ಪ್ರತಿ ಮನುಷ್ಯನಿಗೂ ಅರೋಗ್ಯ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ, ಆದ್ದರಿಂದ ಉತ್ತಮವಾದ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನಿಮಗೆ ಗೊತ್ತಿರುವ ಪ್ರಕಾರ ಬಂಟಿಯರಲ್ಲಿ ಎದೆಹಾಲು ಅತಿ ಮುಖ್ಯವಾದದ್ದು ಯಾಕೆಂದರೆ ಮಗುವಿನ ಬೆಳವಣಿಗೆಗೆ ತಾಯಿಯ ಎದೆಹಾಲು ಬೇಕಾಗುತ್ತದೆ. ಕೆಲವರಲ್ಲಿ ಎದೆಹಾಲು ಬರದೇ ಇರುವ ಸಮಸ್ಯೆ ಇನ್ನು ಕೆಲವರಲ್ಲಿ ಎದೆಹಾಲು ಕಡಿಮೆ ಬರಬಹುದು ಆಗಾಗಿ ಆರೋಗ್ಯದ ದೃಷ್ಟಿಯಿಂದ ಈ ಲೇಖನವನ್ನು ನೋಡಿ.
ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುವ ಬಸಳೆ ಸೊಪ್ಪು: ಹೌದು ಒಂದು ಹಿಡಿಯಷ್ಟು ಬಸಳೆಸೊಪ್ಪನ್ನು ಶುದ್ಧವಾಗಿ, ಚನ್ನಾಗಿ ಅರೆದು ಒಂದು ಲೋಟ ಹಸುವಿನ ಹಾಲಿನೊಂದಿಗೆ ಬೆರಸಿ ಬೆಳಗಿನ ಹೊತ್ತು ಕುಡಿಯುತ್ತ ಬಂದರೆ ನಾಲ್ಕೈದು ದಿನಗಳಲ್ಲಿ ಬಾಣಂತಿಯರಲ್ಲಿ ಎದೆಹಾಲು ಹೆಚ್ಚಾಗಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ದೆ ಬಸಳೆ ಸೊಪ್ಪು ಸೇವನೆಯಿಂದ ಪ್ರತಿ ಮನುಷ್ಯನಿಗೂ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ.
ಒಂದಿಷ್ಟು ಟಿಪ್ಸ್: ಬೆಳ್ಳುಳ್ಳಿಯನ್ನು ನಿಂಬೆಹಣ್ಣಿನ ರಸವನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸುತ್ತಾ ಬಂದರೆ ಸಂದಿವಾತ ಸಮಸ್ಯೆ ದೂರವಾಗುತ್ತದೆ. ಹಸಿವು ಆಗೋದಿಲ್ಲ ಅನ್ನೋರಿಗೆ ಈ ಟಿಪ್ಸ್ ಊಟ ಮಾಡುವ ಅರ್ಧ ಗಂಟೆಯ ಮೊದಲು ಎಲೆ ಅಡಿಕೆಯನ್ನು ಜಗಿದು ತಿನ್ನುವುದರಿಂದ ಹಸಿವು ಹೆಚ್ಚಾಗುತ್ತದೆ.
ಮೂತ್ರ ಸಂಬಂದಿ ತೊಂದರೆಗಳಿಗೆ ಮನೆಮದ್ದು: ಮೂಲಂಗಿಯನ್ನು ರುಬ್ಬಿ, ಅದರ ರಸವನ್ನು ತಗೆದು ಪ್ರತಿದಿನವೂ ಬೆಳಗ್ಗೆ ಆರು ಚಹಾ ಚಮಚದಷ್ಟು ಸೇವಿಸುತ್ತಾ ಬಂದರೆ ಮೂತ್ರ ಸಂಬಂಧಿ ತೊಂದರೆಗಳೆಲ್ಲವೂ ತೊಲಗುತ್ತದೆ. ಇನ್ನು ಇದೆ ರೀತಿ ಆರೋಗ್ಯದ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ಪೇಜ್ ಅನ್ನು ಪ್ರೋತ್ಸಾಹಿಸಿ ಧನ್ಯವಾದಗಳು ಶುಭವಾಗಲಿ