶವನ್ನು ಹೆಚ್ಚಾಗಿ ಸರಿಯಾಗಿ ನೋಡಿರುವುದಿಲ್ಲ. ಇವತ್ತು ಈ ಲೇಖನದಲ್ಲಿ ಇದೆ ರೀತಿಯ ಗುಣಗಳನ್ನು ಹೊಂದಿರುವ, ಜಗತ್ತಿನಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟ ಒಬ್ಬ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳೋಣ.
ಈ ವ್ಯಕ್ತಿಯ ಕಥೆ ಆರಂಭ ಆಗುವುದು 1959 ರಲ್ಲಿ. ಹೂವಾಂಗ್ ದಾಫಾ ಎನ್ನುವ 23 ವರ್ಷದ ಯುವಕನೊಬ್ಬ ಒಂದು ನಗರದಲ್ಲಿ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿ ತನ್ನ ಊರಿಗೆ ಹಿಂದಿರುಗುತ್ತಾನೆ. ಉತ್ತರ ಚೀನಾದ ಹುಷ್ಯಾಂಗ್ ಆತನ ಗ್ರಾಮ. ಶಿಕ್ಷಣ ಪಡೆದುಕೊಂಡು ಬಂದ ಯುವಕನಿಗೆ ಬಡತನ ತಾಂಡವ ಆಡುವುದು ಕಾಣುತ್ತದೆ. ಆ ಗ್ರಾಮದ ಜನ ಕಡು ಬಡವರು ಆಗಿದ್ದು ಊಟಕ್ಕೆ ಇರಲಿಲ್ಲ ಕುಡಿಯಲು ನೀರೂ ಸಹ ಸರಿಯಾಗಿ ಇರಲಿಲ್ಲ. ಇಡೀ ಗ್ರಾಮಕ್ಕೆ ಇದ್ದಿದ್ದು ಒಂದೇ ಒಂದು ಬಾವಿ. ಆ ಬಾವಿಯಲ್ಲಿ ಕೂಡಾ ವರ್ಷ ಕಳೆದ ಹಾಗೇ ನೀರು ಕಡಿಮೆ ಆಗುತ್ತಾ ಬರುತ್ತಿತ್ತು. ಈ ಕಾರಣದಿಂದ ಆ ಗ್ರಾಮದಲ್ಲಿ ವಾಸ ಮಾಡುವುದು ಅಷ್ಟು ಸುಲಭವೇನೂ ಇರಲಿಲ್ಲ. ವಿದ್ಯುತ್ ಎನ್ನುವುದು ಇದೆ ಅನ್ನುವುದು ಕೂಡಾ ಇಲ್ಲಿನ ಜನರಿಗೆ ತಿಳಿದಿಲ್ಲ. ಸಂಪೂರ್ಣವಾಗಿ ಆ ಗ್ರಾಮ ಹೊರಗಿನ ಪ್ರಪಂಚದ ನಂಟನ್ನೆ ಕಳೆದುಕೊಂಡಿತ್ತು. ಇದನ್ನೆಲ್ಲ ನೋಡುತ್ತಿದ್ದ ಆ ಯುವಕನಿಗೆ ತನ್ನ ಜನರಿಗಾಗಿ ಏನಾದರೂ ಮಾಡಲೇಬೇಕು ಎಂದು ಅನಿಸುತ್ತದೆ. ತನ್ನ ತಲೆಯಲ್ಲಿದ್ದ ಐಡಿಯಾಗಳನ್ನು ಊರಿನ ಜನರಿಗೆಲ್ಲ ತಿಳಿಸಿ, ನಾವೂ ಕೂಡಾ ಆಧುನೀಕರಣ ಆಗಬೇಕು ಎಂದು ಹೇಳುತ್ತಾನೆ. ಆದರೆ ಇದು ಸಾಧ್ಯವೋ ಅಸಾಧ್ಯವೇ ಎನ್ನುವುದು ಸ್ವತಃ ಹೂವಾಂಗ್ ಗೆ ಕೂಡಾ ತಿಳಿದಿರಲಿಲ್ಲ. ಆದರೆ ಏನಾದರೂ ಬದಲಾವಣೆ ಮಾಡಲೇಬೇಕು ಎನ್ನುವ ಅವನ ನಿರ್ಧಾರ ಅಚಲವಾಗಿತ್ತು.
ತನ್ನ ಊರಿಗೆ ರಸ್ತೆ ಮಾಡಿಸಬೇಕು, ವಿದ್ಯುತ್ ಕನೆಕ್ಷನ್ ಕೊಡಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹೀಗೆ ಹತ್ತು ಹಲವಾರು ಯೋಚನೆಗಳು ಹೂವಾಂಗ್ ನ ತಲೆಯಲ್ಲಿದ್ದವು. ಇದನ್ನೆಲ್ಲ ಕೇಳಿದ ಊರಿನ ಜನ ವಾಂಗ್ ನನ್ನು ತಮ್ಮ ಮುಖಂಡನಾಗಿ ಮಾಡುತ್ತಾರೆ. ಮರುದಿನವೇ ತನ್ನ ಮನೆಯಿಂದ ಹೊರಟಿದ್ದ ಹೂವಾಂಗ್ ನೀರಿನ ಮೂಲ ಹುಡುಕುತ್ತಿದ್ದ. ಹೀಗೆ ಹುಡುಕಾಟದಲ್ಲಿ ಇದ್ದಾಗ ಒಂದು ಕೆರೆ ಸಿಗುತ್ತದೆ. ಕೆರೆ ಏನೋ ಸಿಕ್ಕಿತ್ತು ಆದರೆ ಅದರಿಂದ ತನ್ನ ಗ್ರಾಮಕ್ಕೆ ನೀರನ್ನು ತೆಗೆದುಕೊಂಡು ಹೋಗುವುದು ಅಸಾಧ್ಯವಾಗಿತ್ತು. ಮಶೀನ್ ಗಳ ಸಹಾಯದಿಂದ ನೀರು ಹರಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಸರ್ಕಾರಕ್ಕೆ ಮನವಿ ಮಾಡಿದರೂ ಅದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಹೂವಾಂಗ್ ಗೆ ಇಲ್ಲಿ ಯಾರೂ ತಮ್ಮ ಸಹಾಯಕ್ಕೆ ಬರುವುದಿಲ್ಲ ಎನ್ನುವುದು ತಿಳಿದಿತ್ತು. ನಂತರ ಹಿಂದೆ ಮುಂದೆ ನೋಡದೆ ತಾನೊಬ್ಬನೇ ಪರ್ವತವನ್ನು ಕೊರೆಯಲು ಆರಂಭಿಸಿದ್ದ. ಪರ್ವತದ ಮ್ಯಾಪ್ ತಯಾರಿಸಿ ಎಲ್ಲಿಂದ ಹೇಗೆ ಯಾವ ರೀತಿ ಬರಬೇಕು ಅನ್ನುವುದನ್ನು ನಿರ್ಧರಿಸಿ ಯಾವುದೇ ಮಶೀನ್ ಗಳ ಸಹಾಯ ಇಲ್ಲದೆ ತಾನೇ ಪರ್ವತ ಕೊರೆಯಲು ಆರಂಭಿಸಿದ್ದ.
ಸರಿ ಸುಮಾರು ನೂರು ಮೀಟರ್ ಅಷ್ಟು ಉದ್ದದ ಕೆನಾಲ್ ಅನ್ನು ಪರ್ವದ ಮಧ್ಯೆ ಹೂವಾಂಗ್ ಒಬ್ಬನೇ ಕೊರೆದು ಮುಗಿಸಿದ್ದ. ಅದೂ ಎತ್ತರದ ಪರ್ವತ ಆಗಿರುವ ಕಾರಣ ಕೆಲಸ ಸ್ವಲ್ಪ ಕಠಿಣವಾಗುತ್ತದೆ. ಸ್ವಲ್ಪ ಪ್ರಜ್ಞೆ ತಪ್ಪಿದರೂ ಸಹ ಅವನ ಕಥೆ ಮುಗಿದ ಹಾಗೇ ಆ ರೀತಿ ಇತ್ತು ಅಲ್ಲಿನ ಜಾಗ. ಇನ್ನೊಂದು ಮುಖ್ಯವಾದ ವಿಷಯ ಎಂದರೆ, ಹೂವಾಂಗ್ ಒಬ್ಬನೇ ನೂರು ಮೀಟರ್ ಕೆನಾಲ್ ಅನ್ನು ಬೆಟ್ಟದ ಮೇಲೆ ಕೊರೆಯಲು ತೆಗೆದುಕೊಂಡ ಕಾಲ ಐದು ವರ್ಷ. ಬೇರೆ ಯಾವುದೇ ಗ್ರಾಮಸ್ಥರೂ ಸಹ ಹೂವಾಂಗ್ ಸಹಾಯಕ್ಕೆ ಅಲ್ಲಿಯವರೆಗೂ ಬಂದಿರಲಿಲ್ಲ. ನಂತರ ಹೂವಾಂಗ್ ಕೆಲಸ ನೋಡಿ ಇವನೇನೋ ಮಾಡುತ್ತಾ ಇರುವುದು ನಿಜಾ ಎಂದು ತಿಳಿದು ಊರಿನ ಜನರೆಲ್ಲ ಒಬ್ಬೊಬ್ಬರಾಗಿ ಬಂದು ಹೂವಾಂಗ್ ಜೊತೆ ಕೈ ಜೋಡಿಸಿದರು. ದಿನದಿಂದ ದಿನಕ್ಕೆ ಕೆಲಸಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿತ್ತು. ಹತ್ತು ವರ್ಷದ ಬಳಿಕ ೨೦೦ ಮೀಟರ್ ನಾಲೆ ತಯಾರಾಗಿತ್ತು. ಆದರೆ ಇನ್ನೊಂದು ಬೆಟ್ಟವನ್ನು ಮಶೀನ್ ಗಳ ಸಹಾಯ ಇಲ್ಲದೆ ಕೊರೆಯಲು ಸಾಧ್ಯ ಇಲ್ಲ ಎನ್ನುವುದು ಅಲ್ಲಿನ ಜನರಿಗೆ ಅರಿವಾಗುತ್ತದೆ ಒಂದುವೇಳೆ ಈ ಕೆಲಸ ಆಗದೇ ಇದ್ದಾರೆ ಹತ್ತು ವರ್ಷಗಳ ಪರಿಶ್ರಮ ವ್ಯರ್ಥ. ಹುವಾಂಗ್ ಇಲ್ಲಿಗೆ ಸುಮ್ಮನೆ ಬಿಡದೆ ಮತ್ತೆ ನಗರಕ್ಕೆ ಬಂದು ಪರ್ವತ ಪ್ರದೇಶಗಳಲ್ಲಿ ನೀರಿನ ವ್ಯವಸ್ಥೆ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಅಧ್ಯಯನ ಮಾಡುತ್ತಾನೆ. ಅಲ್ಲಿಂದ ಹೇಗೆ ಈ ಕೆಲಸ ಮಾಡುವುದು ಎನ್ನುವುದನ್ನು ಅರಿತುಕೊಂಡು ಸರ್ಕಾರಕ್ಕೆ ಕೂಡಾ ಮತ್ತೊಮ್ಮೆ ಮನವಿ ಮಾಡಿ, ಮತ್ತೆ ಕೆಲಸ ಆರಂಭಿಸಿ ಎರಡನೇ ಕೆನಾಲ್ ಕೂಡಾ ಪೂರ್ತಿ ಆಗುತ್ತದೆ. ಈ ಕೆಲಸ ಆರಂಭಿಸುವಾಗ ಹೂವಾಂಗ್ ಯುವಕನಾಗಿದ್ದ ಹಾಗೂ ಎರಡನೇ ಕೆನಾಳುಗಿಯುವ ವೇಳೆಗೆ ಮುದುಕನಾಗಿದ್ದ. ೫೮ ವರ್ಷ ವಯಸ್ಸು ಆಗಿತ್ತು ಹಾಗೂ ತನ್ನ ಇಡೀ ಜೀವನವನ್ನು ಈ ಕೆನಾಲ್ ನಿರ್ಮಾಣಕ್ಕೆ ಎಂದೇ ಧಾರೆ ಎರೆದಿದ್ದ.
ಸರ್ಕಾರದಿಂದ ಬಂದ ಹಣದಿಂದ ಕೆಲವು ಮಶೀನ್ ತಂದುಕೊಂಡು ಕೆಲಸ ಆರಂಭಿಸಿದರು. ಮಶೀನ್ ಗಳು ಇರುವ ಕಾರಣಕ್ಕೆ ಕೆಲಸ ಮತ್ತಷ್ಟು ವೇಗ ಪಡೆದುಕೊಂಡು ಮೂರು ವರ್ಷದಲ್ಲಿ ೭೨೦ ಮೀಟರ್ ಉದ್ದದ ಕೆನಾಲ್ ನಿರ್ಮಾಣ ಆಯಿತು. ಈ ಕಾರ್ಯ ನಿರ್ವಹಿಸಲು ಎಷ್ಟು ಕಷ್ಟ ಪಟ್ಟಿದ್ದರೋ ಅದರ ಪ್ರತಿಫಲ ಕೂಡಾ ಚೆನ್ನಾಗಿ ಬಂದಿತ್ತು. ೨೯೯೫ ರಲ್ಲಿ ಮೊದಲ ಬಾರಿಗೆ ಈ ಕೆನಾಲ್ ನಲ್ಲಿ ನೀರು ಹರಿದು ಬಂದಿತ್ತು. ಈ ಸಂದರ್ಭದಲ್ಲಿ ಸರ್ಕಾರ ಕೂಡಾ ಗ್ರಾಮಸ್ಥರ ಸಹಾಯಕ್ಕೆ ಬಂದು, ರಸ್ತೆ ಮಾಡಿ ವಿದ್ಯುತ್ ಸಂಪರ್ಕ ಸಹ ಕಲ್ಪಿಸಿತು. ಇದೂ ಕೂಡಾ ಹುವಾಂಗ್ ನ ಪರಿಶ್ರಮವೇ. ಈ ಎಲ್ಲಾ ಕೆಲಸ ಮುಗಿದ ನಂತರ ಗ್ರಾಮದ ಚಿತ್ರಣವೇ ಪೂರ್ತಿ ಬದಲಾಯಿತು. ಕೃಷಿ ಆರಂಭವಾಗಿ ಭತ್ತದ ಗದ್ದೆಗಳು ಹಸಿರಿನಿಂದ ತುಂಬಿದ್ದವು. ಮುಖ್ಯವಾದ ವಿಷಯ ಎಂದರೆ, ಈಗ ಈ ಗ್ರಾಮದಿಂದ ೫ ಲಕ್ಷ ಕಿಲೋ ಭತ್ತ ರಫ್ತು ಆಗುತ್ತಿದೆ. ಒಬ್ಬ ವ್ಯಕ್ತಿಯಿಂದ ಎಷ್ಟೋ ಜನರ ಜೀವನ ಬದಲಾಯಿತು. ವಿಧ್ಯಾರ್ಥಿಗಳಿಗೆ ಶಿಕ್ಷಣ ದೊರೆಯಿತು. ಇಲ್ಲಿ ಪ್ರತೀ ವರ್ಷ ೩೦ ವಿಧ್ಯಾರ್ಥಿಗಳು ಪದವೀದರರಾಗುತ್ತಾರೆ. ಇದರಿಂದ ನಮಗೆಲ್ಲ ಅರ್ಥ ಆಗುವುದು ಏನಂದರೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಆದರೆ ಮಾಡುವ ಧೃಢ ಸಂಕಲ್ಪ ಇರಬೇಕು ಅಷ್ಟೇ.