ಪ್ರಪಂಚದಲ್ಲಿ ಅರ್ಥಮಾಡಿಕೊಳ್ಳಲು ಕಷ್ಟ ಆಗುವುದು ಹುಡುಗಿಯರ ಮನಸ್ಸು ಎಂದು ಹೇಳಿದರೆ ತಪ್ಪಲ್ಲ. ಹುಡುಗರಿಗೆ ಯಾವಾಗ ಏನು ಬೇಕು, ಅವರಿಗೆ ಏನು ಇಷ್ಟವಾಗುತ್ತದೆ ಅನ್ನೋದು ಯಾರಿಗೂ ಗೊತ್ತಿರೋದಿಲ್ಲ. ಅದರಲ್ಲೂ ಹುಡುಗಿಯರ ಮನಸ್ಸಿಗೆ ಯಾವ ಥರದ ಹುಡುಗ ಇಷ್ಟ ಆಗ್ತಾನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದು ಇನ್ನು ಕಷ್ಟದ ಕೆಲಸ. ಹೀಗಿರುವಾಗ ಒಂದು ಸರ್ವೇ ನಡೆಸಿ ಹುಡುಗಿಯರಿಗೆ ಯಾವ ಥರದ ಹುಡುಗ ಇಷ್ಟ ಎನ್ನುವುದನ್ನು ತಿಳಿಯುವ ಪ್ರಯತ್ನ ಮಾಡಲಾಗಿದೆ..

ಈಗಿನ ಕಾಲದಲ್ಲಿ ಹುಡುಗರ ವಿಚಾರದಲ್ಲಿ ಹೊಸ ಟ್ರೆಂಡ್ ಏನು ಎಂದರೆ, ಹುಡುಗರು ಕ್ಲೀನ್ ಶೇವ್ ಮಾಡುವುದಕ್ಕಿಂತ ಹೆಚ್ಚಾಗಿ ಗಡ್ಡ ಬಿಟ್ಟಿರುತ್ತಾರೆ. ಇದು ಈಗಿನ ಒಂದು ಸ್ಟೈಲ್ ಮತ್ತು ಫ್ಯಾಶನ್ ಎಂದು ಹೇಳಿದರೆ ತಪ್ಪಲ್ಲ. ಅದೇ ರೀತಿ ಈಗಿನ ಹುಡುಗಿಯರಿಗೆ ಕ್ಲೀನ್ ಶೇವ್ ಮಾಡಿರುವುದಕ್ಕಿಂತ ಗಡ್ಡ ಬಿಟ್ಟಿರುವ ಹುಡುಗರೇ ಹೆಚ್ಚು ಇಷ್ಟವಾಗುತ್ತಾರಂತೆ. ಸರ್ವೆಯಲ್ಲಿ ಪ್ರೂವ್ ಆಗಿರುವ ವಿಚಾರ ಕೂಡ ಇದೇ ಆಗಿದ್ದು, ಹಾಗಿದ್ದರೆ ಸರ್ವೆಯಲ್ಲಿ ಬಂದಿರುವ ಉತ್ತರದ ಹಾಗೆ ಹುಡುಗಿಯರಿಗೆ ಗಡ್ಡ ಬಿಟ್ಟಿರುವ ಹುಡುಗರೇ ಯಾಕೆ ಇಷ್ಟವಾಗುತ್ತಾರೆ ಎಂದು ತಿಳಿಸುತೇವೆ ನೋಡಿ..

ಹುಡುಗಿಯರ ಮನಸ್ಥಿತಿಯ ಪ್ರಕಾರ ಹುಡುಗರು ಗಡ್ಡ ಬಿಟ್ಟಿದ್ದರೆ ಹುಡುಗಿಯರ ಕಣ್ಣಿಗೆ ಆಕರ್ಷಕವಾಗಿ ಕಾಣಿಸುತ್ತಾರೆ ಎಂದು ಸರ್ವೆಯಲ್ಲಿ ತಿಳಿದುಬಂದಿದೆ. ಗಡ್ಡ ಬಿಟ್ಟಾಗ ಹುಡುಗರು ಆಕರ್ಷಕವಾಗಿ ಕಾಣುವುದರಿಂದ ಹುಡುಗಿಯರಿಗೆ ಹೆಚ್ಚು ಇಷ್ಟವಾಗುತ್ತಾರೆ.

ಇಷ್ಟು ಮಾತ್ರವಲ್ಲದೆ, ಹುಡುಗರು ಗಡ್ಡ ಬಿಟ್ಟಿದ್ದರೆ ಅವರಲ್ಲಿ ಸೃಜನಶೀಲತೆ ಹೆಚ್ಚಾಗಿರುತ್ತದೆ ಎನ್ನುವುದು ಹುಡುಗಿಯರ ಅಭಿಪ್ರಾಯ ಆಗಿದೆ. ಹಾಗೆಯೇ ಗಡ್ಡ ಬಿಟ್ಟಿರುವ ಹುಡುಗನಲ್ಲಿ ಪ್ರಭುದ್ದತೆ ಇರುತ್ತದೆ ಎನ್ನುವುದು ಹುಡುಗಿಯರಲ್ಲಿ ಮತ್ತೊಂದು ನಂಬಿಕೆಯ ವಿಚಾರ ಆಗಿದೆ.

ಮತ್ತೊಂದು ವಿಚಾರ ಏನು ಎಂದರೆ, ಗಡ್ಡ ಬಿಟ್ಟಿರುವ ಹುಡುಗರು ಬುದ್ಧಿವಂತರಾಗಿರುತ್ತಾರೆ ಎನ್ನುವುದು ಹುಡುಗಿಯರಿಗೆ ಅನ್ನಿಸುವ ಮತ್ತೊಂದು ವಿಚಾರ ಆಗಿದೆ. ಹಾಗೆಯೇ ಗಡ್ಡಗಳಲ್ಲಿ ಬೇರೆ ಬೇರೆ ರೀತಿ ಇದ್ದು, ಅವುಗಳು ಕೂಡ ಹುಡುಗಿಯರನ್ನು ಸೆಳೆಯುತ್ತದೆ.

ಜೊತೆಗೆ ಗಡ್ಡ ಬಿಟ್ಟಿರುವ ಹುಡುಗರು ಗಂಭೀರ ಸ್ವಭಾವದವರಾಗಿರುತ್ತಾರೆ, ಸ್ಟ್ರಾಂಗ್ ಆಗಿರುತ್ತಾರೆ ಎಂದು ಹುಡುಗಿಯರ ನಂಬಿಕೆ. ಈ ಎಲ್ಲಾ ಕಾರಣಗಳಿಂದ ಗಡ್ಡ ಬಿಟ್ಟ ಹುಡುಗರನ್ನೇ ಹುಡುಗಿಯರು ಹೆಚ್ಚು ಇಷ್ಟಪಡುತ್ತಾರೆ . ಇದನ್ನೂ ಓದಿ ಈ ಊರಿನಲ್ಲಿ ತಂದೆಯೇ ಮಗಳನ್ನ ಮದುವೆ ಆಗ್ತಾರೆ.. ಇದೆಂಥ ವಿಚಿತ್ರ ಪದ್ಧತಿ ಅಷ್ಟಕ್ಕೂ ಇದು ಯಾವ ಊರಲ್ಲಿ ಗೊತ್ತಾ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!