Chanakya Neeti about Women Love: ಚಾಣಾಕ್ಯನೆಂಬ ಹೆಸರನ್ನು ಕೇಳದವರು ಯಾರಿದ್ದಾರೆ ಹೇಳಿ. ಚಾಣಾಕ್ಯನು (Chanakya) ತನ್ನ ಬುದ್ಧಿವಂತಿಕೆಯಿಂದ ಜಗತ್ಪ್ರಸಿದ್ಧಿಯನ್ನು ಪಡೆದಂತವನು. ಯಾರನ್ನಾದರೂ ನಾವು ಬುದ್ಧಿವಂತರು ಎಂದು ಹೊಗಳುವುದಾದರೆ ಅವರನ್ನು ಚಾಣಾಕ್ಯನಿಗೆ (Chanakya) ಹೋಲಿಸುತ್ತೆವೆ. ಅಶೋಕನಂತಹ ಚಕ್ರವರ್ತಿಯನ್ನು ತಯಾರಿಸಿದ ಕೀರ್ತಿಗೆ ಚಾಣಾಕ್ಯ ಪಾತ್ರನಾಗಿದ್ದಾನೆ. ಇವನು ತನ್ನ ಬುದ್ದಿ, ಕುಟಿಲತೆಗಳಿಂದ ಎಲ್ಲರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ ಸಾಮ್ರಾಜ್ಯವನ್ನು ಕಟ್ಟುವ ಕಲೆ ಇವನಿಗೆ ಒಲಿದಿತ್ತು.
Chanakya Neeti about Women Love
ಇಂತಹ ಚಾಣಾಕ್ಯನು (Chanakya) ಮಹಾ ಮಾತುಗಾರನಾಗಿದ್ದ. ಜನರಿಗೆ ಸತ್ಯತತ್ವಗಳನ್ನು, ನೀತಿಗಳನ್ನು ತಿಳಿ ಹೇಳುತ್ತಿದ್ದ. ಇವನ ಮಾತು ಎಂದಿಗೂ ಸುಳ್ಳಾಗಿರಲಿಲ್ಲ. ಇವನು ಕೇವಲ ರಾಜನೀತಿಯನ್ನು ಮಾತ್ರವಲ್ಲದೆ ಎಲ್ಲ ಶಾಸ್ತ್ರಗಳಲ್ಲಿಯು ಪಾರಂಗತನಾಗಿದ್ದ ಕಾರಣ, ಇವನ ಮಾತಿನಲ್ಲಿ ಅನುಭವದ ಸಾರ ತುಂಬಿ ಇರುತ್ತಿತ್ತು. ಹಾಗಾಗಿ ಜನರು ಸಹ ಇವನ ಮಾತುಗಳನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದರು. ಯಾರು ಚಾಣಾಕ್ಯನ ಮಾತುಗಳನ್ನು ಪಾಲಿಸುತ್ತಾರೋ ಅಂತವರಿಗೆ ಮೋಸ, ವಂಚನೆಗಳು ಎಂದಿಗೂ ಬಾಧಿಸುವುದೇ ಇಲ್ಲ.
ಈ ಚಾಣಾಕ್ಯ (Chanakya) ಮುನಿಯ ಮಾತುಗಳು ಎಂದಿಗೂ ಹಳೆಯದಾಗುವುದೆ ಇಲ್ಲ. ಎಲ್ಲ ಕಾಲ ಮಿತಿಗಳಲ್ಲಿಯೂ ಇವನ ಉಪದೇಶಗಳು ಹೊಂದುತ್ತವೆ. ಎಲ್ಲ ರೀತಿಯ ಜನರಿಗೂ ಸಹ ಇವನ ಮಾತುಗಳು ಅನ್ವಯವಾಗುವಂತೆ ತನ್ನ ಅನುಭವಗಳನ್ನು ಹೇಳಿದ್ದಾನೆ. ಚತುರ ಚಾಣಕ್ಯನು ಹೆಣ್ಣಿನ ಬಗ್ಗೆ, ಅವಳ ಮನಸ್ಸಿನ ಏರಿಳಿತದ ಬಗ್ಗೆ ಬಹಳಷ್ಟು ಕಟುವಾದ ಮಾತುಗಳನ್ನು ಹೇಳಿದ್ದಾನೆ. ಇವುಗಳನ್ನು ನಂಬಲು ಅಸಾಧ್ಯ ಎನಿಸಿದರೂ ಬದುಕಿನಲ್ಲಿ ಇವು ನಿಜವಾಗುತ್ತವೆ. ಹಾಗಾಗಿ ಚಾಣಾಕ್ಯನ ನೀತಿಗಳನ್ನು ಎಂದಿಗೂ ಮರೆಯಬಾರದು. ಹಾಗಿದ್ದರೆ ಆ ಮಾತುಗಳು ಯಾವವು ಗೊತ್ತೆ?
ಚಾಣಾಕ್ಯ ಹೆಂಗಸಿನ ಬಗ್ಗೆ ಹೇಳಿದ ನೀತಿಗಳಲ್ಲಿ ಮೊದಲನೆಯದು, ಹೆಣ್ಣು ಒಬ್ಬನೊಡನೆ ಮಾತನಾಡುತ್ತಿದ್ದರೆ ಇನ್ನೊಬ್ಬನನ್ನು ನೋಡುತ್ತಾ ಇರುತ್ತಾಳೆ. ಹಾಗೆ ಮತ್ತೊಬ್ಬ ವ್ಯಕ್ತಿಯ ಬಗ್ಗೆ ಹೃದಯದಲ್ಲಿ ಚಿಂತಿಸುತ್ತಾಳೆ. ಹೀಗಾಗಿ ಸ್ತ್ರೀಯು ಒಬ್ಬನನ್ನೇ ಪ್ರೀತಿಸಲು ಸಾಧ್ಯವೇ ಇಲ್ಲ ಎಂದು ಚಾಣಾಕ್ಯ ತನ್ನ ಮಾತುಗಳಲ್ಲಿ ತಿಳಿಸುತ್ತಾನೆ. ಈ ಮಾತು ಕೇಳಲು ಕೊಂಚ ಕಟುವಾದರು ಸತ್ಯವಾಗಿದೆ. ಇದಿಷ್ಟೇ ಅಲ್ಲ ಎಂತಹ ಹೆಣ್ಣನ್ನು ಮದುವೆಯಾಗಬೇಕು ಎನ್ನುವುದನ್ನು ಸಹ ಚಾಣಾಕ್ಯ ತಿಳಿಸುತ್ತಾನೆ.
ಮದುವೆಯ ವಿಷಯದಲ್ಲಿ ಚಾಣಾಕ್ಯ ನುಡಿಯುವುದೇನಂದರೆ, ಗಂಡಸು ಬುದ್ಧಿಶಾಲಿಯಾದವನು ಮದುವೆಯಾಗಬೇಕಾದರೆ ಅಷ್ಟೇನು ರೂಪಸಿಯಲ್ಲದಿದ್ದರು ಅಂಗವಿಕಲೆಯಾದರೂ ಸರಿ ಉತ್ತಮ ಮನೆತನದ ಕನ್ಯೆಯೊಡನೆ ವಿವಾಹ ಆಗಬೇಕು. ಆದರೆ ಯಾವುದೇ ಕಾರಣಕ್ಕೂ ತನಗಿಂತ ಕೆಳಮಟ್ಟದ ಕುಟುಂಬದಿಂದ ಬಂದಂತಹ ಸುಂದರಿ ಹೆಣ್ಙನ್ನು ಮದುವೆಯಾಗಲೇಬಾರದು ಎಂದಿದ್ದಾನೆ. ವಿವಾಹವೆಂಬುದು ಸಮಾಜದ ಸಮಾನ ಅಂತಸ್ಥಿನ ಜನರ ನಡುವೆ ಮಾತ್ರ ನಡೆಯಬೇಕು ಎಂದು ಚಾಣಕ್ಯನ ನೀತಿ ಹೇಳುತ್ತದೆ.
ಪತ್ನಿ ಹಾಗೂ ಸ್ನೇಹಿತರನ್ನು ಹೇಗೆ ಆರಿಸಿಕೊಳ್ಳಬೇಕು? ಇವರ ಮನಸ್ಥಿತಿಯನ್ನು ಹೇಗೆ ಅರಿಯಬೇಕು ಎನ್ನುವುದನ್ನು ಚಾಣಾಕ್ಯ ತನ್ನ ನೀತಿಗಳಲ್ಲಿ ಬಹಳವೇ ಸರಳವಾಗಿ ವಿವರಿಸಿದ್ದಾನೆ. ಅದೇನೆಂದರೆ, ದುಷ್ಟಳಾದ ಹೆಂಡತಿ, ತೋರಿಕೆಯ ಸ್ನೇಹಿತ, ವಾಚಾಳಿ ಸೇವಕ ಮತ್ತು ಹಾವು ಇರುವ ಮನೆಯಲ್ಲಿ ವಾಸ ಮಾಡುವುದು ಸಾವಿಗೆ ಸಮಾನವಾದದ್ದು ಎಂದು ಹೇಳುತ್ತಾನೆ. ದುಷ್ಟಳಾದ ಹೆಂಡತಿಯೊಂದಿಗೆ ಬಾಳ್ವೆ ಮಾಡುವುದು ಒಂದೇ ಹಾವಿರುವ ಮನೆಯಲ್ಲಿ ವಾಸ ಮಾಡುವುದು ಒಂದೇ ಎಂದು ಚಾಣಾಕ್ಯ ಹೇಳಿದ್ದಾನೆ.
ಇದನ್ನೂ ಓದಿ..Marriage Couples: ಪ್ರತಿಯೊಬ್ಬ ಹೆಂಡತಿಯು ತನ್ನ ಗಂಡನಿಗೆ ಈ 5 ವಿಷಯಗಳನ್ನು ಹೇಳುವುದಿಲ್ಲವಂತೆ ಇದು ನಿಜವೇ?
ಪವಿತ್ರಳು, ಪತಿವ್ರತೆಯೂ, ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೇ ನಿಜವಾದ ಸತಿಯೆಂದು ಚಾಣಾಕ್ಯ ಪತ್ನಿಯು ರೂಪುರೇಷೆಗಳನ್ನು ವರ್ಣಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಚಾಣಾಕ್ಯನೇನು ಸ್ತ್ರೀ ದ್ವೇಷಿಯಲ್ಲ. ಸ್ತ್ರೀಯನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದನ್ನು ಸಹ ಚಾಣಾಕ್ಯ ಪುರುಷರಿಗೆ ತಿಳಿಸಿದ್ದಾನೆ. ಪತ್ನಿಯ ಮನಸ್ಸು ನೋಯಿಸದೆ ಆಕೆಯಿಂದ ಪಡೆಯುವ ಸುಖವೇ ನಿಜವಾದ ಸುಖ. ಆಕೆ ನೀಡುವ ಊಟವೇ ಮೃಷ್ಟಾನ್ನ ಹಾಗೂ ಆಕೆಯಿಂದ ಅತಿಯಾಗಿ ಸುಖವನ್ನು ಬಯಸಬಾರದು ಎಂದು ಚಾಣಾಕ್ಯ ಪುರುಷರಿಗೆ ಹೇಳುತ್ತಾನೆ. ಚಾಣಾಕ್ಯನ ಈ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಗೊಂದಲವೆಂಬುದು ಇರುವುದೇ ಇಲ್ಲ.