ಮನೆಯ ಸುತ್ತಲಿನ ವಾತಾವರಣ ಚೆನ್ನಾಗಿದ್ದರೆ ಮನೆ ಮಂದಿಗೆಲ್ಲ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ. ಹಾಗೂ ಸೊಳ್ಳೆ ವಿಷಕಾರಿ ಜಂತುಗಳ ಸಮಸ್ಯೆ ಇರೋದಿಲ್ಲ. ಮನೆಯ ಮುಂದೆ ಬೇಡವಾದ ಗಿಡಗಳನ್ನು ಬೆಳೆಸುವ ಬದಲು ಉಪಯೋಗಕಾರಿಯಾಗಿರುವಂತ ಇಂತಹ ಗಿಡಗಳನ್ನು ಬೆಳೆಸುವುದು ಉತ್ತಮ. ಅರೋಗ್ಯ ವೃದ್ಧಿಗೆ ನಮ್ಮ ಸುತ್ತಮುತ್ತಲಿನ ಗಿಡ ಮರಗಳು ಕೂಡ ಹೆಚ್ಚು ಪ್ರಾಮುಖ್ಯತೆವಹಿಸುತ್ತವೆ.
ಅಷ್ಟಕ್ಕೂ ಯಾವ ರೀತಿಯ ಗಿಡ ಮರಗಳನ್ನು ಬೆಳೆಸಬೇಕು ಸೊಳ್ಳೆ, ಕ್ರಿಮಿ ಕೀಟ, ವಿಷಕಾರಿ ಜಂತುಗಳ ನಿವಾರಣೆಗೆ ಅನ್ನೋದನ್ನ ಈ ಮೂಲಕ ತಿಳಿಯೋಣ. ಮೊದಲನೆಯದಾಗಿ ಮನೆಯ ಮುಂದೆ ತುಳಸಿ ಗಿಡ ಇದ್ರೆ ಒಳ್ಳೆಯದು ಇದು ನಾನಾ ರೀತಿಯ ದೈಹಿಕ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಹಾಗೂ ಮನೆಯಲ್ಲಿನ ಅರೋಗ್ಯ ವೃದ್ಧಿಗೆ ಈ ತುಳಸಿ ಗಿಡ ಪೂರಕವಾಗಿದೆ. ಇನ್ನು ತುಳಸಿ ಗಿಡ ಇದ್ರೆ ಸೊಳ್ಳೆಗಳ ಕಾಟ ಇರೋದಿಲ್ಲ ಸೊಳ್ಳೆಗಳನ್ನು ನಿಯಂತ್ರಿಸುವ ಗುಣ ಈ ತುಳಸಿ ಗಿಡಕ್ಕಿದೆ.
ಲವಂಗದ ಗಿಡವನ್ನು ಮನೆಯ ಮುಂದೆ ಬೆಳೆಸಿದ್ರೆ ಇದರ ಎಲೆಗಳ ವಾಸನೆಗೆ ಸೊಳ್ಳೆಗಳು ಸುಳಿಯೋದಿಲ್ಲ. ಈ ಗಿಡದ ಹೂವುಗಳು ಸಹ ಸೊಳ್ಳೆಗಳನ್ನು ಓಡಿಸುತ್ತವೆ. ಇನ್ನು ಲವಂಗ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಚರ್ಮಕ್ಕೆ ಹಚ್ಚಿಕೊಂಡರೆ ಆ ವಾಸನೆಗೂ ಸೊಳ್ಳೆಗಳು ಹತ್ತಿರ ಸುಳಿಯಲ್ಲ.
ಚಂಡುಹೂವು ಇದರ ಗಿಡವನ್ನು ಕೂಡ ಮನೆಯ ಮುಂದೆ ಅಥವಾ ಮನೆಯ ಕೈ ತೋಟದಲ್ಲಿ ಬೆಳೆಸುವುದು ಉತ್ತಮ ಯಾಕೆಂದರೆ ಈ ಗಿಡದಲ್ಲಿ ಸೊಳ್ಳೆಗಳ ನಿಯಂತ್ರಿಸುವ ಜೊತೆಗೆ ಯಾವುದೇ ವಿಷಕಾರಿ ಜಂತುಗಳು ಹತ್ತಿರಕ್ಕೆ ಸುಳಿಯದಂತೆ ಗುಣಗಳನ್ನು ಹೊಂದಿದೆ. ಚೆಂಡು ಹೂಗಳನ್ನು ಅರೆದು ಚರ್ಮಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಚ್ಚದಂತೆ ಇರುತ್ತವೆ.