ಪ್ರಪಂಚದಲ್ಲಿ ಸಿಗರೇಟ್ ಸೇದುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಬೆಂಗಳೂರು ನಗರ ಒಂದರಲ್ಲಿ ಮಾತ್ರವೇ ದಿನಕ್ಕೆ 31 ಲಕ್ಷ ಸಿಗರೇಟ್ ಸೇದುತ್ತಾರೆ. ಸೇದಿದ ಸಿಗರೇಟ್ ಅನ್ನು ಎಸೆಯುತ್ತಾರೆ ಇಲ್ಲಾ ಕಾಲ ಕೆಳಗೆ ಹಾಕಿ ತುಳಿಯುತ್ತಾರೆ. ಆದರೆ ಇಲ್ಲಿ ಮಾತ್ರ ಎಲ್ಲರೂ ಸೇದಿ ಸೇದಿ ಹೆಚ್ಚುಳಿದು ಒಗೆದ ಸಿಗರೇಟ್ ಗಳಿಂದ ಕೋಟಿ ಸಂಪಾದನೆ ಮಾಡುತ್ತಾ ಇದ್ದಾರೆ. ಅವರು ಯಾರು? ಹೇಗೆ ಈ ಹಚ್ಚುಳಿದ ಸಿಗರೇಟ್ ಇಂದ ಹಣ ಗಳಿಸುತ್ತಾ ಇದ್ದಾರೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಗುರ್ಕಾಗೆ ಸೇರಿದ ವಿಶಾಲ್ ಮತ್ತು ನಮನ್ ಗುಪ್ತಾ ಎಂಬುವವರು ಒಮ್ಮೆ ಫ್ರೆಂಡ್ಸ್ ಜೊತೆ ಪಾರ್ಟಿಗೆ ಎಂದು ಹೋಗಿದ್ದರು. ಆಗ ಅಲ್ಲಿ ಬಿದ್ದಿದ್ದ ಸಾವಿರಾರು ಸಿಗರೇಟ್ ಫಿಲ್ಟರ್ ಗಳನ್ನ ನೋಡಿ ಗಾಬರಿ ಆಗಿದ್ದರು. ಇಲ್ಲೇ ಇಷ್ಟು ಸಿಗರೇಟ್ ಬಿದ್ದುಕೊಂಡಿದ್ದರೆ ಇನ್ನು ಇಡೀ ಪ್ರಪಂಚದಲ್ಲಿ ಎಷ್ಟು ಇರಬೇಡ ಎಂದುಕೊಂಡ ವಿಶಾಲ್ ಮತ್ತು ನಮನ್ ಗೆ ಒಂದು ಆಲೋಚನೆ ಬರುತ್ತದೆ. ಆದೇನೆಂದರೆ ಸೇದಿ ಬಿಸಾಕಿದ ಸಿಗರೇಟ್ ಗಳನ್ನು ರಿಸೈಕ್ಲಿಂಗ್ ಮಾಡಿದರೆ ಹೇಗೆ ಎಂದು ಆಲೋಚಿಸುತ್ತಾರೆ. ಈ ಒಂದು ಯೋಜನೆ ತಲೆಗೆ ಬಂದಿದ್ದೆ ತಡ ಇಬ್ಬರೂ ಸ್ನೇಹಿತರೂ ಸೇರಿ ‘ಕೋಡ್’ ಅನ್ನೋ ಒಂದು ಕಂಪನಿಯನ್ನು ಆರಂಭಿಸುತ್ತಾರೆ. ಒಮ್ಮೆ ಸೇದಿ ಬಿಸಾಕಿದ ಸಿಗರೇಟ್ ಗಳನ್ನು ರಿಸೈಕ್ಲಿಂಗ್ ಮಾಡುವುದೇ ಇವರ ಉದ್ದೇಶ. ಆದರೆ ಅಷ್ಟು ದೊಡ್ಡ ಪ್ರಮಾಣದಲ್ಲಿ ಸಿಗರೇಟ್ ಗಳನ್ನು ಹೇಗೆ ಶೇಖರಣೆ ಮಾಡುವುದು ಎನ್ನುವುದು ಇವರ ಮುಂದೆ ಇರುವ ದೊಡ್ಡ ಸಮಸ್ಯೆ ಆಗಿತ್ತು.

ಆಗ ಸಿಗರೇಟ್ ಫಿಲ್ಟರ್ ಗಳನ್ನು ಶೇಖರಣೆ ಮಾಡಲು ಒಂದು ಉಪಾಯ ಮಾಡಿ, ಯಾರು ಸಿಗರೇಟ್ ಫಿಲ್ಟರ್ ಗಳನ್ನು ಶೇಖರಣೆ ಮಾಡಿ ಕೊಡುತ್ತಾರೋ ಅವರಿಗೆ ಒಂದು ಕೆಜಿಗೆ ಇಂತಿಷ್ಟು ಎಂದು ಹಣ ಕೊಡುತ್ತೇವೆ ಎಂದು ಹೇಳಿದರು. ಯಾರಿಗಾದರೂ ಇವುಗಳನ್ನು ಸಂಗ್ರಹಿಸಿ ಕೊಡಲು ಆಸಕ್ತಿ ಇದ್ದರೆ ಅವರ ಮನೆಯ ಬಳಿ, ಶಾಪ್ ಗಳ ಬಳಿ ಒಂದೊಂದು ಬಾಕ್ಸ್ ಇಡಲು ಆರಂಭಿಸಿದರು. ಸೇದಿ ಹೆಚ್ಚುಳಿದ ಸಿಗರೇಟ್ ಶೇಖರಿಸಿಕೊಟ್ಟರೆ ಒಂದು ಕೆಜಿ ಗೆ 800 ರೂಪಾಯಿ ಅಂತೆ ಕೊಡುವುದಾಗಿ ಹೇಳಿದರು. ಇದನ್ನು ಕೇಳಿದ ಸಿಗರೇಟ್ ಸೇದುವವರು ಅವರವರೇ ಶೇಖರಣೆ ಮಾಡಿ ಮಾರಾಟ ಮಾಡಲು ಆರಂಭಿಸಿದರು. ಕಡಿಮೆ ಶೇಖರಣೆ ಆಗಿದ್ದರೆ ಅದರ ತೂಕದ ಆಧಾರದ ಮೇಲೆ ದುಡ್ಡು ಕೊಡಲಾಗುತ್ತದೆ. ಈಗ ತಮ್ಮ ಕಂಪನಿಯನ್ನು 20 ರಾಜ್ಯಗಳಲ್ಲಿ ವಿಸ್ತಾರ ಮಾಡಿರುವ ವಿಶಾಲ್ ಮತ್ತು ನಮನ್ 10ಸಾವಿರ ಕಡೆಗಳಲ್ಲಿ ಸಿಗರೇಟ್ ಫಿಲ್ಟರ್ ಬಾಕ್ಸ್ ಗಳನ್ನು ಇಟ್ಟಿದ್ದಾರೆ. ಸಂಗ್ರಹಣೆ ಮಾಡಿದ ಸಿಗರೇಟ್ ಗಳನ್ನು ಮರು ಬಳಕೆ ಮಾಡುವ ಇವರು ಅದರಲ್ಲಿ ಇರುವ ಕಾಗದದ ಚೂರುಗಳನ್ನು ಗಿಡಗಳಿಗೆ ಆರ್ಗ್ಯಾನಿಕ್ ಪೌಡರ್ ಆಗಿಯೂ, ಫಿಲ್ಟರ್ ಗಳಲ್ಲಿ ಇರುವ ಪಾಲಿಮರ್ ಹಾಲನ್ನು ಪುಟ್ಟ ಪುಟ್ಟ ಆಟಿಕೆಗಳು , ಕೀ ಚೈನ್ ಗಳ ತಯಾರಿಕೆಗೆ ಬಳಸುತ್ತಾ ಇದ್ದಾರೆ. ಈ ಇಬ್ಬರೂ ಸ್ನೇಹಿತರು ತಮ್ಮ ಆಲೋಚನೆಯಿಂದ ಸಾವಿರಾರು ಜನರ ಕೈ ಗೆ ಹಣ ಸಿಗುವಂತೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆ ಕೂಡಾ ಮಾಡುತ್ತಾ ಇದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!