ಕಷ್ಟ ಅಂದ್ರೆ ಎಲ್ಲರಿಗಿಂತ ಮುಂಚೆ ಬರೋದು ಅಂದ್ರೆ ಅದುವೇ ಡಾ. ಸುಧಾಮೂರ್ತಿ ಅವರು, ರಾಜ್ಯದಲ್ಲಿ ಬಹಳಷ್ಟು ಜನಕ್ಕೆ ಇವರು ಅಶ್ರಯೇ ಆಗಿದ್ದಾರೆ ರಾಜ್ಯದಲ್ಲಿ ಈ ಹಿಂದೆ ಪ್ರವಾಹಕ್ಕೆ ಹಿಡಾಗಿದ್ದವರಿಗೆ ಕೋಟಿ ಗಟ್ಟಲೆ ಹಣವನ್ನು ಸಹಾಯ ಮಾಡಿದ್ದಾರೆ ಹಾಗೂ ಹತ್ತಾರು ಕೆಲಸಕ್ಕೆ ಹಣವನ್ನು ದೇಣಿಗೆ ನೀಡಿದ್ದಾರೆ ಇವರ ಬಗ್ಗೆ ಹೀಗಾಗಲೇ ರಾಜ್ಯದ ಜನತೆಗೆ ಗೊತ್ತಿರುವ ವಿಚಾರ.

ಸುಧಾಮೂರ್ತಿಯವರು ಸಹಾಯ ಮಾಡುತ್ತಿರುವುದು ಇದೇನು ಮೊದಲೇ ಅಲ್ಲ ಸಾಕಷ್ಟು ಬಾರಿ ಇವರು ಸಹಾಯ ಮಾಡಿದ್ದಾರೆ ಇದೀಗ ಜಮಖಂಡಿಯ ಪ್ರತಿಭಾನ್ವಿತ ರೈತನ ಮಗನ ಓದಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿಯವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ರೈತನ ಮಗ ಸಂಜು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 617 ಅಂಕ ಪಡೆದುಕೊಂಡಿದ್ದಾನೆ. ಈ ಯುವಕನ ಮುಂದಿನ ಮೂರೂ ವರ್ಷದ ವ್ಯಾಸಂಗದ ಖರ್ಚನ್ನು ವಹಿಸಿಕೊಂಡಿದ್ದಾರೆ.

ಅಷ್ಟೇ ಅಲ್ದೆ ಈಗ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಬಡ ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದಾರೆ. ಅದೇನೇ ಇರಲಿ ಇವರ ಸಾಮಾಜಿಕ ಕಾರ್ಯ ಮತ್ತಷ್ಟು ಹಾಗೆ ಮುಂದುವರೆಯಲಿ ಆ ದೇವರು ಇವರಿಗೆ ಉತ್ತಮ ಅರೋಗ್ಯ ಆಯಸ್ಸು ನೀಡಲಿ.

By

Leave a Reply

Your email address will not be published. Required fields are marked *