ಈಗಿನ ಜನತೆ ಇತ್ತೀಚಿನ ಆಧುನಿಕ ಯುಗದಲ್ಲಿ ಸಿಗರೇಟ್ ಸೇದುವುದು ಅಂದರೆ ಅದೊಂದು ಪ್ರತಿಷ್ಠೆ, ಘನತೆ ಎಂದುಕೊಂಡಿದ್ದಾರೆ. ಈಗಿನ ಯುವ ಸಮುದಾಯ ಟೀ ಜೊತೆಗೆ ಸಿಗರೇಟ್ ಸೇದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ. ಇಂತಹ ಅಭ್ಯಾಸ ನಮ್ಮ ದೇಹಕ್ಕೆ ಎಷ್ಟರಮಟ್ಟಿಗೆ ಒಳ್ಳೆಯದು ಅಥವಾ ಎಷ್ಟರಮಟ್ಟಿಗೆ ಕೆಟ್ಟದು ಎನ್ನುವುದು ಎಷ್ಟು ಜನರಿಗೆ ತಿಳಿಯದೆ ಈ ರೀತಿಯ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಇಂತಹ ಅಭ್ಯಾಸಗಳು ನಮ್ಮ ದೇಹಕ್ಕೆ ಮಾರಣಾಂತಿಕವಾಗಿ ಕಾಡುತ್ತವೆ. ಹಾಗಾಗಿ ಟೀ ಜೊತೆಗೆ ಸಿಗರೇಟ್ತಿರುವಿನ ನಮ್ಮ ದೇಹಕ್ಕೆ ಏನೆಲ್ಲಾ ಅಡ್ಡ ಪರಿಣಾಮಗಳುಂಟಾಗುತ್ತವೆ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಸಿಗರೇಟ್ ಸೇದುವುದನ್ನು ಮೊದಲು ಹಾಗೆ ಸುಮ್ಮನೆ ತಮಾಷೆಗಾಗಿ ಅಥವಾ ಸಣ್ಣ ಚಟವಾಗಿ ಆರಂಭಿಸುತ್ತೇವೆ ನಂತರ ಅದೇ ಮುಂದುವರಿದು ದೊಡ್ಡ ಚಟವಾಗಿ ಮುಂದೆ ಮಾರಕ ಕ್ಯಾನ್ಸರ್ ಅಂತಹ ಮಾರಣಾಂತಿಕ ರೋಗಕ್ಕೆ ನಮ್ಮ ದೇಹವನ್ನು ತುತ್ತಾಗಿಸುತ್ತದೆ. ಅಷ್ಟೇ ಅಲ್ಲದೆ ಇಂತಹ ಚಟಕ್ಕೆ ಬೀಳುವುದರಿಂದ ಉಸಿರಾಟದ ತೊಂದರೆ ಉಂಟಾಗುವ ಸಂದರ್ಭವಿರುತ್ತದೆ. ಟೀ ಜೊತೆಗೆ ಸಿಗರೇಟ್ ಸೇದುವ ಅಭ್ಯಾಸ ಇದ್ದರೆ ಅಂತೂ ಅದು ನಮ್ಮ ಆರೋಗ್ಯವನ್ನು ಪೂರ್ತಿಯಾಗಿ ಹದಗೆಡಿಸಿ ಬಿಡುತ್ತದೆ. ಧೂಮಪಾನ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಅದೇ ಟೀ ಜೊತೆಗೆ ಸಿಗರೇಟ್ ಹಾಗೂ ಬೀಡಿ ಸೇದುವ ಅಭ್ಯಾಸವಿದ್ದರೆ ಗಂಟಲು ಹಾಗೂ ಹೊಟ್ಟೆಗೆ ಸಂಬಂಧಿಸಿದಂತಹ ಹಲವಾರು ರೀತಿಯ ರೋಗಗಳು ಬರುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ. ಇದರಿಂದಾಗಿ ಟೀ ಜೊತೆಗೆ ಸಿಗರೇಟ್ ಸೇದುವುದರಿಂದ ಎಕ್ಸೋ ಫಿಲಾಸ್ ಎಂಬ ಮಾರಣಾಂತಿಕ ಕ್ಯಾನ್ಸರ್ ಕಾಯಿಲೆ ಬರುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ. ಅಷ್ಟೇ ಅಲ್ಲದೆ ಟೀ ಜೊತೆಗೆ ಸಿಗರೇಟ್ ಸೇದುವ ಅಭ್ಯಾಸ ಇರುವಂತಹ ಜನರಿಗೆ ಆದಷ್ಟು ಬೇಗ ಅಂದರೆ ಐದು ಪಟ್ಟು ಬೇಗ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದು ಹೊಟ್ಟೆ ಮತ್ತು ಗಂಟಲಿನ ಮೇಲೆ ತನ್ನ ನೇರವಾದ ಪರಿಣಾಮವನ್ನು ಬೀರುತ್ತದೆ. ಕ್ಯಾನ್ಸರಿಂದ ನಮಗೆ ಬಂದರೆ ಜೀವ ತೆಗೆದುಬಿಡುತ್ತದೆ. ಬಿಸಿ ಟೀ ಹುಟ್ಟಿಗೆ ಸೇವನೆ ಮಾಡುವುದರಿಂದ ಟ್ಯೂಮರ್ ಅಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಸಂಶೋಧನೆಗಳು ಹೇಳುತ್ತವೆ. ಅಷ್ಟೇ ಅಲ್ಲದೆ ಸಿಗರೇಟ್ ಗಳಲ್ಲಿ ಸೈನೇಡ್, ಪೆತನಾನ್ ಫಾರ್ಮಾಲ್ಡಿಹೈಡ್, ಅಮೋನಿಯಂ ಅಂತಹ ಅನೇಕ ರೀತಿಯ ರಾಸಾಯನಿಕ ಅಂಶಗಳು ಇರುತ್ತವೆ. ಇದರಿಂದ ಧೂಮಪಾನ ಮಾಡುವಾಗ ತಾರ್ ಅನ್ನುವ ವಿಷಕಾರಿ ಅಂಶವನ್ನು ಮಧ್ಯದೊಳಗೆ ಸೇರಿ ಸಾಕಷ್ಟು ಪ್ರಮಾಣದಲ್ಲಿ ದೇಹದಲ್ಲಿ ಸಂಗ್ರಹವಾಗುತ್ತದೆ. ದೇಹದಲ್ಲಿ ರಾಸಾಯನಿಕಗಳ ಪ್ರಮಾಣ ಅತಿಯಾಗಿ ಹೆಚ್ಚಾಗಿ ಕ್ಯಾನ್ಸರ್, ಹೃದಯದ ಸಂಬಂಧಿತ ಕಾಯಿಲೆಗಳು , ತೂಕ ಹೆಚ್ಚಾಗಿ ತುಂಬಾ ಬಳಲಿ ಸಾಯುವಂತಹ ಪರಿಸ್ಥಿತಿ ಬರುತ್ತದೆ. ಹಾಗಾಗಿ ಟೀ ಜೊತೆಗೆ ಸಿಗರೇಟ್ ಸೇದುವುದು ಅಥವಾ ಸಿಗರೇಟ್ ಜೊತೆಗೆ ಟೀ ಕುಡಿಯುವ ಅಭ್ಯಾಸ ಏನಾದರೂ ಇದ್ದಲ್ಲಿ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ಟೀ ಕುಡಿಯುವುದರ ಜೊತೆಗೆ ಸಿಗರೇಟ್ ಸೇದುವುದನ್ನು ಮಾಡುವುದರಿಂದ ನಮ್ಮ ಆರೋಗ್ಯವನ್ನು ನಮ್ಮ ಕೈಯ್ಯಾರೆ ನಾವೇ ಹಾಳು ಮಾಡಿಕೊಂಡ ಹಾಗೆ.

Leave a Reply

Your email address will not be published. Required fields are marked *