ಒಂದು ಹಿಡಿ ಕಪ್ಪುಎಳ್ಳು ಇದ್ರೆ ಈ ಮೂರು ಸಮಸ್ಯೆಗೆ ಪರಿಹಾರ ಮನೆಯಲ್ಲೇ ಇದ್ದಂತೆ

0 2

ಸಾಮಾನ್ಯವಾಗಿ ಎಳ್ಳು ಅಂದ್ರೆ ಕೆಲವರಿಗೆ ಇದರ ಬಗ್ಗೆ ಗೊತ್ತಿರುತ್ತದೆ, ಈ ಎಳ್ಳಿನಲ್ಲಿ ಎರಡು ಬಗೆಯನ್ನು ಕಾಣಬಹುದು ಅದುವೇ ಒಂದು ಬಿಳಿಎಳ್ಳು ಮತ್ತೊಂದು ಕಪ್ಪುಎಳ್ಳು ಎಂಬುದಾಗಿ ನಾವು ಈ ಮೂಲಕ ಕಪ್ಪು ಎಳ್ಳಿನ ಆರೋಗ್ಯಕಾರಿ ಮನೆಮದ್ದನ್ನು ತಿಳಿದುಕೊಳ್ಳೋಣ. ಈ ಎಳ್ಳು ಮಾರುಕಟ್ಟೆಯಲ್ಲಿ ಸಿಗುತ್ತದೆ ಹಾಗೂ ಗ್ರಾಮೀಣ ಪ್ರದೇಶದ ರೈತರ ಮನೆಗಳಲ್ಲಿ ಕೂಡ ಲಭ್ಯವಿರುತ್ತದೆ.

ಕಪ್ಪು ಎಳ್ಳು ಹೇಗೆಲ್ಲ ಉಪಯೋಗಕಾರಿ ಅನ್ನೋದು ನಿಮಗೆ ಒಂದಿಷ್ಟು ಗೊತ್ತಿರುತ್ತದೆ, ಆದ್ರೆ ನಾವುಗಳು ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮಗೆ ಈ ಮೂಲಕ ಒಂದಿಷ್ಟು ದೈಹಿಕ ಸಮಸ್ಯೆಗಳಿಗೆ ಕಪ್ಪುಎಳ್ಳು ಹೇಗೆ ಸಹಕಾರಿ ಅನ್ನೋದನ್ನ ತಿಳಿಸಿಕೊಡುತ್ತೇವೆ. ನಿಮಗೆ ಈ ಆರೋಗ್ಯಕಾರಿ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಮೂಲವ್ಯಾದಿ ಸಮಸ್ಯೆ ಇರೋರು ಒಂದು ಹಿಡಿ ಕಪ್ಪು ಎಳ್ಳು ತಗೆದುಕೊಂಡು ಅದನ್ನು ಒಂದು ಲೋಟ ನೀರಲ್ಲಿ ಕುದಿಸಿ ಸೋಸಿಡಬೇಕು. ಈ ನೀರನ್ನು ದಿನಕ್ಕೆ 2ರಿಂದ 3 ಬಾರಿ ಸೇವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಇನ್ನು ಕಫ ಸಮಸ್ಯೆ ಏನಾದ್ರು ಇದ್ರೆ ಣ್ಣೆಗೆ ಸ್ವಲ್ಪ ಬೆಳ್ಳುಳ್ಳಿ ಜಜ್ಜಿ ಹಾಕಿ ಕುದಿಸಬೇಕು. ನಂತರ ಆ ಎಣ್ಣೆಯನ್ನು ಎದೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ಕಫ ಕರಗುತ್ತದೆ

ನಿದ್ರಾಹೀನತೆ ಸಮಸ್ಯೆ ಏನಾದ್ರು ಇದ್ರೆ, ರಾತ್ರಿ ನಿದ್ರೆ ಸರಿಯಾಗಿ ಬರೋಲ್ಲ ಅನ್ನೋರು ಕೂಡ ಇದನ್ನು ಮಾಡಬಹುದು ಅದೇನೆಂದರೆ ಸೋರೆಕಾಯಿ ರಸಕ್ಕೆ ಸಮಪ್ರಮಾಣದ ಎಳ್ಳಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ. ಅಷ್ಟೇ ಅಲ್ಲದೆ ಶರೀರದಲ್ಲಿ ರಕ್ತಹೀನತೆ ಸಮಸ್ಯೆ ಇದ್ರೆ ಎಳ್ಳನ್ನು ನೀರಲ್ಲಿ ನೆನೆಸಿ ಪೇಸ್ಟ್ ಮಾಡಿ ಅದಕ್ಕೆ ಬೆಲ್ಲ ಬೆರೆಸಿ ಹಾಲಿನ ಜತೆ ಸೇವಿಸಿದರೆ ರಕ್ತವೃದ್ಧಿಯಾಗುತ್ತದೆ.

ಮುಖದ ಮೇಲೆ ಮೊಡವೆ ಕಲೆಗಳು ಏನಾದ್ರು ಇದ್ರೆ ಎಳ್ಳೆಣ್ಣೆಗೆ ಅರಿಶಿನ ಕಲಸಿ ಮುಖಕ್ಕೆ ಮಸಾಜ್ ಮಾಡಿದರೆ ಮೊಡವೆ ಕಲೆಗಳು ಇಲ್ಲದಂತಾಗುವುದು. ಇನ್ನು ಹೆಣ್ಣುಮಕ್ಕಳಲ್ಲಿ ಮುಟ್ಟು ಆಗುವ ಮುಂಚೆ ಸ್ವಲ್ಪ ಎಳ್ಳನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಶಮನವಾಗುತ್ತದೆ. ಇನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ರಾತ್ರಿ ನೆನೆಸಿದ ಎಳ್ಳನ್ನು ಸೇವಿಸಿದರೆ ಸಂಧಿ ಮತ್ತು ಮೂಳೆಗಳು ಆರೋಗ್ಯವಾಗಿರುತ್ತವೆ. ಹೀಗೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಈ ಕಪ್ಪು ಎಳ್ಳಿನಿಂದ ಪಡೆಯಬಹುದಾಗಿದೆ.

Leave A Reply

Your email address will not be published.