ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕರ ಲಾಭಗಳಿವೆ ಅನ್ನೋದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಸಾವಿರಕ್ಕೂ ಹೆಚ್ಚು ಪ್ರಕಾರ ರೋಗಗಳನ್ನು ತಡೆಗಟ್ಟಬಹುದು. ಇದರಲ್ಲಿ ಹಲವಾರು ಔಷಧೀಯ ಗುಣಗಳಿವೆ. ಬೆಳ್ಳುಳ್ಳಿಯಿಂದ ಏನಾದರೂ ತೊಂದರೆ ಆಗುತ್ತದೆ ಎಂದು ಹೇಳಿದರು ಆದರೆ ಒಂದೇ ಒಂದು ಮಾತ್ರ ಅದು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದ ನಂತರ ಬಾಯಿಯಲ್ಲಿ ವಾಸನೆ ಬರುವುದು ಅಷ್ಟೇ.
ಬೆಳ್ಳುಳ್ಳಿಯನ್ನು ಯಾವ ಪ್ರಕಾರದಲ್ಲಿ ಹೇಗೆ ಸೇವಿಸಿದರೆ ನಮ್ಮ ಆರೋಗ್ಯಕ್ಕೆ ಲಾಭ ದೊರೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಬೆಳ್ಳುಳ್ಳಿಯನ್ನು ಸೇವನೆ ಮಾಡುವ ಸುಲಭ ವಿಧಾನ ಎಂದರೆ ಊಟ ಮಾಡುವ 15 ನಿಮಿಷದ ಮೊದಲು ಬೆಳ್ಳುಳ್ಳಿಯನ್ನು ಸೇರಿಸಬೇಕು. ಬೆಳ್ಳುಳ್ಳಿ ಯಲ್ಲಿ ಆಂಟಿಆಕ್ಸಿಡೆಂಟ್ ಗುಣ ಇರುವುದರಿಂದ ಇದು ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ಒಂದು ವೇಳೆ ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಬೆಳ್ಳುಳ್ಳಿ ಸೇವನೆಯಿಂದ ಆರಾಮ ಎನಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಅಂದರೆ ಊಟಕ್ಕೂ 15 ನಿಮಿಷ ಮೊದಲು ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ಪಚನ ಶಕ್ತಿ ಹೆಚ್ಚುತ್ತದೆ. ಇದರಿಂದ ಆಸಿಡಿಟಿ, ಗ್ಯಾಸ್, ಮಲಬದ್ಧತೆ ಅಂತಹ ಸಮಸ್ಯೆ ಇದ್ದರೆ ಊಟಕ್ಕೆ 15 ನಿಮಿಷ ಮೊದಲು ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ.
ಬೆಳ್ಳುಳ್ಳಿ ನಮ್ಮನ್ನು ಚಿಕ್ಕ ಮತ್ತು ದೊಡ್ಡ ಬ್ಯಾಕ್ಟರಿಯ ಇನ್ಫೆಕ್ಷನ್ ಗಳಿಂದ ರಕ್ಷಿಸುತ್ತದೆ. ಹಸಿ ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸದಾಕಾಲ ಆರೋಗ್ಯದಿಂದ ಇರಬಹುದು. ಡಿಪ್ರೆಶನ್ ಅಂತಹ ಗಂಭೀರ ಸಮಸ್ಯೆ ಇದ್ದಾಗಲೂ ಸಹ ಅದನ್ನು ನಿವಾರಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ರೋಗವನ್ನು ಬರೆದಿರುವ ಹಾಗೂ ತಡೆಗಟ್ಟಲು ಸಹಾಯ ಮಾಡುತ್ತದೆ. ಮಳೆಗಾಲ ಮತ್ತು ಚಳಿಗಾಲದ ಸಂದರ್ಭದಲ್ಲಿ ಜ್ವರ ನ್ಯೂಮೋನಿಯ ಇಂತಹ ರೋಗಗಳು ಉಂಟಾಗುವುದು ಸಾಮಾನ್ಯ ಈ ಸಮಸ್ಯೆಯನ್ನು ತಡೆಗಟ್ಟಲು ಬೆಳ್ಳುಳ್ಳಿಯನ್ನು ಉಪಯೋಗಿಸಬಹುದು. ಇದಕ್ಕಾಗಿ ಬೆಳ್ಳುಳ್ಳಿಯನ್ನು ಗ್ಯಾಸ್ ಸ್ಟೋವ್ ಮೇಲೆ ಇಟ್ಟು ಸ್ವಲ್ಪ ಬಣ್ಣ ಬದಲಾಗುವವರೆಗೂ ಸುಟ್ಟು ನಂತರ ಅದನ್ನು ಸೇವಿಸಬೇಕು. ಒಬ್ಬ ಮನುಷ್ಯನಿಗೆ ಪ್ರತಿನಿತ್ಯ ಆಯ್ದ ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದು ಒಳ್ಳೆಯದು ಇದರಿಂದ ಎಲ್ಲಾ ರೋಗಗಳನ್ನು ತಡೆಗಟ್ಟಬಹುದು.
ನಿಮಗೆ ಈ ಆರೋಗ್ಯಕರ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ. ಅಷ್ಟೇ ಅಲ್ಲದೆ ನಮ್ಮ ಪುಟವನ್ನು ಪ್ರೋತ್ಸಾಹಿಸಿ ಬೆಂಬಲಿಸಿ ಶುಭವಾಗಲಿ