ಅರಿಶಿನ ಬಳಸಿ ಬೊಜ್ಜು ಕಡಿಮೆ ಮಾಡಿಕೊಳ್ಳಬಹುದೇ?

0 3

ಚಿನ್ನದ ಬಣ್ಣದ ಈ ಮಸಾಲೆ ಸಾಮಗ್ರಿ ಅರಿಶಿನ ಒಂದು ಅದ್ಭುತವಾದ ಔಷಧ ಕೂಡಾ ಆಗಿದೆ. ಇದರಲ್ಲಿ ಉರಿಯೂತ ನಿವಾರಕ ಗುಣ ಪ್ರಭಲವಾಗಿದ್ದು ಹಲವಾರು ಔಷಧೀಯ ಗುಣಗಳನ್ನು ಸಹ ಹೊಂದಿದೇ. ಸಂಧಿವಾತ ಹಾಗೂ ಕೆಲವು ಕ್ಯಾನ್ಸರ್ ಅಂತಹ ಕಾಯಿಲೆಗಳಿಗೆ ಅರಿಶಿನ ಉತ್ತಮ ಔಷಧವಾಗಿದೆ. ತೂಕ ಇಳಿಸಲು ಬಯಸುವವರಿಗೆ ಅರಿಶಿನ ಕೂಡಾ ಒಂದು ಉತ್ತಮ ಪದಾರ್ಥವಾಗಿದೆ. ವಾಸ್ತವವಾಗಿ ಅರಿಶಿನ ಸೇವನೆ ಮಾಡುವುದರಿಂದ ನಿಜಕ್ಕೂ ತೂಕ ಕಡಿಮೆ ಆಗುತ್ತದೆಯೇ? ಅರಿಶಿನದಲ್ಲಿ ಅತ್ಯಂತ ಪ್ರಭಾವಶಾಲಿ ಪೋಷಕಾಂಶಗಳು ಇವೆ. ಇದು ಅತ್ಯಂತ ಪ್ರಭಾವಶಾಲಿ ಉರಿ ಊತ ನಿವಾರಕ ಗುಣ ಹಾಗೂ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ.

ಅರಿಶಿಣದಲ್ಲಿ ಇರುವಂತಹ ಕುರ್ಕುವಿನ್ ಅಂಶವು ನಮ್ಮ ದೇಹದ ತೂಕ ಇಳಿಸಲು ನೆರವಾಗುತ್ತದೆ. ಆದರೆ ಇದು ಹೇಗೆ ನೆರವಾಗುತ್ತದೆ? ಕೊಬ್ಬಿನ ಜೀವ ರಾಸಾಯನಿಕ ಕ್ರಿಯೆಯನ್ನು ಕ್ರಮಬದ್ಧಗೊಳಿಸಿ ದೇಹದಲ್ಲಿ ಇರುವಂತಹ ಮೇದಸ್ಸನ್ನು ಜೀರ್ಣಗೊಳಿಸಲು ಕುರ್ಕುವಿನ್ ನೆರವಾಗುತ್ತದೆ. ಹಾಗೂ ಇದು ಸ್ಥೂಲಕಾಯ ಆಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕುರ್ಕುವಿನ್ ಅನ್ನು ಉರಿ ಊತ ನಿವಾರಕ ಗುಣ ಹೊಂದಿರುವ ಇತರ ಮಸಾಲೆಗಳು ಹಾಗೂ ಇತರ ಮೂಲಿಕೆಗಳೊಂದಿಗೆ ಸೇವಿಸಿದಾಗ ಇದರ ಗುಣ ಮತ್ತು ಹೆಚುತ್ತದೆ. ಈ ಮೂಲಕ ಬೇಗ ಬೇಗ ತೂಕ ಇಳಿಕೆ ಆಗುತ್ತದೆ. ಸ್ಥೂಲಕಾಯಕ್ಕೆ ಮೂಲ ಕಾರಣ ಆಗಿರುವ ಕೊಬ್ಬಿನ ಜೀವಕೋಶಗಳು ಪ್ರೌಢಾವಸ್ಥೆಯನ್ನ ಪಡೆಯುವುದನ್ನ ಈ ಪೋಷಕಾಂಶಗಳು ತಡೆಯುವ ಮೂಲಕ ಅಗತ್ಯ ಮಟ್ಟದ ಕೊಬ್ಬು ಮಾತ್ರ ಇದ್ದು ತೂಕದಲ್ಲಿ ಏರಿಕೆ ಆಗದಂತೇ ತಡೆಯುತ್ತದೆ. ಕುರ್ಕುವಿನ್ ನ ಇನ್ನೊಂದು ಪಾತ್ರ ಎಂದರೆ ಇದು ನಮ್ಮ ದೇಹದಲ್ಲಿ ಇರುವಂತಹ ಬಿಳಿ ಕೊಬ್ಬನ್ನು ಕಂದು ಕೊಬ್ಬಾಗಿ ಪರಿವರ್ತಿಸುತ್ತದೆ. ಬಿಳಿ ಕೊಬ್ಬು ಎಂದರೆ , ಮುಂದಿನ ದಿನಗಳ ಬಳಕೆಗಾಗಿ ಚರ್ಮದ ಸುತ್ತ ಹಾಗೂ ವಿಶೇಷವಾಗಿ ಸೊಂಟದ ಸುತ್ತ ಶೇಖರಣೆ ಆಗಿರುವ ಕೊಬ್ಬಾಗಿದೆ.

ಸ್ಥೂಲಕಾಯಕ್ಕೆ ಈ ಬಿಳಿ ಕೊಬ್ಬು ಮುಖ್ಯವಾಗಿ ಕಾರಣ ಆಗಿರುತ್ತದೆ. ಕಂದು ಕೊಬ್ಬು ಇಂದಿನ ಚಟುವಟಿಕೆಯ ಅಗತ್ಯಕ್ಕಾಗಿ ಮಾತ್ರ ಇರುವಂತಹ ಕೊಬ್ಬು. ಇದು ಗ್ಲುಕೋಸ್ ನೊಂದಿಗೆ ಹೊಂದಿಕೊಂಡು ಶಕ್ತಿಯಾಗಿ ಬಳಕೆ ಆಗುತ್ತದೆ. ಕಂದು ಕೊಬ್ಬು ಇದ್ದಷ್ಟು ಇದು ದೈನಂದಿನ ದೈಹಿಕ ಚಟುವಟಿಕೆಯ ಮೂಲಕ ಕರಗಿ ಹೋಗುವ ಕಾರಣ ತೂಕ ಇಳಿಸುವುದು ಮಾತ್ರ ಅಲ್ಲದೆ ಕೊಬ್ಬಿನ ಅಂಶವನ್ನು ಸಹ ಕಡಿಮೆ ಮಾಡು ಸ್ಥೂಲಕಾಯವನ್ನು ಸಹ ಕಡಿಮೆ ಮಾಡುತ್ತದೆ. ಉರಿಯೂತದ ವಿರುದ್ಧ ಹೋರಾಡುತ್ತದೆ ಉರಿಯೂತ ಮತ್ತು ಸ್ಥೂಲಕಾಯ ಎರಡು ಒಳ್ಳೆಯ ಸ್ನೇಹಿತರು ಇದ್ದಹಾಗೆ. ಒಂದು ವೇಳೆ ಉರಿಯೂತ ಬಹಳವೇ ಹೆಚ್ಚಿದ್ದರೆ ಇದು ದೇಹದ ರಸದೂತಗಳನ್ನು ಏರುಪೇರು ಮಾಡಿ ಜೀವರಾಸಾಯನಿಕ ಕ್ರಿಯೆಯನ್ನು ಬದಲಿಸಿಬಿಡುತ್ತದೆ. ಹಾಗೇ ಅನಗತ್ಯ ಆಹಾರಗಳತ್ತ ಆಕರ್ಷಣೆಯನ್ನು ಹೆಚ್ಚಿಸಿ ಸ್ಥೂಲ ಕಾಯವನ್ನು ಸಹ ಹೆಚ್ಚು ಮಾಡುತ್ತದೆ. ಸ್ಥೂಲಕಾಯ ಹೆಚ್ಚಿದಶ್ಟು ಅಲ್ಪ ಪ್ರಾಬಲ್ಯದ ಉರಿ ಊತ ಕೂಡ ಹೆಚ್ಚುತ್ತಾ ಹೋಗುತ್ತದೆ. ಹರಿಶಿಣ ಈ ತೊಂದರೆಗೆ ಕಾರಣವಾದಂತಹ ಫ್ರೀ ರಾಡಿಕಲ್ ವಿರುದ್ಧ ಹೋರಾಡುವ ಮೂಲಕ ತೊಂದರೆಯ ಮೂಲವನ್ನು ನಿವಾರಿಸುತ್ತದೆ. ಸ್ಥೂಲಕಾಯದಿಂದ ಇದುವರೆಗೆ ಆಗಿದ್ದ ಹಾನಿಯನ್ನು ಸರಿಪಡಿಸುತ್ತದೆ.

ಸಾಮಾನ್ಯವಾಗಿ ಸ್ಥೂಲಕಾಯ ಇರುವವರೆಗೆ ಈ ಸಮಸ್ಯೆ ಇದ್ದೇ ಇರುತ್ತದೆ. ಪರಿಣಾಮವಾಗಿ ಇವರ ದೇಹದಲ್ಲಿ ಸೊಂಟದ ಭಾಗದಲ್ಲಿ ಅಧಿಕ ಬೇಡ ವಾದಂತಹ ಕೊಬ್ಬು, ಅಧಿಕ ರಕ್ತದ ಒತ್ತಡ , ಪ್ಲಾಸ್ಮಾದಲ್ಲಿ ಗ್ಲೂಕೋಸ್ ಅಂಶ ಕಂಡುಬರುವುದು, ಒಳ್ಳೆಯ ಕೊಬ್ಬಿನ ಮಟ್ಟ ಕಡಿಮೆಯಾಗುವುದು, ಇನ್ಸುಲಿನ್ ತಾಳಿಕೊಳ್ಳುವ ಶಕ್ತಿ ಕಡಿಮೆಯಾಗುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತದೆ ಹಾಗಾಗಿ ಸ್ಥೂಲಕಾಯ ಸಮಸ್ಯೆ ಇರುವವರು ಆರೋಗ್ಯಕರವಾದ ಅಂತಹ ಆಹಾರವನ್ನು ಸೇವಿಸಿ ತೂಕ ಇಳಿಸಿಕೊಳ್ಳಬೇಕು. ಆದರೂ ಮೂಲಕವೇ ಇರುವಂತವರ ದೇಹದ ತೂಕ ಅಷ್ಟು ಸುಲಭಕ್ಕೆ ಇಳಿಯುವುದಿಲ್ಲ. ಒಂದು ಅಧ್ಯಯನದ ಮೂಲಕ ಕಂಡುಕೊಂಡಂತೆ ಈ ತೊಂದರೆ ಇರುವ ಹಲವಾರು ಸ್ಥೂಲಕಾಯ ಗಳಿಗೆ ನಿಯಮಿತವಾಗಿ ಕುರ್ಕುವಿನ್ ಅಂಶವಿರುವ ಆಹಾರವನ್ನು ನಿಯಮಿತವಾಗಿ ಸೇವಿಸುವಂತೆ ಸಲಹೆ ನೀಡಲಾಗಿತ್ತು. ಪರಿಣಾಮವಾಗಿ ದೇಹದ ತೂಕದಲ್ಲಿ ನಿಯಮಿತವಾಗಿ ಇಳಿಕೆ ಕಂಡುಬಂದಿದೆ. ದೇಹದಲ್ಲಿ ತೂಕ ಇಳಿಕೆ ಕಡಿಮೆಯಾಗಿ ಎತ್ತರಕ್ಕೆ ತಕ್ಕಂತಹ ತೂಕ ಇದ್ದಿತ್ತು. ಅಂಜನದ ಮೂಲಕ ಅರಿಶಿನದ ಸೇವನೆಯಿಂದ ದೇಹದ ಹಲವಾರು ಕಾರ್ಯಗಳಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯ ಎನ್ನುವುದು ರೂಪಿಸಲಾಯಿತು.

ನಮ್ಮ ದೇಹದ ತೂಕ ಹೆಚ್ಚಾಗಲು ಮಾನಸಿಕ ಒತ್ತಡವು ಸಹ ಒಂದು ಮುಖ್ಯವಾದ ಕಾರಣವಾಗಿದೆ. ಕಿನ್ನತೆ ಉದ್ವೇಗಗಳು ದೇಹದಲ್ಲಿ ಅಧಿಕ ಪ್ರಮಾಣದ ಕಾರ್ಟಿಸೋಲ್ ಎಂಬ ರಸದುತವನ್ನು ಸ್ರವಿಸಲು ಪ್ರಚೋದನೆ ನೀಡುತ್ತದೆ. ಇವು ದೇಹದ ತೂಕ ಏರಿಕೆಗೆ ನೇರವಾಗಿ ಕಾರಣವಾಗಿರುತ್ತದೆ. ಕುರ್ಕುವಿನ್ ಅಂಶವು ಈ ಕಾರ್ಯಕ್ಕೆ ಸೋಲು ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ಹಾಗೂ ಇದರಿಂದ ಮೆದುಳಿನ ಮೇಲೆ ಉಂಟಾಗುವಂತಹ ಋಣಾತ್ಮಕ ಪ್ರಭಾವದಿಂದ ಸಹ ರಕ್ಷಿಸುತ್ತದೆ. ಮಹಿಳೆಯರ ದೇಹದಲ್ಲಿ ರಸದೂತಗಳ ಮಟ್ಟದ ಏರುಪೇರಿನಿಂದಾಗಿ ತೂಕ ಅಪಾರ ಪ್ರಮಾಣದಲ್ಲಿ ಏರುತ್ತದೆ. ಆದರೆ ಅರುಷ ನದಲ್ಲಿ ಇರುವಂತಹ ಉರಿಯೂತವನ್ನು ನಿವಾರಣೆ ಮಾಡುವಂತಹ ಗುಣ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ಅರಿಶಿಣವನ್ನು ಪ್ರತಿನಿತ್ಯ ಸೇವಿಸುವ ಮೂಲಕ ಹಲವಾರು ಬಗ್ಗೆ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬಹುದು. ಪ್ರತಿದಿನ ನಾವು ಅರಿಶಿನವನ್ನು ಯಾವುದೇ ಪದಾರ್ಥಗಳಲ್ಲಿ ಟೀ ಕಾಫಿ ಅಥವಾ ಹಾಲಿನಲ್ಲಿ ಆದರೂ ಅರಿಶಿಣವನ್ನು ಬೆರೆತೆ ನಮ್ಮ ದೇಹಕ್ಕೆ ಹೋಗುವಂತೆ ಮಾಡಬಹುದು ಆದರೆ ದಿನವೊಂದಕ್ಕೆ ಒಟ್ಟಾರೆ ಹರುಷದ ಪ್ರಮಾಣ 3 ಗ್ರಾಂಗಿಂತ ಅತಿಯಾಗಿ ನಮ್ಮ ದೇಹವನ್ನು ಸೇರಬಾರದು. ತೂಕವನ್ನು ಇಳಿಸಿಕೊಳ್ಳಲು ಅರಿಶಿನ ಮಾತ್ರ ನೆರವು ನೀಡಲಾಗದು ಹಾಗಾಗಿ ಅರಿಶಿನದ ಜೊತೆಗೆ ಉರಿಯುತ್ತ ನಿವಾರಕ ಗುಣವನ್ನು ತಂದಿರುವಂತಹ ಇತರ ಆಹಾರ ಪದಾರ್ಥಗಳನ್ನು ಸೇವಿಸಬೇಕು.

Leave A Reply

Your email address will not be published.