ವಾಟ್ಸಪಲ್ಲಿ ಕೆಲವೊಮ್ಮೆ ನಮಗೆ ಇಂಗ್ಲಿಷ್ ನಲ್ಲಿ ಮೆಸೇಜ್ ಗಳು ಬರುತ್ತವೆ. ಆದರೆ ಕೆಲವೊಂದು ಬಾರಿ ನಮಗೆ ಇಂಗ್ಲೀಷ್ನಲ್ಲಿ ಕಳಿಸಿದ ಮೆಸೇಜ್ ಗಳು ಅರ್ಥವಾಗುವುದಿಲ್ಲ ಹಾಗಾಗಿ ಒಂದು ಟೆಕ್ನಿಕ್ ಅನ್ನು ಬಳಸುವುದರಿಂದ ಇಂಗ್ಲಿಷ್ನಲ್ಲಿ ಬಂದಂತಹ ಮೆಸೇಜನ್ನು ನಾವು ಕನ್ನಡದಲ್ಲಿ ಓದಿ ಅರ್ಥ ಮಾಡಿಕೊಳ್ಳಬಹುದು. ಅದು ಹೇಗೆ ಯಾವ ಟೆಕ್ನಿಕ್ ಅನ್ನು ಬಳಸಿ ಓದುವುದು ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಒಂದು ಅಪ್ಲಿಕೇಶನನ್ನು ಬಳಸಿಕೊಂಡು ವಾಟ್ಸಪ್ ಮಾತ್ರವಲ್ಲದೆ ಬೇರೆ ಯಾವುದೇ ಅಪ್ಲಿಕೇಶನ್ ಗಳಲ್ಲಿ ಇರುವಂತಹ ಇಂಗ್ಲಿಷ್ ಶಬ್ದಗಳನ್ನು ಓದಿ ವಾಕ್ಯಗಳನ್ನು ಕನ್ನಡದಲ್ಲಿ ಓದಿ ಅರ್ಥಮಾಡಿಕೊಳ್ಳಬಹುದು. ಹಾಗಾಗಿ ಮೊದಲು ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರಿಗೆ ಹೋಗಿ ಅಲ್ಲಿ ಹೈ ಟ್ರಾನ್ಸಲೇಟ (Hi translate) ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಕೇಳುವ ಕೆಲವೊಂದಿಷ್ಟು ಪರ್ಮಿಷನ್ ಗಳಿಗೆ ಅಲೋವ್ ಕೊಟ್ಟು, ನಂತರ ಕಾಣುವ ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿ ನಂತರ ಮತ್ತೊಂದಷ್ಟು ಪರ್ಮಿಷನ್ ಗಳಿಗೆ ಅಲೋವ್ ಕೊಟ್ಟು ನಂತರ ಮತ್ತೆ ಗೆಟ್ ಸ್ಟಾರ್ಟೆಡ್ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತೆ.
ಅಲ್ಲಿ ಯುವರ್ ಲ್ಯಾಂಗ್ವೇಜ್ ಹಾಗೂ ಯುವರ್ ಫ್ರೆಂಡ್ಸ್ ಲ್ಯಾಂಗ್ವೇಜ್ ಎಂಬ ಆಯ್ಕೆಗಳು ಇರುತ್ತೆ. ಅಲ್ಲಿ ಯುವರ್ ಲ್ಯಾಂಗ್ವೇಜ್ ಅನ್ನುವ ಆಯ್ಕೆಯ ಮೇಲೆ ನಿಮಗೆ ಯಾವ ಭಾಷೆಯಲ್ಲಿ ಮೆಸೇಜ್ ಗಳನ್ನು ಓದಬೇಕಾಗುತ್ತದೆ ಆ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹಾಗೆ ಯುವರ್ ಫ್ರೆಂಡ್ಸ್ ಲ್ಯಾಂಗ್ವೇಜ್ ಎನ್ನುವ ಆಯ್ಕೆಯಲ್ಲಿ ಇಂಗ್ಲಿಷ್ ಭಾಷೆಯನ್ನು ಆಯ್ದುಕೊಳ್ಳಬೇಕು. ನಂತರ ಮೇಲೆ ಟ್ರಾನ್ಸ್ಲೇಟರ್ ಆನ್ ಅಥವಾ ಆಫ್ ಎಂದು ಇರತ್ತೆ. ಆಫ್ ಆಗಿದ್ದರೆ ಅದನ್ನು ಆನ್ ಮಾಡಿಕೊಳ್ಳಬೇಕು.
ನಂತರ ನಿಮಗೆ ಯಾವುದೇ ಬೇರೆ ಭಾಷೆಯ ಮೆಸೇಜ್ಗಳು ಅಥವಾ ಆರ್ಟಿಕಲ್ ಗಳನ್ನು ಕನ್ನಡದಲ್ಲಿ ಓದಬೇಕು ಅಂತ ಇದ್ದಾಗ ವಾಟ್ಸಪ್ ಅಥವಾ ಬೇರೆ ಯಾವುದೇ ಅಪ್ಲಿಕೇಶನ್ಗಳಿಗೆ ಹೋದಾಗ ಅಲ್ಲಿ ಒಂದು ಬಟನ್ ಕಾಣಿಸುತ್ತದೆ. ಈ ಬಟನನ್ನು ನಿಮಗೆ ಯಾವ ಮೆಸೇಜ್ ಅಥವಾ ಆರ್ಟಿಕಲ್ ಅನ್ನು ಓದಬೇಕು ಆದರೆ ಮೇಲೆ ಎಳೆದು ತಂದರೆ ಅದು ನೀವು ಆಯ್ಕೆ ಮಾಡಿಕೊಂಡಂತಹ ಭಾಷೆಯಲ್ಲಿ ತೋರಿಸುತ್ತದೆ. ಈ ಅಪ್ಲಿಕೇಶನ್ನ ಮೂಲಕ ನಮಗೆ ಅರ್ಥ ಆಗದೇ ಇರುವಂತಹ ಭಾಷೆಯನ್ನು ಸಹ ನಮ್ಮ ಭಾಷೆಯಲ್ಲಿ ಓದಿ ಅರ್ಥೈಸಿಕೊಳ್ಳಬಹುದು. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಷೇರ್ ಮಾಡು ಮೂಲಕ ನಿಮ್ಮ ಸ್ನೇಹಿತರಿಗೂ ತಿಳಿಸಿ ಶುಭವಾಗಲಿ