Petrol Diesel Price: ಕಚ್ಚಾತೈಲ ಬೆಲೆ ಇಳಿಕೆ ಹಾಗೂ ತೈಲ ಕಂಪನಿಗಳು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಸದ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಗಳ ಬೆಲೆ (Petrol Diesel Price) ಇಳಿಕೆ ಆಗುವ ಸಾಧ್ಯತೆ ಇದೆ ಎಂದು ಕೆಲವು ಮೂಲಗಳು ತಿಳಿಸಿವೆ. ತೈಲ ರಪ್ತು ಮಾಡುವ ರಾಷ್ಟ್ರಗಳಿಂದ ಆಮದು ಕ್ಷೀಣಿಸಿದ್ದು ರಷ್ಯಾದಿಂದ ಹೆಚ್ಚಿನ ಕಚ್ಚಾತೈಲಗಳನ್ನು ಪಡೆಯುತ್ತಿರುವ ಭಾರತವು ಲಾಭ ಪಡೆಯುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರವು ಗಣನೀಯವಾಗಿ ಕುಸಿತ ಕಂಡಿದೆ. ಇದಕ್ಕೆ ಸಂಬಂಧಿಸಿದ ಹಾಗೆ ಪೆಟ್ರೋಲ್ (petrol) ಮತ್ತು ಡೀಸೆಲ್ (diesel) ಇವುಗಳ ದರವನ್ನು ಕಡಿಮೆ ಮಾಡುವ ಮೂಲಕ ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರವು ಒಂದು ಶುಭ ಸುದ್ದಿಯನ್ನು ನೀಡುತ್ತಿದೆ ಎಂದು ಹೇಳಬಹುದು. ಈ ಮೂಲಕ ಇದರ ಲಾಭವನ್ನು ಜನಸಾಮಾನ್ಯರಿಗೆ ವರ್ಗಾಯಿಸಲು ಕೇಂದ್ರ ಸರ್ಕಾರವು ತೀರ್ಮಾನ ಮಾಡಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೊಡ್ಡ ಮಟ್ಟದಲ್ಲಿ ಅಥವಾ ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಳೆದ ಆರ್ಥಿಕ ವರ್ಷದ ಆರಂಭದಲ್ಲಿ ತೈಲ ಕಂಪನಿಗಳು ನಷ್ಟದಲ್ಲಿ ಇದ್ದವು. ಆದರೆ ಕಳೆದ ಎರಡು ತ್ರೈಮಾಸಿಕಗಳಲ್ಲಿ ಈ ನಷ್ಟಗಳನ್ನು ತೈಲ ಕಂಪನಿಗಳು ತುಂಬಿಕೊಂಡಿದ್ದವು.
ಮೂರನೆಯ ತ್ರೈಮಾಸಿಕದಲ್ಲಿ ತೈಲ ಕಂಪನಿಗಳು ಅಲ್ಪ ಲಾಭವನ್ನು ಗಳಿಸಿವೆ. ಮಾರ್ಚ್ ನಲ್ಲಿ ಅಂತ್ಯಗೊಂಡ ಕೊನೆಯ ತ್ರೈಮಾಸಿಕದಲ್ಲಿ ಕಂಪನಿಗಳು ಹೆಚ್ಚಿನ ಲಾಭವನ್ನು ಗಳಿಸಿವೆ. ಜನವರಿ ಇಂದ ಮಾರ್ಚ್ ವರೆಗೆ ಕಚ್ಚಾ ತೈಲಗಳ ಬೆಲೆಯು 80 ಡಾಲರ್ ಆಸು ಪಾಸಿನಲ್ಲಿ ಇದ್ದಿತ್ತು. ಮೇ ತಿಂಗಳ ವೇಳೆಗೆ 75 ಡಾಲರ್ ಗಿಂತಲೂ ಕೆಳಗೆ ಇಳಿದಿದೆ. ಕಳೆದ ವರ್ಷ ಜೂನ್ ನಲ್ಲಿ ಪ್ರತೀ ಬ್ಯಾರಲ್ ಗೆ 116 ಡಾಲರ್ ಇದ್ದ ಕಚ್ಚಾ ತೈಲಗಳ ದರವು ಈಗ ಭಾರೆ ಇಳಿಕೆ ಕಂಡಿದ್ದು ಇದರ ಲಾಭವನ್ನು ಜನರಿಗೆ ಅಥವಾ ಗ್ರಾಹಕರಿಗೆ ವರ್ಗಾವಣೆ ಮಾಡಿದ್ದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಇವುಗಳ ದರ ದೊಡ್ಡ ಮಟ್ಟದಲ್ಲಿ ಇಳಿಕೆ ಆಗಿದೆ.
2022 ರಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ (Indian oil corporation) ಪ್ರತೀ ಲೀಟರ್ ಗೆ ಪೆಟ್ರೋಲ್ ಅನ್ನು ಪ್ರತೀ ಲೀಟರ್ ಗೆ 16 ರೂಪಾಯಿ ಮತ್ತು ಡೀಸೆಲ್ ಅನ್ನು ಪ್ರತೀ ಲೀಟರ್ ಗೆ 23 ರೂಪಾಯಿ ನಷ್ಟದಲ್ಲಿ ಮಾರಾಟ ಮಾಡಿತ್ತು.
ಮೇ ತಿಂಗಳಿನಿಂದ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 13 ರೂಪಾಯಿ ಮತ್ತು ಪ್ರತೀ ಲೀಟರ್ ಡೀಸೆಲ್ ಮೇಲೆ 12 ರೂಪಾಯಿ ಲಾಭವನ್ನು ಗಳಿಸುತ್ತಿದೆ ಎನ್ನಲಾಗಿದೆ. ಕಚ್ಚಾ ತೈಲಗಳ ಪ್ರತೀ ಬ್ಯಾರಲ್ ಗೆ 2022 ರ ಮಾರ್ಚ್ ನಲ್ಲಿ 139 ಡಾಲರ್ ನಷ್ಟು ಇತ್ತು. ಈಗ 2023 ರ ಜೂನ್ ನಲ್ಲಿ 75 ಡಾಲರ್ ಅಷ್ಟು ಕುಸಿತ ಕಂಡಿದೆ. ಈ ಕಾರಣದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಇವುಗಳ ದರವು ದೊಡ್ಡ ಪ್ರಮಾಣದಲ್ಲಿ ಇಳಿಕೆ ಆಗಿದೆ. ಡೀಸೆಲ್ ಇನ್ನೂ ಪ್ರತೀ ಲೀಟರ್ ಗೆ 2 ರಿಂದ 3 ರೂಪಾಯಿ ಅಷ್ಟು ಕಡಿಮೆ ಆಗಲಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ Ration Card: ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಗುಡ್ ನ್ಯೂಸ್, ರೇಷನ್ ನಲ್ಲಿ ಮಹತ್ವದ ಬದಲಾವಣೆ