ಹಿಂದಿನ ಕಾಲದಲ್ಲಿ ಒಂದು ಮಾತಿತ್ತು ನಾವು ಮಾಡಿದ ಪಾಪವನ್ನು ನಮ್ಮ ಮಕ್ಕಳು ಅಥವಾ ನಮ್ಮ ಮುಂದಿನ ಪೀಳಿಗೆ ಅದರ ಫಲವನ್ನು ಅನುಭವಿಸುತ್ತಾರೆ ಎಂದು ಆದರೆ ಈಗ ಕಾಲ ಬದಲಾಗಿದೆ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ನಾವು ಮಾಡಿದ ಪಾಪದ ಫಲವನ್ನು ನಾವೇ ಅನುಭವಿಸಬೇಕು. ಇದಕ್ಕೆ ಉತ್ತಮ ಉದಾಹರಣೆ ಎಂದರೆ “ಬೇಬಿ ಶಾಮಿಲಿ” ಅರೇ ಏನಿದು ಬೇಬಿ ಶಾಮಿಲಿ ಹೆಸರು ಈಗ ಯಾಕೆ ಬಂತು? ಏನು ನಡೆದಿದೆ ಅನ್ನೋ ಕುತೂಹಲ ಇದ್ಯಾ? ಇಲ್ಲಿದೆ ನೋಡಿ ಉತ್ತರ.
ಬೇಬಿ ಶಾಮಿಲಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಆ ಒಂದು ಮುದ್ದಾದ ಮುಖ. ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದಿದ್ದ ಬೇಬಿ ಶಾಮಿಲಿ ಆಗಿನ ಕಾಲದಲ್ಲೇ ದೊಡ್ಡ ದೊಡ್ಡ ಸ್ಟಾರ್ ನಟರಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಆದರೆ ಬೆಳೆದು ದೊಡ್ಡವಳಾದ ನಂತರ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಶಾಮಿಲಿ ಅವರಿಗೆ ಅಷ್ಟೊಂದು ಏನೂ ಪ್ರಸಿದ್ಧಿ ಸಿಗಲಿಲ್ಲ ಯಾವುದೇ ಚಿತ್ರಗಳಲ್ಲಿ ಗೆಲುವು ಸಿಗಲೇ ಇಲ್ಲ. ಬದಲಾಗಿ ಸೋಲನ್ನೇ ಕಂಡರು. ತೆಲಗು ಭಾಷೆಯ ಚಿತ್ರವಾದ ಒಯ್ಯ್ ಚಿತ್ರದ ಮೂಲಕ ನಾಯಕ ನಟಿಯಾಗಿ ಪಾದಾರ್ಪಣೆ ಮಾಡಿದ ಅವರಿಗೆ ಈ ಚಿತ್ರ ದೊಡ್ಡ ಬೇಸರವನ್ನು ಉಂಟು ಮಾಡಿತ್ತು. ಇದಕ್ಕೆ ಕಾರಣ ಚಿತ್ರದ ಸೋಲು ಮತ್ತು ಶಾಮಿಲಿಯ ಲುಕ್ ಬಗ್ಗೆ ನೆಗೆಟಿವ್ ಕಾಮೆಂಟುಗಳು ಬರಲು ಆರಂಭಿಸಿದವು.
ಇದರಿಂದ ಬೇಸತ್ತ ಶಾಮಿಲಿ ತನಗೆ ಪ್ರಪಂಚಬೇ ಬೇಡ ಅನ್ನುವಷ್ಟರ ಮಟ್ಟಿಗೆ ಡಿಪ್ರೆಷನ್ ಗೆ ಹೊಗಿದ್ದರು. ನಂತರ ತಮಿಳಿನ ಕೆಲವೊಂದು ಚಿತ್ರಗಳಲ್ಲಿ ಸಹ ನಟಿಸಿದರು. ಅವರ ದುರಾದೃಷ್ಟ ಎಂಬಂತೆ ತಮಿಳಿನಲ್ಲಿ ಕೂಡಾ ಯಾವ ಚಿತ್ರವೂ ಅವರ ಕೈ ಹಿಡಿಯಲಿಲ್ಲ. ಮೊದಲೇ ಬೇಸತ್ತಿದ್ದ ಶಾಮಿಲಿ ಇದರಿಂದ ಮತ್ತಷ್ಟು ಕುಗ್ಗಿ ಹೋಗಿ ಹುಚ್ಚಿಯಂತೆ ಆಡಲು ಶುರು ಮಾಡಿದ್ದರು. ಆಕೆಯ ನಡವಳಿಕೆಯನ್ನು ನೋಡಿ ಯಾರೂ ಕೂಡ ಚಿತ್ರವನ್ನು ಮಾಡಳು ಮುಂದೆ ಅವಕಾಶವನ್ನು ನೀಡಲಿಲ್ಲ. ಯಾಕಂದ್ರೆ ಬೇಸರದಿಂದ ಸರಿಯಾದ ಹೇಳಿದ ಸಮಯಕ್ಕೆ ಸರಿಯಾಗಿ ಶೂಟಿಂಗಿಗೆ ಹೋಗುತ್ತಾ ಇರಲಿಲ್ಲ. ಮಾತಾಡಿಸಿದ್ದರೂ ಕೂಡಾ ಸರಿಯಾದ ಪ್ರತಿಕ್ರಿಯೆಯನ್ನೂ ನೀಡುತ್ತಿರಲಿಲ್ಲ. ಶಾಮಿಲಿಯ ನಡವಳಿಕೆ ಮತ್ತು ಆಕೆ ಸೆಟ್ ನಲ್ಲಿ ಮಾಡುವ ಬೇಡಿಕೆಗಳಿಗಾಗಿ ಹಲವಾರು ಚಿತ್ರಗಳು ಆಕೆಯ ಕೈ ತಪ್ಪಿ ಹೋದವು. ಶಾಮಿಲಿ ದೊಡ್ಡವಳಾದ ಮೇಲೆ ನಟಿಸಿದ್ದು ಕೇವಲ ನಾಲ್ಕೇ ನಾಲ್ಕು ಚಿತ್ರಗಳಲ್ಲಿ ಎಂದರೆ ನಂಬಲೇಬೇಕಾದ ಸತ್ಯ ಅದು. ಈಗ ಸಿನಿಮಾಗಳೇ ಇಲ್ಲದೆ ಕಾಲಿ ಕೈ ನಲ್ಲಿ ಕೂತಿದ್ದಾರೆ. ನಂತರದ ದಿನಗಳಲ್ಲಿ ಈ ನಟಿಗೆ ಇನ್ನೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಬೇರೆ ಯಾರನ್ನೋ ಮದುವೆ ಆಗುತ್ತಾರೆ ಎಂದು ವದಂತಿ ಕೇಳಿ ಬಂದಿತ್ತು. ಈ ಸುದ್ಧಿ ಕೇಳಿ ಬಂದ ಬೆನ್ನಲ್ಲೇ ಮತ್ತೇ ತನ್ನ ಇನ್ನೊಂದು ಮುಖ ತೋರಿದ ಶಾಮಿಲಿ ಇವೆಲ್ಲ ರಂಪಾಟ ಜಂಜಾಟಗಳನ್ನು ಎಲ್ಲಾ ಬಿಟ್ಟು ಹೊರದೇಶದಲ್ಲಿ ಸೆಟ್ಟಲ್ ಆಗಿದ್ದ್ದರೆ ಇನ್ಸು ಸುದ್ಧಿ ಇದೆ. ಸಣ್ಣ ವಯಸ್ಸಿನಲ್ಲಿಯೇ ಬೇಬಿ ಶಾಮಿಲಿ ಆಗಿ ಎಲ್ಲರಿಗೂ ಇಷ್ಟ ಆಗುತ್ತಿದ್ದ ಈ ಹುಡುಗಿ ದೊಡ್ಡವಳಾದ ಮೇಲೆ ಹೀಗೆ ಆಗಿದ್ದು ಯಾಕೆ ಎಂಬುದು ಎಲ್ಲರಲ್ಲೂ ಅಚ್ಚರಿ ಮೂಡಿಸುವ ಸಂಗತಿ ಆಗಿದೆ.