ಮೊಟ್ಟೆ ಆರೋಗ್ಯಕಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಕೆಲವೊಮ್ಮೆ ಮೊಟ್ಟೆಯನ್ನ ತಿಂದರೆ ಕೊಲೆಸ್ಟ್ರಾಲ್ ಜಾಸ್ತಿ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತವೆ. ಇವೆಲ್ಲ ಸುಳ್ಳು ಎನ್ನಬಹುದು. ಪ್ರತೀ ದಿನ 3 ಮೊಟ್ಟೆಯಂತೆ ಒಂದು ವಾರ ಸೇವಿಸಿದರೆ ನಮ್ಮ ದೇಹದಲ್ಲಿ ಉಂಟಾಗುವ ಮಾರ್ಪಾಡುಗಳ ಬಗ್ಗೆ ತಿಳಿದುಕೊಳ್ಳೋಣ.

ಮೊಟ್ಟೆಯಲ್ಲಿ ನಮ್ಮ ದೇಹಕ್ಕೆ ಅವಶ್ಯ ಇರುವ ವಿಟಮಿನ್ ಈ, ಬಿ6, ಬಿ12, ಮೆಗ್ನಿಶಿಯಂ, ಪಾಸ್ಪರಸ್ ಮತ್ತು ಇತರ ನ್ಯೂಟ್ರಿಷಿಯನ್ಸ್ ಸಮೃದ್ಧವಾಗಿ ಇರುತ್ತವೆ. ಮೊಟ್ಟೆಯಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ಇದು ನಮ್ಮ ಶರೀರ ಮತ್ತು ಮೆದುಳಿಗೆ ತುಂಬಾ ಅವಶ್ಯಕ ಆಗಿರುತ್ತದೆ. ಮೊಟ್ಟೆಯಲ್ಲಿ ಪೋಲೆನ್ ಅಂಶ ಸಮೃದ್ಧಿಯಾಗಿ ಇರುವುದರಿಂದ ಇದು ನಮ್ಮ ಮೆದುಳಿನ ಬೆಳವಣಿಗೆಗೆ ಸಹಾಯಕಾರಿ ಆಗಿರುತ್ತದೆ. ಜ್ಞಾಪಕ ಶಕ್ತಿಯೂ ಇರುತ್ತದೇ. ಇದರಲ್ಲಿ ಲೂಟಿನ್ ಹಾಗೂ ಜಿಯೋಸ್ಕಿಟಿನ್ ವಿಟಾಮಿನ್ಸ್ ಸಮೃದ್ಧಿಯಾಗಿ ಇರುವುದರಿಂದ ದೃಷ್ಟಿ ದೋಷ ನಿವಾರಣೆ ಆಗುತ್ತದೆ. ಮುಂದೆ ವಯಸ್ಸಾದ ನಂತರ ಕಾಣಿಸಿಕೊಳ್ಳುತ್ತವ ಕಣ್ಣಿನ ಸಮಸ್ಯೆಯನ್ನು ಸಹ ತಡೆಹಿಡಿಯುತ್ತದೆ.

ಪ್ರತೀ ದಿನ 3 ಮೊಟ್ಟೆಗಳನ್ನು ತಿನ್ನುವುದರಿಂದ ಯಾವ ರೀತಿಯ ಸಮಸ್ಯೆಗಳೂ ಸಹ ಬರುವುದಿಲ್ಲ. ಮೊಟ್ಟೆಯಲ್ಲಿ ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ ಇರುವುದರಿಂದ ಎಲಬುಗಳಿಗೆ ಶಕ್ತಿ ದೊರೆಯುತ್ತದೆ. ಬೆಳಗಿನ ಜಾವ ಮೊಟ್ಟೆ ತಿನ್ನುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಇದರಿ ದಾಗಿ ಹೆಚ್ಚು ಆಹಾರ ತಿನ್ನುವ ಅವಕಾಶ ಇರುವುದಿಲ್ಲ. ಈ ಮೂಲಕ ತೂಕ ಇಳಿಕೆಗೆ ಸಹ ಸಹಾಯಕಾರಿ ಆಗಿದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ನೀವೇ ಸ್ವತಃ ತಿಳಿದುಕೊಳ್ಳಬಹುದು.

ಈ ವಿಡಿಯೋಗಳನ್ನು ನೋಡಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಮೊಟ್ಟೆಯ ಆರೋಗ್ಯಕಾರಿ ಪ್ರಯೋಜನವನ್ನು ತಿಳಿಯಲಿ ಧನ್ಯವಾದಗಳು

Leave a Reply

Your email address will not be published. Required fields are marked *