tomoto price Central Govt taken Good Steps: ಟೊಮೆಟೊ ಬೆಲೆ ಗಗನಕ್ಕೇರಿರುವುದು ಎಲ್ಲರಿಗೂ ಗೊತ್ತು ಇದು ಬಡವರಿಗೆ ಸಂಕಷ್ಟದ ಪರಿಸ್ಥಿತಿ ಉಂಟು ಮಾಡಿದೆ. ಟೊಮೆಟೊ ಬೆಳೆಯ ಹಾನಿಯಿಂದಾಗಿ ಇದರ ಬೆಲೆ ಹೆಚ್ಚಾಗಿದೆ. ಮಾನ್ಸೂನ್ ಮಳೆಯ ಕಾರಣದಿಂದಾಗಿ ಟೊಮೆಟೊ ಇಳುವರಿ ಕಡಿಮೆಯಾಗಿದೆ ಆಗುತ್ತದೆ ಇದು ರೈತರಿಗೂ ತುಂಬಾ ಪರಿಣಾಮ ಬೀರಿದೆ.

ಅಡಿಗೆ ಮಾಡಲು ಬೇಕಾಗುವ ಮುಖ್ಯವಾದ ತರಕಾರಿಯೇ ಟೊಮೆಟೊ ಆದರೆ ಅದರ ಬೆಲೆ ಗಗನಕ್ಕೇರಿರುವುದರಿಂದ ಮಹಿಳೆಯರಿಗೆ ಅಡುಗೆ ಮಾಡುವುದು ಯೋಚನೆಯಾಗಿದೆ. ಇಂತಹ ಪರಿಸ್ಥಿತಿಯನ್ನು ಸರಿ ಮಾಡಬೇಕೆಂದು ಕೇಂದ್ರ ಸರ್ಕಾರವು ವ್ಯಾನ್ ಮೂಲಕ ನಿಗದಿತ ಬೆಲೆಯಲ್ಲಿ ಮಾರಾಟ ಮಾಡುವ ನಿರ್ಧಾರ ಮಾಡಿಕೊಂಡಿದೆ ಇದು ಸಾಮಾನ್ಯ ಜನರಿಗೆ ತುಂಬಾ ಉಪಯೋಗವಾಗುತ್ತದೆ.

ಟೊಮೆಟೊಗೆ ದೆಹಲಿಯಲ್ಲಿ Kgಗೆ 178 ರೂ. ಆಗಿರುವುದು ನೀವು ನೋಡಿರಬಹುದು ಅಷ್ಟೇ ಅಲ್ಲದೆ ಅತಿ ಹೆಚ್ಚು ಬೆಲೆ ನೀವು ಉತ್ತರ ಪ್ರದೇಶದ ಹಾಪುರದಲ್ಲಿ 250 ರೂ. ಮಾರಾಟವಾಗಿದೆ. ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (NCCF ) ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಕೇಂದ್ರದ ಪರವಾಗಿ ಮೊಬೈಲ್ ವ್ಯಾನ್‌ಗಳ ಮೂಲಕ ಟೊಮೆಟೋ ಮಾರಾಟ ಮಾಡಲು ಮುಂದಾಗಿವೆ.

tomoto price Central Govt taken Good Steps

ರೈತರ ಬೆಳೆ ನಾಶವಾಗಿರುವ ಕಾರಣ ಟೊಮೆಟೊ ಕೊರತೆಯಿಂದಾಗಿ ಅದರ ಬೆಲೆ ಏರಿಕೆಯಾಗಿದೆ ಆದರೆ ಇದು ರೈತರ ಮೇಲೆ ಬಹಳ ಪರಿಣಾಮ ಬೀರುತ್ತದೆ. ಏಕೆಂದರೆ ಬೆಳೆ ನಾಶವಾಗಿರುವ ಕಾರಣ ಎಷ್ಟೋ ಜನ ರೈತರು ನಷ್ಟವನ್ನು ಅನುಭವಿಸುತ್ತಾರೆ. ಅಷ್ಟೇ ಅಲ್ಲದೆ ಮುಂದಿನ ದಿನಗಳಲ್ಲಿ ಟೊಮೆಟೋ ಬೆಲೆ ಕಡಿಮೆಯಾಗುತ್ತದೆ. ಆಗ ರೈತರು ಅವರು ಬೆಳೆದಂತಹ ಬೆಳೆಯನ್ನು ಕಡಿಮೆ ಬೆಲೆಗೆ ಕೊಡುವುದರಿಂದ ಅವರಿಗೆ ನಷ್ಟ ಉಂಟಾಗುತ್ತದೆ.

ದೇಶದ ವಿವಿಧ ಭಾಗಗಳಲ್ಲಿ ವ್ಯಾನ್ ಮೂಲಕ ಟೊಮೆಟೊ ವ್ಯಾಪಾರ ಪ್ರಾರಂಭಗೊಂಡಿದೆ. ಇದರಲ್ಲಿ ನಿಮಗೆ ಮಾರುಕಟ್ಟೆಗಿಂತ ಸ್ವಲ್ಪ ಕಮ್ಮಿ ಬೆಲೆಗೆ ಸಿಗುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಸಹಾ ಟ್ವೀಟ್ ಮಾಡಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!