ಸಂತಾನ ಫಲ ಬೇಕೆನ್ನುವ ದಂಪತಿಗಳಿಗಾಗಿ ಈ ಮನೆಮದ್ದು

Health & fitness
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಮದುವೆಯಾದ ಬಳಿಕ ಮಕ್ಕಳನ್ನು ಪಡೆದು ಜೀವನವನ್ನು ಸಾರ್ಥಕಗೊಳಿಸುವುದು ಎಲ್ಲಾ ದಂಪತಿಗಳ ಕನಸಾಗಿರುತ್ತದೆ. ಕೆಲವೊಮ್ಮೆ ವಿವಾಹವಾಗಿ ಎಷ್ಟೇ ವರ್ಷಗಳಾದರೂ ಎಷ್ಟು ಔಷಧಿಗಳನ್ನು ಮಾಡಿದರೂ ಸಹ ಸಂತಾನ ಭಾಗ್ಯವನ್ನು ದೊರೆಯುವುದಿಲ್ಲ ಇದರಿಂದ ದಂಪತಿಗಳು ಬೇಸರಪಟ್ಟುಕೊಳ್ಳುವುದು ಸಹಜವೇ ಆಗಿರುತ್ತದೆ. ಸಂತಾನಭಾಗ್ಯ ಇಲ್ಲದಿರುವುದಕ್ಕೆ ಹಲವಾರು ಕಾರಣಗಳು ಇರಬಹುದು. ಇದಕ್ಕೆ ವೀ,ರ್ಯಾಣುಗಳ ಸಂಖ್ಯೆಯು ಸಹ ಒಂದು ಕಾರಣವಾಗಿರಬಹುದು. ವೀರ್ಯಾಣುಗಳ ಸಂಖ್ಯೆ ಕಾರಣದಿಂದಾಗಿ ಕೆಲವೊಮ್ಮೆ ಬಂಜೆತನ ಬರಬಹುದು ಹೀಗಾಗಿ ನೊಂದುಕೊಂಡು ಚಿಂತಿಸಬೇಕಾದ ಅವಶ್ಯಕತೆ ಇಲ್ಲ ಇದರ ಬದಲು ಒಂದು ಸುಲಭವಾದ ಮನೆಮದ್ದನ್ನು ಮಾಡಿಕೊಂಡು ಅದನ್ನು ಕುಡಿಯುತ್ತಾ ಬಂದರೆ ವೀ,ರ್ಯಾಣುಗಳ ಸಂಖ್ಯೆ ಹೆಚ್ಚಾಗಿ ಸಂತಾನ ಭಾಗ್ಯವನ್ನು ಪಡೆಯಬಹುದು. ಸಂತಾನ ಭಾಗ್ಯವನ್ನು ಪಡೆಯುವುದಕ್ಕಾಗಿ ವೀ-ರ್ಯಾಣುವನ್ನು ಹೆಚ್ಚಿಸುವ ಸಲುವಾಗಿ ಒಂದು ಮನೆ ಮದ್ದನ್ನು ಹೇಗೆ ತಯಾರಿಸಿಕೊಳ್ಳುವುದು ಅನ್ನೋದರ ಬಗ್ಗೆ ಒಂದು ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಮನೆ ಮದ್ದು ಒಂದು ರೀತಿಯ ಪಾನೀಯವಾಗಿದ್ದು ಇದನ್ನು ಮಾಡುವುದಕ್ಕೆ 6 ಜಾಯಿಕಾಯಿಯನ್ನ ತೆಗೆದುಕೊಂಡು ಇದನ್ನು ಸ್ವಚ್ಛವಾಗಿ ತೊಳೆದು ಕೊಂಡು ಒಂದು ಪ್ಯಾನ್ ನಲ್ಲಿ ಹಾಕಿ ಒಂದು ಚಮಚ ತುಪ್ಪವನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಇದನ್ನು ಸ್ವಲ್ಪ ಹೊತ್ತು ತಣ್ಣಗಾಗಲು ಬಿಟ್ಟು ಮೊದಲಿಗೆ ಸ್ವಲ್ಪ ಜಜ್ಜಿಕೊಂಡು ನಂತರ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಬೇಕು. ಪವರ್ ಮಾಡಿಕೊಂಡಂತಹ ಜನ ಈ ಕಾಯಿಯನ್ನು ಗಾಳಿ ಆಡದ ಒಂದು ಡಬ್ಬದಲ್ಲಿ ಹಾಕಿ ಶೇಖರಿಸಿ ಇಟ್ಟುಕೊಳ್ಳಬೇಕು.

ಒಂದು ದೊಡ್ಡದಾದ ಗ್ಲಾಸಿನಲ್ಲಿ ಹಾಲನ್ನು ತೆಗೆದುಕೊಂಡು ಅದನ್ನು ನೀರು ಬೆರೆಸದೆ ಬರಿ ಹಾಲನ್ನು ಮಾತ್ರ ಚೆನ್ನಾಗಿ ಕುದಿಸಿ ಅದಕ್ಕೆ ಒಂದು ಚಮಚ ತುಪ್ಪದಲ್ಲಿ ಹುರಿದು ಪುಡಿ ಮಾಡಿಟ್ಟುಕೊಂಡ ಜಾಯಿಕಾಯಿ ಪುಡಿ ಹಾಗೂ ಒಂದು ಚಮಚ ಬೆಲ್ಲವನ್ನು ಸೇರಿಸಿ ಒಂದು ಕುದಿ ಕುದಿಸಿ, ಪ್ರತಿದಿನ ರಾತ್ರಿ ಊಟವಾದ ನಂತರ ಒಂದು ಲೋಟ ಕುಡಿಯುವುದರಿಂದ ವೀ,ರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ. ಈ ರೀತಿ ಒಮ್ಮೆ ಆರಂಭಿಸಿದರೆ ಮಕ್ಕಳಾಗುವವರೆಗೂ ಕುಡಿಯುತ್ತಿರಬೇಕು.

ಸಂತಾನಫಲವನ್ನು ಪಡೆಯಬೇಕು ಎನ್ನುವ ದಂಪತಿಗಳು ಸರಿಯಾದ ದಿನವನ್ನು ಗುರುತಿಸಿ ಸಂಗಾತಿಯೊಂದಿಗೆ ಸೇರಬೇಕು, ಯಾವಾಗ ಸೇರಬೇಕು ಎನ್ನುವ ದಿನಾಂಕವನ್ನು ವೈದ್ಯರ ಬಳಿ ಪಡೆದುಕೊಳ್ಳಬಹುದು ಅಥವಾ ಹಲವು ಮಾಹಿತಿಗಳು ಯುಟ್ಯೂಬ್ ವಿಡಿಯೋದಲ್ಲಿ ಕೂಡ ಲಭ್ಯವಿರುತ್ತದೆ. ಈ ಮೇಲೆ ತಿಳಿಸಿದ ಮನೆಮದ್ದು ಪುರುಷರಲ್ಲಿ ವೀ-ರ್ಯಾಣು ವೃದ್ಧಿ ಗೊಳಿಸುವ ಸಲುವಾಗಿ ಈ ನೈಸರ್ಗಿಕ ಮನೆಮದ್ದು ಉತ್ತಮ ಆರೋಗ್ಯವನ್ನು ವೃದ್ಧಿಸುವಂತಾದಾಗಿದೆ ಇದರ ಬಳಕೆ ಮಿತವಾಗಿರಲಿ,. ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *